ಈ ಹೇಳಿಕೆಯೊಂದಿಗೆ, ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಬಲ್ಲೆ ಎಂಬ ವಿಶ್ವಾಸವನ್ನು ಅ್ಯಂಡರ್ಸನ್ ತಿಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ವೇಗಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅ್ಯಂಡರ್ಸನ್ ದಿ ಹಂಡ್ರೆಡ್ ಲೀಗ್ ಅಥವಾ ಇತರೆ ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.