- Kannada News Photo gallery Countdown to Varamahalakshmi festival Readymade Lakshmi's in market demand increased kannada news
ಹೆಣ್ಮಕ್ಕಳ ಅಚ್ಚುಮೆಚ್ಚಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಕೌಂಟ್ ಡೌನ್; ಮಾರ್ಕೆಟ್ಗೆ ಬಂದ್ರು ರೆಡಿಮೆಡ್ ಲಕ್ಷ್ಮಿಯರು, ಫೋಟೋಸ್ ಇಲ್ಲಿವೆ
ಆಷಾಢಮಾಸ ಮುಗಿದು ಶ್ರಾವಣ ಮಾಸ ಬಂದೇ ಬಿಡ್ತು. ಶ್ರಾವಣ ಮಾಸ ಹಲವು ಹಬ್ಬಗಳನ್ನು ಹೊತ್ತು ತಂದಿದೆ. ಅದ್ರಲ್ಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಮಾರ್ಕೆಟ್ಗೆ ರೆಡಿಮೆಡ್ ಲಕ್ಷ್ಮೀಯರು ಲಗ್ಗೆಯಿಟ್ಟಿದ್ದಾರೆ. ಬ್ಯೂಸಿ ಮಹಿಳೆಯರಿಗಾಗಿಯೇ ಬೆಂಗಳೂರು ಮಾರ್ಕೆಟ್ ಗೆ ರೆಡಿಮೆಡ್ ವರಮಹಾಲಕ್ಷ್ಮೀಯರು ಎಂಟ್ರಿಕೊಟ್ಟಿದ್ದಾರೆ.
Updated on: Aug 14, 2024 | 3:10 PM

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ 16 ರಂದು ನಾಡಿನೆಲ್ಲೆಡೆ ಹೆಂಗಳೆಯರ ನೆಚ್ಚಿನ ಹಬ್ಬವನ್ನು ಆಚರಿಸಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬದಂದು ಜಗವ ಕಾಯೋ ಜಗನ್ಮಾತೆ ಲಕ್ಷ್ಮಿಯನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ, ಅಲಂಕಾರ ಮಾಡಿ ಪೂಜಿಸುತ್ತಾರೆ. ಅಷ್ಟ ಸೌಭಾಗ್ಯಗಳ ಒಡತಿಯ ಅಲಂಕಾರವನ್ನು ನೋಡೋದೇ ಚೆಂದ. ಆದ್ರೇ ರಾಜಧಾನಿ ಬೆಂಗಳೂರಿನ ಕೆಲ ಮಂದಿಗೆ ಮೊದಲಿನ ತರ ದೇವಿಯನ್ನು ಅಲಂಕಾರ ಮಾಡಲು ಸಮಯವಿಲ್ಲ.

ಬ್ಯೂಸಿ ವರ್ಕ್ ಶೆಡ್ಯೂಲ್ ಗೆ ವಗ್ಗಿದ್ದಾರೆ. ಇಂತಹ ಬ್ಯೂಸಿ ಮಹಿಳೆಯರಿಗಾಗಿಯೇ ಬೆಂಗಳೂರು ಮಾರ್ಕೆಟ್ ಗೆ ರೆಡಿಮೆಡ್ ವರಮಹಾಲಕ್ಷ್ಮೀಯರು ಎಂಟ್ರಿಕೊಟ್ಟಿದ್ದಾರೆ. ಹಬ್ಬದಂದು ಮನೆ ಕೆಲಸ, ಊಟ ಹಾಗೂ ಮಕ್ಕಳ ತಯಾರಿ ನಡುವೆ ಬಿಡುವು ಸಿಗೋದಿಲ್ಲ. ಈ ರೆಡಿಮೆಡ್ ಲಕ್ಷ್ಮಿಯರಿಂದ ಸಮಯದ ಉಪಯೋಗವಾಗಲಿದೆ ಅಂತಾರೆ ಮಹಿಳೆಯರು.

ಈ ರೆಡಿಮೆಡ್ ಲಕ್ಷ್ಮಿಯರ ಬೆಲೆ 500 ರೂಪಾಯಿಯಿಂದ 20 ಸಾವಿರದವರೆಗೆ ವಿವಿಧ ಅಲಂಕಾರಗಳಲ್ಲಿ ಇದೆ. ಈ ರೆಡಿಮೆಡ್ ಲಕ್ಷ್ಮಿಯರಿಗೆ ಸೀರೆ ಹಾಗೂ ಅಲಂಕಾರ ಸಹ ಮಾಡಲಾಗಿರುತ್ತದೆ. ಜೊತೆಗೆ ಲಕ್ಷ್ಮಿ ಕೂರಿಸಲು ಬೇಕಾದ ಲೋಟಸ್, ಲಕ್ಷ್ಮೀಯ ಅಲಂಕಾರಕ್ಕಾಗಿ ಆರ್ಚ್, ನವಿಲುಗಳು, ಆನೆ, ಕಿರೀಟದ ಆರ್ಚ್, ಹೂ ಮಾಲೆ, ನೆಕ್ಲೇಸ್, ಸ್ಟೋನ್ ಲಾಂಗ್ ಹಾರ, ಕಾಸಿನ ಹಾರ, ಹಸ್ತಪಾದ, ಪ್ಲೇನ್ ಗೋಲ್ಡ್ ಹಸ್ತಪಾದಗಳನ್ನು ಸಹ ಲಕ್ಷ್ಮೀಯರಿಗೆ ತೊಡಿಸಲಾಗಿರುತ್ತದೆ.

ಫ್ಯಾನ್ಸಿ ಬಾಳೆಗೊನೆ ಹಾಗೂ ಬಾಳೆಕಂಬಗಳು ಸಹ ಇರಲಿದ್ದು, 80 %ರಷ್ಡು ಈ ವರ್ಷ ಬೇಡಿಕೆ ಜಾಸ್ತಿಯಾಗಿದೆ. ಬೇರೆ ಬೇರೆ ರಾಜ್ಯಗಳಿಂದ ರಫ್ತು ಮಾಡಿಕೊಳ್ಳುತ್ತಿದ್ದು, ರೆಡಿಮೆಡ್ ಲಕ್ಷ್ಮಿಯರ ಬೇಲೆಯು ಈ ಬಾರಿ ದುಬಾರಿಯಾಗಿ ಹೋಗಿದೆ.

ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಈಗ ರೆಡಿಮೆಡ್ ಲಕ್ಷ್ಮೀಯರದೇ ಹವಾ ಜೋರಾಗಿದ್ದು, ಇನ್ನು ಎರಡು ದಿನಗಳ ಕಾಲ ಲಕ್ಷ್ಮಿ ಫುಲ್ ಡಿಮ್ಯಾಂಡ್ ಇದೆ. ಈ ವರ್ಷ ರೆಡಿಮೆಡ್ ಲಕ್ಷ್ಮಿಯರು ವರಮಹಾಲಕ್ಷ್ಮಿಯಂದು ಎಲ್ಲರ ಮನೆಯಲ್ಲಿ ವಿಜೃಂಭಿಸಲಿದ್ದಾರೆ.



