
ಭಾರತೀಯ ವಾಯು ಸೇನೆ (Indian Air Force) ಭಾರತೀಯ ಸಶಸ್ತ್ರ ಪಡೆಗಳ ನಿರ್ಣಾಯಕ ಅಂಗವಾಗಿದೆ. ದೇಶ ರಕ್ಷಣೆಯಲ್ಲಿ, ದೇಶದ ಶೌರ್ಯದ ಸಂಕೇತವಾಗಿರುವ ವಾಯುಸೇನೆಯ ಪಾತ್ರ ಅಪಾರ. ಇತ್ತೀಚಿಗಷ್ಟೇ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ನಡೆಸುವ ಮೂಲಕ ನಾವೆಷ್ಟು ಬಲಿಷ್ಠರು ಎಂಬುದನ್ನು ಜಗತ್ತಿಗೆ ತಿಳಿಸಿದೆ. ಹೀಗೆ 1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ. ಈ ವಾಯುಸೇನೆಯ ಸಂಸ್ಥಾಪನಾ ವಾರ್ಷಿಕೋತ್ಸವವನ್ನು ಪ್ರತಿವರ್ಷ ಅಕ್ಟೋಬರ್ 8 ರಂದು ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ಪ್ರಾರಂಭವಾಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯದ ನಂತರ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು. 1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ. 1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್ (ಯೋಧರಿಗೆ) ಗೌರವ ಸಲ್ಲಿಸಲು ಪ್ರತಿವರ್ಷ ಅಕ್ಟೋಬರ್ 08 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಭಾರತೀಯ ವಾಯುಪಡೆಯು ತನ್ನ 93 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್‌ಗಳನ್ನು ಗೌರವಿಸಲಾಗುತ್ತೆ. ಅಲ್ಲದೆ ಈ ದಿನ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮೂಲಕ ಹೊರಗಿನ ಪ್ರಂಚಕ್ಕೆ ವಿಶೇಷವಾಗಿ ಭಾರತದ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: ಇಂದು ವಿಶ್ವ ಹತ್ತಿ ದಿನ; ರೈತರ ಬದುಕಿನ ಆಧಾರ ಈ ಬಿಳಿ ಬಂಗಾರ
ಭಾರತೀಯ ವಾಯುಪಡೆ ಎಷ್ಟು ಬಲಿಷ್ಠವಾಗಿದೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ