AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರ ಪ್ರಕಾರ ಗಂಡ-ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ ಗೊತ್ತಾ?

ಆಚಾರ್ಯ ಚಾಣಕ್ಯರು ಯಶಸ್ವಿ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಲಹೆ, ಮಾರ್ಗದರ್ಶನವನ್ನು ನೀಡಿರುವಂತೆ ದಾಂಪತ್ಯ ಜೀವನದ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಹೌದು, ದಾಂಪತ್ಯ ಜೀವನ ಚೆನ್ನಾಗಿರಲು ಗಂಡ ಹೆಂಡತಿ ಹೇಗಿರಬೇಕು, ಏನು ಮಾಡಬೇಕು ಎಂಬುದನ್ನೆಲ್ಲಾ ತಿಳಿಸಿದ್ದಾರೆ. ಮುಖ್ಯವಾಗಿ ಗಂಡ ಹೆಂಡತಿ ಹೊಂದಾಣಿಕೆಯಿಂದ ಬಾಳ್ವೆ ನಡೆಸುವಲ್ಲಿ ವಯಸ್ಸಿನ ಅಂತರವೂ ಪ್ರಮುಖ ಪಾತ್ರವನ್ನು ವಹಿಸುವ ಕಾರಣ, ವಯಸ್ಸಿನ ಅಂತರ ಹೆಚ್ಚು ಬೇಡ, ಇಷ್ಟಿದ್ದರೆ ಸಾಕು ಎನ್ನುತ್ತಾರೆ ಚಾಣಕ್ಯ. ಈ ಕುರಿತ ಸಂಪೂರ್ಣ ಸ್ಟೋರಿ ಇಲ್ಲಿದೆ ನೋಡಿ.

Chanakya Niti: ಚಾಣಕ್ಯರ ಪ್ರಕಾರ ಗಂಡ-ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ ಗೊತ್ತಾ?
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Oct 08, 2025 | 5:12 PM

Share

ಪ್ರೀತಿ, ಮದುವೆಯಲ್ಲಿ ವಯಸ್ಸಿನ ಅಂತರ (Age gap) ಮುಖ್ಯವಾಗುವುದಿಲ್ಲ ಎಂಬುದು ಕೆಲವರ ವಾದ. ಆದರೆ ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ವಯಸ್ಸಿನ ಅಂತರ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಚಾಣಕ್ಯ. ವಯಸ್ಸಿನ ಅಂತರ ವೈವಾಹಿಕ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವ ಕಾರಣ ಗಂಡು ಹೆಣ್ಣನ್ನು ಹುಡುಕುವಾಗ ವಯಸ್ಸಿನ ಅಂತರ ಎಷ್ಟಿದೆ ಎಂಬುದನ್ನು ಮೊದಲು ಪರೀಕ್ಷಿಸಬೇಕು. ಈ ವಿಚಾರವನ್ನು ಕಡೆಗಣಿಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತಂತೆ. ಹಾಗಿದ್ರೆ ಚಾಣಕ್ಯರು ಹೇಳುವಂತೆ ಗಂಡ ಹೆಂಡತಿಯ ನಡುವಿನ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ, ಒಂದು ವೇಳೆ ಹೆಚ್ಚು ಏಜ್‌ ಗ್ಯಾಪ್‌ ಇದ್ರೆ ಏನೆಲ್ಲಾ ಸಮಸ್ಯೆಗಳು ತಲೆದೋರಬಹುದು ಎಂಬ ವಿಚಾರವನ್ನು ತಿಳಿಯಿರಿ.

ಗಂಡ ಹೆಂಡತಿಯ ವಯಸ್ಸಿನ ಅಂತರದ ಬಗ್ಗೆ ಚಾಣಕ್ಯ ಏನು ಹೇಳುತ್ತಾರೆ?

ಚಾಣಕ್ಯರ ಪ್ರಕಾರ ಗಂಡ ಮತ್ತು ಹೆಂಡತಿಯ ನಡುವೆ ಎಂದಿಗೂ ಹೆಚ್ಚು ವಯಸ್ಸಿನ ಅಂತರ ಇರಬಾರದು. ಇದು ಅವರ ನಡುವೆ ಸೈದ್ಧಾಂತಿಕ ವ್ಯತ್ಯಾಸಗಳಿಗೆ ಕಾರಣವಾಗಬಹುದು, ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸ ಕಡಿಮೆಯಾದಷ್ಟೂ ಅವರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು, ದಾಂಪತ್ಯ ಜೀವನವೂ ಚೆನ್ನಾಗಿರುತ್ತದೆ.

ಗಂಡ ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.  ಉದಾಹರಣೆಗೆ 20-25 ವರ್ಷ ವಯಸ್ಸಿನ ಹುಡುಗಿ ತನ್ನ ತಂದೆಯ ವಯಸ್ಸಿನ ಹುಡುಗನನ್ನು ಮದುವೆಯಾಗಬಾರದು. ಇಂತಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ದೃಷ್ಟಿಯಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಬಹಳ ಮುಖ್ಯ. ಇಬ್ಬರ ನಡುವೆ ದೊಡ್ಡ ಮಟ್ಟದ ವಯಸ್ಸಿನ ವ್ಯತ್ಯಾಸವಿದ್ದರೆ, ಜೀವನದಲ್ಲಿ ಒಂದಷ್ಟು  ಸಮಸ್ಯೆಗಳು ತಲೆದೋರುತ್ತವೆ.

ಇದನ್ನೂ ಓದಿ
Image
ಅಪ್ಪಿತಪ್ಪಿಯೂ ಈ ಐದು ಸ್ಥಳಗಳಿಗೆ ಕಾಲಿಡಬೇಡಿ
Image
ಹೆಣ್ಣು ಮಕ್ಕಳ ತಂದೆಯಾದವನು ಈ ಕೆಲಸಗಳನ್ನು ಎಂದಿಗೂ ಮಾಡಬಾರದು
Image
ಯಶಸ್ಸು ಗಳಿಸಲು ಪಾಲಿಸಬೇಕಾದ ನಿಯಮಗಳಿವು
Image
ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ

ಗಂಡ ಹೆಂಡತಿ ನಡುವೆ 3-5 ವರ್ಷಗಳ ಅಂತರವಿದ್ದರೆ ಸಾಕು:

ಗಂಡ ಹೆಂಡತಿಯ ನಡುವಿನ ಸಂಬಂಧವು ಅತ್ಯಂತ ಪವಿತ್ರವಾದದ್ದು. ಈ ಬಂಧವನ್ನು ಕಾಪಾಡಿಕೊಳ್ಳಲು, ಇಬ್ಬರ ನಡುವೆ ಹೊಂದಾಣಿಕೆ ಅಗತ್ಯ. ಆದರೆ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಯೋಚಿಸುವ ಬಗೆ, ಮಾತನಾಡುವ ಶೈಲಿ, ಚಿಂತನೆ ಪ್ರತಿಯೊಂದು ವಿಷಯದಲ್ಲೂ ದೊಡ್ಡ ಮಟ್ಟದ ವ್ಯತ್ಯಾಸ ಕಾಣಿಸುತ್ತದೆ ನಂತರ ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ದಾಂಪತ್ಯ ಜೀವನ ಚೆನ್ನಾಗಿರಬೇಕು, ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಇರಬೇಕು ಎಂದಾದರೆ 3 ರಿಂದ 5 ವರ್ಷ ವಯಸ್ಸಿನ ಅಂತರವಿದ್ದರೆ ಸಾಕು, ಒಂದೇ ವಯಸ್ಸಿನ ಜನರು ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ, ಇದರಿಂದಾಗಿ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಹೆಣ್ಣು ಮಕ್ಕಳ ತಂದೆಯಾದವನು ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯ

ವಯಸ್ಸಿನ ಅಂತರ ಹೆಚ್ಚಿದ್ದರೆ ಏನಾಗುತ್ತದೆ?

ಭಿನ್ನಾಬಿಪ್ರಾಯಗಳಿಗೆ ಕಾರಣವಾಗಬಹುದು: ಚಾಣಕ್ಯ ನೀತಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರ ನಡುವೆ ದೊಡ್ಡ ವಯಸ್ಸಿನ ವ್ಯತ್ಯಾಸವು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. 20 ವರ್ಷದ ಹುಡುಗಿ 40 ವರ್ಷದ ಪುರುಷನನ್ನು ಮದುವೆಯಾದರೆ, ಇವರಿಬ್ಬರ ಮನಸ್ಥಿತಿಯಲ್ಲೂ ತುಂಬಾ ವ್ಯತ್ಯಾಸಗಳಿರುತ್ತದೆ. ಅವಳ ಆದ್ಯತೆಗಳು ಸಣ್ಣ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ, ಆದರೆ ಪತಿ ಅದನ್ನು ಕಡಿಮೆ ಅಂದಾಜು ಮಾಡಬಹುದು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಆರಂಭಿಸುತ್ತದೆ.

ಹೊಂದಾಣಿಕೆಯ ಕೊರತೆ: ಆಚಾರ್ಯ ಚಾಣಕ್ಯರ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರವು ತುಂಬಾ ಹೆಚ್ಚಿದ್ದರೆ, ಅವರ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ಉದಾಹರಣೆಗೆ, 40 ವರ್ಷಕ್ಕಿಂತ ಮೇಲ್ಪಟ್ಟ ಗಂಡನು ತನ್ನ ಜೀವನವನ್ನು ಬಹಳ ಪ್ರಾಯೋಗಿಕ ರೀತಿಯಲ್ಲಿ ನೋಡುತ್ತಾನೆ. ಹೆಂಡತಿ 20 ರಿಂದ 25 ವರ್ಷದವಳಾಗಿದ್ದರೆ, ಅವಳು ಪ್ರಾಯೋಗಿಕವಾಗಿ ಯೋಚಿಸುವುದಕ್ಕಿಂತ ಭಾವನಾತ್ಮಕವಾಗಿ ಹೆಚ್ಚು ಯೋಚಿಸುತ್ತಾಳೆ, ಇದು ಅವರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ