AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Air Force Day 2025: ದೇಶದ ಶೌರ್ಯದ ಸಂಕೇತ ವಾಯುಪಡೆ; ಭಾರತೀಯ ವಾಯುಸೇನೆ ಎಷ್ಟು ಶಕ್ತಿಶಾಲಿ ಎಂದು ತಿಳಿಯಿರಿ

ಇಂದು ಭಾರತೀಯ ವಾಯುಪಡೆಯ 93 ನೇ ಸಂಸ್ಥಾಪನಾ ವಾರ್ಷಿಕೋತ್ಸವ. ಪ್ರತಿ ವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯ ಧೈರ್ಯಶಾಲಿ ಪೈಲಟ್‌ಗಳು ಅದ್ಭುತ ವೈಮಾನಿಕ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಮೆರವಣಿಗೆಗಳು, ಫ್ಲೈಪಾಸ್ಟ್‌ಗಳು ಮತ್ತು ಆಧುನಿಕ ಫೈಟರ್ ಜೆಟ್‌ಗಳ ಪ್ರದರ್ಶನಗಳು ನಡೆಯುತ್ತವೆ. ಸೈನಿಕರ ಶೌರ್ಯ, ಸಮರ್ಪಣೆ ಮತ್ತು ವೃತ್ತಿಪರತೆಯನ್ನು ಗೌರವಿಸಲಾಗುತ್ತದೆ. ದೇಶದ ಶೌರ್ಯದ ಸಂಕೇತವಾಗಿರುವ ಭಾರತೀಯ ವಾಯುಪಡೆ ಎಷ್ಟು ಎಂಬುದನ್ನು ತಿಳಿಯಿರಿ.

Indian Air Force Day 2025: ದೇಶದ ಶೌರ್ಯದ ಸಂಕೇತ ವಾಯುಪಡೆ; ಭಾರತೀಯ ವಾಯುಸೇನೆ ಎಷ್ಟು ಶಕ್ತಿಶಾಲಿ ಎಂದು ತಿಳಿಯಿರಿ
ಭಾರತೀಯ ವಾಯು ಸೇನಾ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on: Oct 08, 2025 | 9:42 AM

Share

ಭಾರತೀಯ ವಾಯು ಸೇನೆ (Indian Air Force) ಭಾರತೀಯ ಸಶಸ್ತ್ರ ಪಡೆಗಳ ನಿರ್ಣಾಯಕ ಅಂಗವಾಗಿದೆ.  ದೇಶ ರಕ್ಷಣೆಯಲ್ಲಿ, ದೇಶದ ಶೌರ್ಯದ ಸಂಕೇತವಾಗಿರುವ ವಾಯುಸೇನೆಯ ಪಾತ್ರ ಅಪಾರ. ಇತ್ತೀಚಿಗಷ್ಟೇ ಆಪರೇಷನ್‌ ಸಿಂಧೂರ ಕಾರ್ಯಚರಣೆಯನ್ನು ನಡೆಸುವ ಮೂಲಕ ನಾವೆಷ್ಟು ಬಲಿಷ್ಠರು ಎಂಬುದನ್ನು ಜಗತ್ತಿಗೆ ತಿಳಿಸಿದೆ. ಹೀಗೆ 1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ. ಈ  ವಾಯುಸೇನೆಯ ಸಂಸ್ಥಾಪನಾ ವಾರ್ಷಿಕೋತ್ಸವವನ್ನು ಪ್ರತಿವರ್ಷ ಅಕ್ಟೋಬರ್‌ 8 ರಂದು ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ಪ್ರಾರಂಭವಾಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಭಾರತೀಯ ವಾಯುಪಡೆಯನ್ನು ಯಾವಾಗ ಸ್ಥಾಪಿಸಲಾಯಿತು?

ಭಾರತೀಯ ವಾಯುಪಡೆಯನ್ನು  ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯದ ನಂತರ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು.   1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ.  1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್ (ಯೋಧರಿಗೆ) ಗೌರವ ಸಲ್ಲಿಸಲು ಪ್ರತಿವರ್ಷ ಅಕ್ಟೋಬರ್ 08 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಭಾರತೀಯ ವಾಯುಪಡೆಯು ತನ್ನ 93 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ  ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್‌ಗಳನ್ನು ಗೌರವಿಸಲಾಗುತ್ತೆ. ಅಲ್ಲದೆ  ಈ ದಿನ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮೂಲಕ  ಹೊರಗಿನ ಪ್ರಂಚಕ್ಕೆ ವಿಶೇಷವಾಗಿ ಭಾರತದ  ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ
Image
ರೈತರ ಬದುಕಿನ ಬಿಳಿ ಬಂಗಾರ ಈ ಹತ್ತಿ
Image
ಗುರಿ ತೋರಿದ ಗುರುಗಳನ್ನು ಮರೆಯದಿರೋಣ
Image
ನದಿಗಳು ಬರೀ ನೀರಿನ ಮೂಲವಲ್ಲ, ಪರಿಸರ ವ್ಯವಸ್ಥೆಯ ಜೀವನಾಡಿ
Image
ಮಾನವನ ಕ್ಷೇಮಕ್ಕೆ ಸುಸ್ಥಿರ, ಆರೋಗ್ಯಕರ ಪರಿಸರ ಅತ್ಯಗತ್ಯ

ಇದನ್ನೂ ಓದಿ: ಇಂದು ವಿಶ್ವ ಹತ್ತಿ ದಿನ; ರೈತರ ಬದುಕಿನ ಆಧಾರ ಬಿಳಿ ಬಂಗಾರ

ಭಾರತೀಯ ವಾಯುಪಡೆ ಎಷ್ಟು ಬಲಿಷ್ಠವಾಗಿದೆ ಗೊತ್ತಾ?

  • ಭಾರತೀಯ ವಾಯುಪಡೆಯು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ವಾಯುಪಡೆಯಾಗಿದೆ. ಇದು 1,700 ಕ್ಕೂ ಹೆಚ್ಚು ವಿಮಾನಗಳು ಮತ್ತು 1.4 ಲಕ್ಷ ಸಿಬ್ಬಂದಿಯನ್ನು ಹೊಂದಿದೆ. ಇದು ವಿಶ್ವದ ಅಗ್ರ ನಾಲ್ಕು ವಾಯುಪಡೆಗಳಲ್ಲಿ ಒಂದಾಗಿದೆ.
  • ಭಾರತೀಯ ವಾಯುಪಡೆಯು ಸುಖೋಯ್-30 ಎಂಕೆಐ, ರಫೇಲ್, ಮಿರಾಜ್-2000 ಮತ್ತು ಶತ್ರುಗಳನ್ನು ಬೆದರಿಸುವ ಸ್ಥಳೀಯ ತೇಜಸ್‌ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಹೊಂದಿದೆ.
  • ಭಾರತೀಯ ವಾಯುಪಡೆಯು ಲಡಾಖ್‌ನ ದೌಲತ್ ಬೇಗ್ ಓಲ್ಡಿಯಲ್ಲಿ 16,614 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ವಾಯುನೆಲೆಯನ್ನು ಹೊಂದಿದೆ.
  • 1947, 1965, 1971, 1999 ರ ಇಂಡೋ-ಪಾಕ್ ಯುದ್ಧಗಳು ಮತ್ತು 1962 ರ ಇಂಡೋ-ಚೀನಾ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಮಹತ್ವದ ಪಾತ್ರ ವಹಿಸಿದೆ.
  • ಭಾರತೀಯ ವಾಯುಪಡೆಯು ಆಪರೇಷನ್ ಮೇಘದೂತ್ (ಸಿಯಾಚಿನ್), ಆಪರೇಷನ್ ಸಫೇದ್ ಸಾಗರ್ (ಕಾರ್ಗಿಲ್), ಆಪರೇಷನ್ ಪೂಮಲೈ, ಆಪರೇಷನ್ ಬಾಲಕೋಟ್ ಮತ್ತು ಇತ್ತೀಚಿಗೆ ಆಪರೇಷನ್ ಸಿಂಧೂರ್‌ನಲ್ಲಿ ಕಾರ್ಯಚರಣೆಯನ್ನು ನಡೆಸುವ ಮೂಲಕ ತನ್ನ ಶಕ್ತಿ ಎಷ್ಟಿದೆ ಎಂಬುದನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದೆ.
  • ಶತ್ರು ರಾಷ್ಟ್ರಗಳಿಂದ ದೇಶವನ್ನು ರಕ್ಷಿಸುವ ಜೊತೆ ಜೊತೆಗೆ ಭಾರತೀಯ ವಾಯುಸೇನೆ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ದೇಶದೊಳಗಿನ ಜನರ ಸುರಕ್ಷತೆಯ ಕಾರ್ಯವನ್ನು ಕೂಡ ನೋಡಿಕೊಳ್ಳುತ್ತದೆ. ಹೀಗೆ ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯು ಸೇನೆ ಅದೆಷ್ಟೋ ಮಾನವೀಯ ಕಾರ್ಯಗಳನ್ನೂ ಮಾಡಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ