Chanakya Niti: ಅಪ್ಪಿತಪ್ಪಿಯೂ ಈ ಐದು ಸ್ಥಳಗಳಿಗೆ ಕಾಲಿಡಬೇಡಿ ಎನ್ನುತ್ತಾರೆ ಚಾಣಕ್ಯ
ಚಾಣಕ್ಯರು ಮನುಕುಲದ ಕಲ್ಯಾಣಕ್ಕಾಗಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ಅನುಸರಿಸುವ ಮೂಲಕ ಅತ್ಯಂತ ಸಾಮಾನ್ಯ ವ್ಯಕ್ತಿ ಕೂಡ ಯಶಸ್ವಿ ಜೀವನವನ್ನು ನಡೆಸಬಹುದು ಎನ್ನಲಾಗುತ್ತದೆ. ನೀವು ಸಹ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು, ಗೌರವದಿಂದ ಬಾಳಬೇಕು ಎಂದಾದರೆ ಆಚಾರ್ಯ ಚಾಣಕ್ಯರು ಹೇಳಿರುವ ಈ ಐದು ಸ್ಥಳಗಳಿಗೆ ಕಾಲಿಡಬೇಡಿ. ಆ ಸ್ಥಳಗಳಾದರೂ ಯಾವುದು? ಇಂತಹ ಸ್ಥಳಗಳಿಗೆ ಏಕೆ ಹೋಗಬಾರದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಯಾವುದೇ ಸ್ಥಳಕ್ಕೆ ಪ್ರಯಾಣಿಸುವ ಮೊದಲು ಅಥವಾ ಒಂದು ಸ್ಥಳದಲ್ಲಿ ವಾಸಿಸಬೇಕು ಎಂದಾದರೆ ನಮ್ಮ ಹಿತದೃಷ್ಟಿಯಿಂದ ಆ ಸ್ಥಳ ಸೂಕ್ತವೇ ಎಂದು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ನಂತರ ನಾವೇ ಪಶ್ಚಾತಾಪ ಪಡಬೇಕಾಗುತ್ತದೆ. ಈ ಬಗ್ಗೆ ಚಾಣಕ್ಯರು (Chanakya) ಸಹ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ಇವರು ಒಬ್ಬ ವ್ಯಕ್ತಿ ಸರಿಯಾದ ದಾರಿಯಲ್ಲಿ ಸಾಗಿ, ಯಶಸ್ವಿ ಜೀವನವನ್ನು ಹೇಗೆ ನಡೆಸಬಹುದು ಎಂಬ ಎಲ್ಲಾ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಗೌರವದಿಂದ ಬಾಳಲು ಯಶಸ್ವಿ ಜೀವನವನ್ನು ನಡೆಸಲು ಬಯಸುವವರು ಎಂದಿಗೂ ಈ ಐದು ಸ್ಥಳಗಳಿಗೆ ಕಾಲಿಡಬೇಡಿ ಎಂದಿದ್ದಾರೆ.
ಇಂತಹ ಸ್ಥಳಗಳಿಗೆ ಎಂದಿಗೂ ಕಾಲಿಡಬೇಡಿ:
ಗೌರವ ಸಿಗದ ಸ್ಥಳ: ಗೌರವವಿಲ್ಲದ ಸ್ಥಳದಲ್ಲಿ ಉಳಿಯಬೇಡ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಅಂತಹ ಸ್ಥಳದಲ್ಲಿ ಇದ್ರೆ ಒಬ್ಬ ವ್ಯಕ್ತಿಯು ಕ್ರಮೇಣ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಬೆಲೆ ಸಿಗದಿದ್ದರೆ ಅಥವಾ ಗೌರವ ಸಿಗದಿದ್ದರೆ, ಆ ಸ್ಥಳ ನಿಮಗೆ ಸೂಕ್ತವಾದುದಲ್ಲ. ಅಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ನಿಮ್ಮ ಗೌರವ ಕಡಿಮೆಯಾಗಬಹುದು.
ಶಿಕ್ಷಣಕ್ಕೆ ಆದ್ಯತೆ ಇಲ್ಲದ ಸ್ಥಳ: ಆಚಾರ್ಯ ಚಾಣಕ್ಯರ ಪ್ರಕಾರ, ಜ್ಞಾನವೇ ಅತ್ಯಂತ ದೊಡ್ಡ ಸಂಪತ್ತು. ಶಿಕ್ಷಣಕ್ಕೆ ಬೆಲೆ ಕೊಡದ ವಾತಾವರಣದಲ್ಲಿ ಬದುಕುವುದು ವ್ಯರ್ಥ, ಏಕೆಂದರೆ ಜ್ಞಾನವಿಲ್ಲದೆ ಪ್ರಗತಿ ಅಸಾಧ್ಯ. ಶಿಕ್ಷಣಕ್ಕೆ ಬೆಲೆ ಕೊಡದ ಕಡೆ ಬೆಳಕು ಕೂಡ ಇರುವುದಿಲ್ಲ. ಹೀಗಿರುವಾಗ ಇಂತಹ ಸ್ಥಳಗಳಲ್ಲಿ ಇದ್ರೆ ನಿಮ್ಮ ಜೀವನ ಬೆಳಗುವ ಬದಲು, ಜೀವನದಲ್ಲಿ ಕತ್ತಲೆ ಆವರಿಸುತ್ತದೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ತಂದೆಯಾದವನು ಈ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಉದ್ಯೋಗಾವಕಾಶಗಳು ಇಲ್ಲದ ಸ್ಥಳ: ಜೀವನೋಪಾಯ ಮತ್ತು ಪ್ರಗತಿಗೆ ಅವಕಾಶಗಳು ಇರುವಲ್ಲಿ ವಾಸಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಎಲ್ಲಿ ಉದ್ಯೋಗಾವಕಾಶಗಳು ಇರುವುದಿಲ್ಲವೋ ಅಲ್ಲಿ ವಾಸಿಸುವುದರಿಂದ ಹಣ ಸಂಪಾದನೆಯೂ ಸಾಧ್ಯವಿಲ್ಲ, ಯಶಸ್ಸು ಗಳಿಸಲೂ ಸಾಧ್ಯವಿಲ್ಲಕೆಲಸ ಮತ್ತು ವೃತ್ತಿಯು ಜೀವನದ ಅಡಿಪಾಯ. ಜೀವನೋಪಾಯವಿಲ್ಲದೆ, ವ್ಯಕ್ತಿಯ ಭವಿಷ್ಯವು ಕತ್ತಲೆಯಾಗುತ್ತದೆ. ಇಂತಹ ಸ್ಥಳಗಳಿಗೆ ಕಾಲಿಟ್ಟರೆ ನೀವು ಬಡತನದಲ್ಲಿಯೇ ಇರಬೇಕಾಗುತ್ತದೆ.
ಕೆಟ್ಟ ಜನ, ಸಂಸ್ಕಾರದ ಕೊರತೆ ಇರುವಲ್ಲಿ: ಒಬ್ಬ ವ್ಯಕ್ತಿಯ ಒಳ್ಳೆದು ಮತ್ತು ಕೆಡುಕಿನಲ್ಲಿ ಆತನ ಸಹವಾಸವೂ ಒಳಗಗೊಂಡಿರುತ್ತದೆ. ಆತ ಒಳ್ಳೆಯವರ ಸಹವಾಸ ಮಾಡಿದರೆ ಖಂಡಿತವಾಗಿಯೂ ಆತ ಒಳ್ಳೆಯ ದಾರಿಯಲ್ಲಿ ಸಾಗುತ್ತಾನೆ. ಅದೇ ಕೆಟ್ಟವರ ಸಹವಾಸ ಮಾಡಿದರೆ ಆತನ ಜೀವನವೇ ಹಾಳಾಗುತ್ತದೆ. ಆದ್ದರಿಂದ ಎಲ್ಲಿ ಒಳ್ಳೆಯ ಜನರಿರುವುದಿಲ್ಲವೋ, ಸಂಸ್ಕಾರದ ಕೊರತೆ ಇರುತ್ತದೆಯೋ, ನಕಾರಾತ್ಮಕತೆಯೇ ತುಂಬಿರುತ್ತದೆಯೋ ಅಂತಹ ಸ್ಥಳಗಳಿಗೆ ತಪ್ಪಿಯೂ ಕಾಲಿಡಬೇಡಿ, ಇದರಿಂದ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








