Optical Illusion: ಬಾಳೆಹಣ್ಣುಗಳ ನಡುವೆ ಅಡಗಿರುವ ಹಾವನ್ನು 15 ಸೆಕೆಂಡುಗಳಲ್ಲಿ ಪತ್ತೆಹಚ್ಚಿದರೆ ನೀವೇ ಬುದ್ಧಿವಂತರು
ಆಪ್ಟಿಕಲ್ ಇಲ್ಯೂಷನ್ ಟೆಸ್ಟ್‌ಗಳು ಆರೋಗ್ಯಕರ ಮಾನಸಿಕ ವ್ಯಾಯಾಮವಾಗಿದ್ದು, ಇದು ಏಕಾಗ್ರತೆ, ದೃಷ್ಟಿ ಕೌಶಲ್ಯ, ಬುದ್ಧಿವಂತಿಕೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇಂತಹ ಸಾಕಷ್ಟು ಟೆಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಬಾಳೆ ಹಣ್ಣಿನ ರಾಶಿಯಲ್ಲಿ ಅಡಗಿರುವ ಹಾವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು 15 ಸೆಕೆಂಡುಗಳಲ್ಲಿ ಆ ಹಾವನ್ನು ಹುಡುಕಬೇಕು.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ಗಳು ಕೇವಲ ಮೋಜಿನ ಆಟಗಳಲ್ಲ. ಅವು ನಮ್ಮ ಮೆದುಳಿನ ಚುರುಕುತನವನ್ನು ಹೆಚ್ಚಿಸಲು ಸಹಾಯ ಮಾಡುವಂತಹ ಒಂದೊಳ್ಳೆ ಮಾನಸಿಕ ವ್ಯಾಯಾಮವಾಗಿದೆ. ಇಂತಹ ಆಟಗಳನ್ನು ಪ್ರತಿನಿತ್ಯ ಆಡುವ ಮೂಲಕ ನೀವು ನಿಮ್ಮ ದೃಷ್ಟಿ ಕೌಶಲ್ಯ, ಬುದ್ಧಿವಂತಿಕೆ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಸಮಸ್ಯೆ ಪರಿಹರಿಸುವ ಕೌಶಲ್ಯವನ್ನೂ ವೃದ್ಧಿಸಬಹುದು. ಇಂತಹ ಕ್ಲಿಷ್ಟಕರ ಸವಾಲಿನ ಅಟಗಳನ್ನು ಆಡುವುದೆಂದರೆ ನಿಮಗೆ ಇಷ್ಟವೇ? ಹಾಗಿದ್ರೆ ಇಲ್ಲೊಂದು ವೈರಲ್ ಆಗಿರುವ ಒಗಟಿನ ಆಟದ ಸವಾಲನ್ನು ನೀವು 15 ಸೆಕೆಂಡುಗಳ ಒಳಗೆ ಪೂರ್ಣಗೊಳಿಸಬೇಕು. ಹೌದು ಬಾಳೆಹಣ್ಣಿನ ರಾಶಿಯ ಮಧ್ಯದಲ್ಲಿ ಮರೆಯಾಗಿರುವ ಹಾವನ್ನು ಹುಡುಕುವ ಮೂಲಕ ನಿಮ್ಮ ಏಕಾಗ್ರತೆ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಬಾಳೆಹಣ್ಣಿನ ರಾಶಿಯ ಮಧ್ಯೆ ಅಡಗಿರುವ ಹಾವನ್ನು ಪತ್ತೆಹಚ್ಚಿ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೇಲ್ನೋಟಕ್ಕೆ ಬರೀ ಬಾಳೆಹಣ್ಣುಗಳು ಇರುವುದು ಕಾಣಿಸಬಹುದು. ಆದರೆ ಆ ಬಾಳೆಹಣ್ಣುಗಳ ಮಧ್ಯದಲ್ಲಿ ಒಂದು ನಿಗೂಢವಾಗಿ ಅವಿತು ಕುಳಿತಿದೆ. ಆ ಹಾವನ್ನು 15 ಸೆಕೆಂಡುಗಳಲ್ಲಿ ಹುಡುಕಿದರೆ ನೀವೇ ಜಾಣರು ಎಂದರ್ಥ. ಜೊತೆಗೆ ನೀವು ಉತ್ತಮ ಐಕ್ಯೂ ಲೆವೆಲ್ ಹೊಂದಿದ್ದೀರಿ ಎಂದರ್ಥ. ಹಾಗಿದ್ರೆ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಿ ಅಲ್ವಾ.
ಸವಾಲನ್ನು ಸ್ವೀಕರಿಸಲು ಸಿದ್ಧರೇ?
ಮೇಲ್ನೋಟಕ್ಕೆ ಈ ಚಿತ್ರದಲ್ಲಿ ನಿಮಗೆ ಬರೀ ಬಾಳೆಹಣ್ಣು ಕಾಣಿಸಬಹುದು. ಆದ್ರೆ ಅಲ್ಲೊಂದು ಹಳದಿ ಬಣ್ಣದ ಹಾವು ಕೂಡ ಮರೆಯಾಗಿದ್ದು, ಅದನ್ನು ನೀವು 15 ಸೆಕೆಂಡುಗಳ ಒಳಗೆ ಹುಡುಕಬೇಕು. ಈ ಸವಾಲನ್ನು ಪೂರ್ಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ ದೃಷ್ಟಿ ತೀಕ್ಷ್ಣತೆ, ಏಕಾಗ್ರತೆ ಇದ್ರೆ ಮಾತ್ರ ಬಾಳೆಹಣ್ಣಿನ ಮಧ್ಯೆ ಇರುವ ಹಾವನ್ನು ಕಂಡು ಹಿಡಿಯಲು ಸಾಧ್ಯ. ಹಾಗಿದ್ರೆ ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಿ ಅಲ್ವಾ. ಏಕಾಗ್ರತೆ ವಹಿಸಿ ಚಿತ್ರವನ್ನು ನೋಡಿದಿರಿ ಎಂದಾದ್ರೆ ಖಂಡಿತವಾಗಿಯೂ ಸುಲಭವಾಗಿ ಈ ಸವಾಲನ್ನು ಪೂರ್ಣಗೊಳಿಸಬಹುದು.
ಇದನ್ನೂ ಓದಿ: ತರಕಾರಿ ಗಿಡಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಿರಿ ನೋಡೋಣ
ಇಲ್ಲಿದೆ ಉತ್ತರ:
ಯಾರ ಸಹಾಯವೂ ಇಲ್ಲದೆ 15 ಸೆಕೆಂಡುಗಳಲ್ಲಿ ಹಾವನ್ನು ಹುಡುಕಿದ್ದೀರಿ ಎಂದಾದ್ರೆ ಅಭಿನಂದನೆಗಳು. ನೀವು ಉತ್ತಮ ಐಕ್ಯೂ, ಏಕಾಗ್ರತೆಯನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ. ಇಲ್ಲಿದೆ ನಿಮಗಾಗಿ ಉತ್ತರ. ಚಿತ್ರ ಎಡಭಾಗದತ್ತ ಕಣ್ಣು ಹಾಯಿಸಿ ಏಕಾಗ್ರತೆಯಿಂದ ನೋಡಿದರೆ ಹಳದಿ ಬಣ್ಣದ ಹಾವೊಂದು ಬಾಳೆಹಣ್ಣನ್ನು ಸುತ್ತಿ ಕುಳಿತಿರುವುದು ನಿಮಗೆ ಕಾಣಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








