AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲು ಉದುರುವ ಸಮಸ್ಯೆ: ಪರಿಣಾಮಕಾರಿ ಆಹಾರ ಮತ್ತು ನೈಸರ್ಗಿಕ ಪರಿಹಾರಗಳು

Patanjali's Baba Ramdev suggests foods and natural solutions to overcome hairfall problem: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಪದ್ಧತಿಯಿಂದ ಹಿಡಿದು ದಿನಚರಿಯವರೆಗೆ ಅನೇಕ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಕೂದಲು ಉದುರುವಿಕೆಯನ್ನು ಎದುರಿಸಲು ಕೆಲವು ಸರಳ ವಿಧಾನಗಳನ್ನು ಸೂಚಿಸಿದ್ದಾರೆ. ಅವನ್ನು ನೀವು ಸಹ ಅಳವಡಿಸಿಕೊಳ್ಳಬಹುದು.

ಕೂದಲು ಉದುರುವ ಸಮಸ್ಯೆ: ಪರಿಣಾಮಕಾರಿ ಆಹಾರ ಮತ್ತು ನೈಸರ್ಗಿಕ ಪರಿಹಾರಗಳು
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 07, 2025 | 2:27 PM

Share

ಯೋಗ ಗುರು ಬಾಬಾ ರಾಮದೇವ್ ತಮ್ಮ ಪತಂಜಲಿ (Patanjali) ಸಂಸ್ಥೆ ಮೂಲಕ ಪ್ರತಿ ಮನೆಗೆ ಆಯುರ್ವೇದ ಉತ್ಪನ್ನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಂತಹ ವೇದಿಕೆಗಳ ಮೂಲಕ ಆರೋಗ್ಯ, ಫಿಟ್ನೆಸ್, ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ ಎಂಬುದನ್ನು ಜನರಿಗೆ ತಿಳಿಸಿಕೊಡುತ್ತಿರುತ್ತಾರೆ. ಕೂದಲು ಉದುರುವ ಸಮಸ್ಯೆ ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಬಾಬಾ ರಾಮದೇವ್ ಅವರ ಪ್ರಕಾರ, ದೇಹದ ಉಷ್ಣತೆ, ಕಬ್ಬಿಣದ ಕೊರತೆ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಕೊರತೆ ಸೇರಿದಂತೆ ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಕೂದಲು ಉದುರುವಿಕೆ ಸಮಸ್ಯೆ ಎದುರಿಸಲು, ಅವರು ಕೆಲವು ಸರಳ ಯೋಗಾಭ್ಯಾಸಗಳನ್ನು ಸೂಚಿಸಿದ್ದಾರೆ. ಕೆಲ ಆಹಾರಗಳೂ ಕೂಡ ಈ ಸಮಸ್ಯೆಗೆ ಹೇಗೆ ಪರಿಹಾರ ನೀಡುತ್ತವೆ ಎಂಬುದನ್ನೂ ರಾಮದೇವ್ ವಿವರಿಸಿದ್ದಾರೆ.

ಕೂದಲು ಉದುರುವಿಕೆ ತಡೆಗಟ್ಟಲು ಪರಿಣಾಮಕಾರಿಯಾದ ಅನೇಕ ನೈಸರ್ಗಿಕ ವಿಧಾನಗಳಿವೆ. ಬಾಬಾ ರಾಮದೇವ್ ಅವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೇಲೆ ಒತ್ತು ಕೊಡುತ್ತಾರೆ. ವಿವಿಧ ಔಷಧಿಗಳನ್ನು ಸೇವಿಸುವುದಕ್ಕಿಂತ ನೈಸರ್ಗಿಕ ವಿಧಾನಗಳತ್ತ ಗಮನಹರಿಸಲು ಸೂಚಿಸುತ್ತಾರೆ. ಕೂದಲು ಉದುರುವಿಕೆಯನ್ನು ಎದುರಿಸಲು ಬಾಬಾ ರಾಮ್‌ದೇವ್ ಸೂಚಿಸುವ ವಿಧಾನಗಳನ್ನು ಅನ್ವೇಷಿಸೋಣ.

ಈ ಜ್ಯೂಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ

ಬಾಬಾ ರಾಮದೇವ್ ಹೇಳುವ ಪ್ರಕಾರ, ನಿಮ್ಮ ಆಹಾರದಲ್ಲಿ ಸೋರೆಕಾಯಿ ಸೇರಿಸಿಕೊಳ್ಳುವುದು ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೊತ್ತಂಬರಿ ಸೊಪ್ಪು, ಪುದೀನ ಎಲೆಗಳು ಮತ್ತು ಸ್ವಲ್ಪ ನಿಂಬೆಹಣ್ಣು ಸೇರಿಸಿ ಸೋರೆಕಾಯಿ ರಸ ತಯಾರಿಸಬಹುದು (ಅಸಿಡಿಟಿ ಇದ್ದರೆ ನಿಂಬೆಹಣ್ಣು ಸೇರಿಸುವುದನ್ನು ತಪ್ಪಿಸಿ). ಈ ರಸವನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನೂ ಓದಿ: ಹೊಟ್ಟೆ ಕಟ್ಟುತ್ತಿದೆಯಾ? ಜೀರ್ಣ ಆಗುತ್ತಿಲ್ಲವಾ? ಈ ಚೂರ್ಣ ಒಮ್ಮೆ ಪ್ರಯತ್ನಿಸಿ

ಆಮ್ಲಾ ಸೇವಿಸಿ

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಆಮ್ಲಾ ಚರ್ಮ ಮತ್ತು ಕೂದಲು ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ಕ್ಯಾಂಡಿ, ಜಾಮ್, ಜ್ಯೂಸ್ ಅಥವಾ ಪುಡಿ ಯಾವುದೇ ರೂಪದಲ್ಲಿ ಸೇವಿಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಕೂದಲು ಉದುರುವಿಕೆಯನ್ನು ತಡೆಗಟ್ಟುವಲ್ಲಿ ಮತ್ತು ಕೂದಲಿನ ಬಲವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಬಾಬಾ ರಾಮದೇವ್ ಅವರ ವಿಡಿಯೋ

ಈ ಪ್ರಾಣಾಯಾಮ ಮಾಡುವುದರಿಂದ ಪ್ರಯೋಜನವಿದೆ

ಯೋಗವು ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅನುಲೋಮ-ವಿಲೋಮ ಪ್ರಾಣಾಯಾಮವು ನಿಮ್ಮ ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ದೇಹದ ಆಂತರಿಕ ಕಾರ್ಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸರ್ವೈಕಲ್ ಸ್ಪಾಂಡಿಲೈಟಿಸ್, ಗರ್ಭಕಂಠದ ನೋವು ನಿವಾರಿಸಲು ಉಪಯುಕ್ತ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ

ಬಾಬಾ ರಾಮದೇವ್ ಅವರ ಪ್ರಕಾರ, ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಂಡು ಸಮತೋಲಿತ ಜೀವನಶೈಲಿಯನ್ನು ಅನುಸರಿಸುವ ಮೂಲಕ, ಕೂದಲು ಉದುರುವಿಕೆಯ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

ಹಳೆಯ ಕಾಲದ ಪ್ರಾಕೃತಿಕ ಪರಿಹಾರ

ಹಿಂದಿನ ಕಾಲದಲ್ಲಿ ಜನರು ಸೌಂದರ್ಯ ಉತ್ಪನ್ನಗಳ ಬದಲಿಗೆ ರಾಸಾಯನಿಕ ಮುಕ್ತವಾದ ಮತ್ತು ನೈಸರ್ಗಿಕವಾದ ಪದಾರ್ಥಗಳನ್ನು ತಮ್ಮ ಕೂದಲಿಗೆ ಬಳಸುತ್ತಿದ್ದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಇತ್ತು. ಈಗ ಮತ್ತೆ ಅಂಥ ಅಭ್ಯಾಸ ಅಳವಡಿಸಿಕೊಳ್ಳುವುದು ಉತ್ತಮ. ಶಾಂಪೂ ಬದಲಿಗೆ ಆಮ್ಲಾ, ಶೀಗೆಕಾಯಿ, ರೀಥಾ ಮಿಶ್ರಣದಿಂದ ಕೂದಲನ್ನು ತೊಳೆಯಬಹುದು. ಇದರಿಂದ ಕೂದಲು ಕಪ್ಪು ಬಣ್ಣದಿಂದ ಕೂಡಿದ್ದು ದಷ್ಟಪುಷ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Tue, 7 October 25