ಸ್ವಾಮಿ ವಿವೇಕಾನಂದರು, ಡಾ ಎಪಿಜೆ ಅಬ್ದುಲ್ ಕಲಾಂ, ಡಾ.ಸರ್ವಪಲ್ಲಿ ರಾಧಾಕೃಷ್ಣನ್
ಆಷಾಢ ಮಾಸದ ಹುಣ್ಣಿಮೆಯ ದಿನ ಆಚರಿಸುವ ಶ್ರೇಷ್ಠವಾದ ಹಬ್ಬವೆಂದರೆ ಅದುವೇ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನವಾಗಿದೆ. ವೇದವ್ಯಾಸರು ಈ ದಿನವೇ ಹುಟ್ಟಿದ ಕಾರಣ ಅವರ ಜನ್ಮದಿನವು ಹೌದು. ಈ ಬಾರಿ ಗುರು ಪೂರ್ಣಿಮಾವನ್ನು ಜುಲೈ 21ರಂದು ಆಚರಣೆ ಮಾಡಲಾಗುತ್ತಿದೆ. ಸರಿ ದಾರಿಯನ್ನು ತೋರಿ ಸನ್ಮಾರ್ಗದಲ್ಲಿ ನಡೆಸಿದ ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಈಗಾಗಲೇ ಹಲವಾರು ಮಹಾನ್ ವ್ಯಕ್ತಿಗಳು ಗುರು ಹಾಗೂ ಶಿಕ್ಷಣವನ್ನು ವಿವಿಧ ರೀತಿಯಲ್ಲಿ ಬಣ್ಣಿಸಿದ್ದಾರೆ.
- ನಮ್ಮ ಬಗ್ಗೆ ಯೋಚಿಸಲು ಸಹಾಯ ಮಾಡುವವರೇ ನಿಜವಾದ ಶಿಕ್ಷಕರು – ಡಾ.ಸರ್ವಪಲ್ಲಿ ರಾಧಾಕೃಷ್ಣನ್
- ಶಿಕ್ಷಣ ಎಂಬುವುದು ಅತ್ಯುತ್ತಮವಾದ ಸ್ನೇಹಿತ ವಿದ್ಯಾವಂತನಿಗೆ ಎಲ್ಲಾ ಕಡೆಯೂ ಗೌರವ ಸಿಗಲಿದೆ ಸೌಂದರ್ಯ, ಯೌವನ ಎರಡನ್ನೂ ಮೀರಿಸುವ ಶಕ್ತಿ ಶಿಕ್ಷಣಕ್ಕಿದೆ – ಚಾಣಕ್ಯ
- ವಿದ್ಯೆ ಗುರುಗಳ ಗುರು – ಭ್ರತೃ ಹರಿ.
- ಒಂದು ದೇಶ ಭ್ರಷ್ಟಾಚಾರ ಮುಕ್ತ ಮತ್ತು ಸುಂದರ ಮನಸ್ಸುಗಳಿರುವ ರಾಷ್ಟ್ರವಾಗಿ ರೂಪುಗೊಳಿಸಲು ಮೂವರು ಪ್ರಮುಖ ಸಾಮಾಜಿಕ ಸದಸ್ಯರಾದ ತಂದೆ, ತಾಯಿ ಮತ್ತು ಶಿಕ್ಷಕರಿಂದ ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ – ಡಾ ಎಪಿಜೆ ಅಬ್ದುಲ್ ಕಲಾಂ.
- ಒಬ್ಬ ವ್ಯಕ್ತಿಯ ನಡತೆ, ಕೌಶಲ್ಯ, ಭವಿಷ್ಯನ್ನು ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು – ಎಪಿಜೆ ಅಬ್ದುಲ್ ಕಲಾಂ.
- ವಿದ್ಯಾರ್ಥಿಗೆ ಅವನ ಶಿಕ್ಷಕರೇ ನಿಜವಾದ ಪಠ್ಯ ಪುಸ್ತಕ ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ – ಮಹಾತ್ಮ ಗಾಂಧೀಜಿ.
- ಗುರುವಿಗಿಂತ ಶ್ರೇಷ್ಠವಾದ ದೇವರಿಲ್ಲ, ಗುರುವಿನ ಅನುಗ್ರಹಕ್ಕಿಂತ ಉತ್ತಮವಾದ ಲಾಭವಿಲ್ಲ, ಗುರುವಿನ ಧ್ಯಾನಕ್ಕಿಂತ ಉನ್ನತವಾದ ಸ್ಥಿತಿಯಿಲ್ಲ – ಮುಕ್ತಾನಂದ.
- ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗೃತಗೊಳಿಸುವುದು ಶಿಕ್ಷಕರ ಸರ್ವೋಚ್ಚ ಕಲೆ – ಆಲ್ಬರ್ಟ್ ಐನ್‌ಸ್ಟೈನ್
- ಶಿಕ್ಷಣವು ಈಗಾಗಲೇ ಮನುಷ್ಯನಲ್ಲಿರುವ ಪರಿಪೂರ್ಣತೆಯ ದ್ಯೋತಕವಾಗಿದೆ – ಸ್ವಾಮಿ ವಿವೇಕಾನಂದರು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ