ಇತ್ತೀಚಿನ ದಿನಗಳಲ್ಲಿ ಹೇರ್ ಕಲರಿಂಗ್ ಮಾಡುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಹೆಚ್ಚಿನವರು ಫ್ಯಾಶನ್ ಕಾರಣದಿಂದ ಹೇರ್ ಕಲರ್ ಮಾಡಿಕೊಂಡರೆ ಇನ್ನೂ ಕೆಲವರು ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಹೇರ್ ಕಲರ್ ಅಥವಾ ಡೈ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ ಎಲ್ಲರೂ ರಾಸಾಯನಿಕಯುಕ್ತ ಹೇರ್ ಕಲರ್ಗಳನ್ನೇ ಬಳಸುತ್ತಾರೆ. ಈ ಕೆಮಿಕಲ್ ಉತ್ಪನ್ನಗಳನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದರುವಿಕೆ ಸೇರಿದಂತೆ ಅನೇಕ ಕೂದಲು ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀವು ನೈಸರ್ಗಿಕ ವಿಧಾನದ ಮೂಲಕ ಕೂದಲಿಗೆ ಕಲರಿಂಗ್ ಮಾಡಬಹುದು. ಕೂದಲಿಗೆ ಗೋರಂಟಿ ಹಚ್ಚಲು ಇಷ್ಟವಿಲ್ಲದಿದ್ದರೆ ನೀವು ದಾಸವಾಳದ ಹೂವಿನ ಹೇರ್ ಕಲರಿಂಗ್ ಮಾಡಿಕೊಳ್ಳಬಹುದು. ಹಾಗಾದರೆ ಈ ಹೂವಿನಿಂದ ಹೇರ್ ಕಲರ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ
ಆಯುರ್ವೇದಲ್ಲಿ ದಾಸವಾಳವನ್ನು ಉತ್ತಮ ಔಷಧಿ ಎಂದು ಪರಿಗಣಿಸಲಾಗಿದೆ. ಶಿಲೀಂಧ್ರನಾಶಕಗಳು, ಎಮೆನೋರಿಯಾ, ಚರ್ಮವನ್ನು ಮೃದುಗೊಳಿಸುವ ಮತ್ತು ಶೀತಕ ಗುಣಗಳು ದಾಸವಾಳದ ಹೂವುಗಳಲ್ಲಿ ಕಂಡುಬರುತ್ತವೆ. ದಾಸವಾಳದ ಹೂವನ್ನು ಹಿಂದಿನಿಂದಲೂ ಕೂದಲ ರಕ್ಷಣೆಯಲ್ಲಿ ಬಳಸಲಾಗುತ್ತಿದೆ. ಮುಖ್ಯವಾಗಿ ದಾಸವಾಳ ಶುಷ್ಕತೆಯನ್ನು ಹೋಗಲಾಡಿಸಿ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹೀಗಿರುವಾಗ ದಾಸವಾಳ ಹೂವಿನಿಂದ ನೈಸರ್ಗಿಕ ಹೇರ್ ಕಲರ್ ಮಾಡುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಈ ಟಿಪ್ಸ್ ಫಾಲೋ ಮಾಡಿ
• 20 ರಿಂದ 25 ಕೆಂಪು ದಾಸವಾಳ ಹೂವು
• 1 ಲೀಟರ್ ನೀರು
• 1 ಬೀಟ್ರೂಟ್
ಮೊದಲಿಗೆ ಒಂದು ಪಾತ್ರೆಯಲ್ಲಿ 1 ಲೀಟರ್ನಷ್ಟು ನೀರನ್ನು ಹಾಕಿ ಅದನ್ನು ಚೆನ್ನಾಗಿ ಕುದಿಯಲು ಬಿಡಿ. ನೀರು ಕುದಿಯುವಾಗ ಅದಕ್ಕೆ ಸುಮಾರು 20ರಿಂದ 25 ದಾಸವಾಳ ಹೂವುಗಳನ್ನು ಹಾಕಿ. ಹಾಗೇಯೇ ಒಂದು ಬೀಟ್ರೂಟ್ ತೆಗೆದುಕೊಂಡು ಅದರ ಸಿಪ್ಪೆ ಸುಳಿದು ಸಣ್ಣ ತುಂಡುಗಳಾಗಿ ಕತ್ತರಿಸಿ ಅದೇ ನೀರಿಗೆ ಹಾಕಿ. ಹೂವು ಹಾಗೂ ಬೀಟ್ರೂಟ್ ಮೃದುವಾಗುವವರೆಗೆ ಹಾಗೂ ದಾಸವಾಳ ಕರಗುವವರೆಗೆ ನೀರನ್ನು ಕುದಿಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿ ತಣ್ಣಗಾಗಲು ಬಿಟ್ಟುಬಿಡಿ. ಬಳಿಕ ಈ ಮಿಶ್ರಣವನ್ನು ಜರಡಿಯ ಸಹಾಯದಿಂದ ಸೋಸಿಕೊಂಡು ಆ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ಸುಮಾರು 3 ರಿಂದ 4 ಗಂಟೆಗಳ ಕಾಲ ಹಾಗೇನೆ ಬಿಡಿ. ನಂತರ ಕೂದಲನ್ನು ಸ್ವಚ್ಛ ನೀರಿನಿಂದ ತೊಳೆಯಿರಿ ಈ ನೈಸರ್ಗಿಕ ಹೇರ್ ಕಲರ್ ಕೂದಲಿಗೆ ಸುಂದರ ಬಣ್ಣವನ್ನು ನೀಡಿ, ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಮಾತ್ರವಲ್ಲದೆ ಇದು ನಿಮ್ಮ ಕೂದಲನ್ನು ಬಲಗೊಳಿಸುತ್ತದೆ ಹಾಗೂ ಆರೋಗ್ಯಕರವಾಗಿರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: