International Day for Disaster Reduction 2024: ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ

| Updated By: ಅಕ್ಷತಾ ವರ್ಕಾಡಿ

Updated on: Oct 13, 2024 | 10:32 AM

ಪ್ರಕೃತಿ ಮುನಿಸಿಕೊಂಡರೆ ಮನುಷ್ಯನು ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ಮನುಷ್ಯನು ತನ್ನ ಸ್ವಾರ್ಥದಿಂದ ಪ್ರಕೃತಿಯನ್ನು ನಾಶ ಪಡಿಸುತ್ತಾನೆ. ಹೀಗಾಗಿ ಪ್ರಕೃತಿಯು ಕೂಡ ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಭೂ ಕಂಪ, ಜಲಪ್ರಳಯ ಇಂತಹ ಸಾಕಷ್ಟು ಪ್ರತ್ಯುತ್ತರವನ್ನು ನೀಡುತ್ತಲೇ ಇದೆ. ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 13 ರಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನವು ಪ್ರಾರಂಭವಾದದ್ದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

International Day for Disaster Reduction 2024: ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ
International Day for Disaster Reduction
Follow us on

ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಹಾಗೂ ಅಭಿವೃದ್ಧಿ ಹೊಂದುವುದು ಒಳ್ಳೆಯದೇ ಆದರೂ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಆತನ ಕೆಲವು ಚಟುವಟಿಕೆಗಳು ಪರಿಸರ ಸ್ನೇಹಿ ಆಗುವ ಬದಲು, ಪರಿಸರ ಮಾರಕವಾಗುತ್ತಿದೆ. ಕಾಡು ನಾಶವು ಪ್ರಕ್ರತಿಯಲ್ಲಿ ಉಷ್ಣಾಂಶ ಬರಲು ಕಾರಣವಾಗಿದೆ. ಇದರ ಪರಿಣಾಮವಾಗಿ ಹಿಮ ಪ್ರದೇಶಗಳು ಕರಗಿ ಜಲಪ್ರವಾಹವಾಗುತ್ತಿದೆ. ಅದಲ್ಲದೇ, ಭೂಕಂಪ, ಜಲಪ್ರವಾಹಗಳು, ಅತಿವೃಷ್ಟಿಗಳ ಎಚ್ಚರಿಕೆಯ ಗಂಟೆ ಮೊಳಗುತ್ತಿದ್ದರೂ ಆತನ ಸ್ವಾರ್ಥತನ ಮಾತ್ರ ನಿಂತಿಲ್ಲ. ಹೀಗಾಗಿ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 13 ರಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನ:

ಜಾಗತಿಕ ಮಟ್ಟದಲ್ಲಿ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಸದ್ದುದ್ದೇಶದಿಂದ 1989 ರಲ್ಲಿ, ಯುನೈಟೆಡ್ ನೇಷನ್ಸ್ ಪ್ರತಿ ವರ್ಷ ಅಕ್ಟೋಬರ್ ಎರಡನೇ ಬುಧವಾರದಂದು ಈ ದಿನವನ್ನು ಆಚರಿಸಲು ಘೋಷಿಸಿತು. ಆದರೆ 2009, ಡಿಸೆಂಬರ್ 21 ರಂದು ವಿಶ್ವಸಂಸ್ಥೆಯು ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 13 ರಂದು ಆಚರಿಸಲು ಘೋಷಿಸಿತು. ವಿಪತ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಪ್ರತಿ ವರ್ಷ ಅಕ್ಟೋಬರ್ 13 ರಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಮಹತ್ವ ಹಾಗೂ ಆಚರಣೆ:

ಮನುಷ್ಯನು ಸ್ವಾರ್ಥದಿಂದ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಕೃತಿಯು ಮುನಿಸಿಕೊಂಡಿದೆ. ಹೀಗಾಗಿ ವಿಪತ್ತನ್ನು ಕಡಿಮೆ ಮಾಡಲು ಮತ್ತು ಆದರಿಂದ ಎದುರಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಪ್ರಕೃತಿ ವಿಕೋಪಗಳ ಅಪಾಯವನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸಲು ಅಭಿಯಾನಗಳು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಮಕ್ಕಳು ನಿಮ್ಮ ಮೇಲೆ ಕೈ ಮಾಡುತ್ತಾರಾ? ಈ ಕೆಟ್ಟ ಅಭ್ಯಾಸಕ್ಕೆ ಹೀಗೆ ಬ್ರೇಕ್ ಹಾಕಿ

ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರ ಕೈಗೊಳ್ಳಬೇಕಾದ ಕ್ರಮಗಳು:

  • ರೇಡಿಯೋ, ಟಿವಿಯಲ್ಲಿ ಅಪಾಯ ಮುನ್ಸೂಚನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಿಮ್ಮ ಸುತ್ತ ಮುತ್ತಲಿನವರಿಗೆ ಈ ಬಗ್ಗೆ ತಿಳಿಸಿ.
  • ಸುರಕ್ಷಿತ ಆಶ್ರಯವನ್ನು ಪಡೆಯಲು ಆ ಸ್ಥಳಕ್ಕೆ ತಲುಪಲು ಸುರಕ್ಷಿತ ಮಾರ್ಗವನ್ನು ಬಳಸಿಕೊಳ್ಳಿ.
  • ಮನೆಯಲ್ಲಿ ಯಾವಾಗಲೂ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಒಂದು ತುರ್ತು ಕಿಟ್ ಸಿದ್ಧಪಡಿಸಿಕೊಳ್ಳಿ.
  • ಸುರಕ್ಷಿತ ಸ್ಥಳದಲ್ಲಿ ಮನೆಯ ಪ್ರಮುಖ ಸಲಕರಣೆಗಳು, ಆಹಾರ ಮತ್ತು ನೀರು ಹಾಗೂ ಸಾಕು ಪ್ರಾಣಿಗಳನ್ನು ಇರಿಸಿರಿ.
  • ಮನೆ ಮತ್ತು ಸುತ್ತಮುತ್ತಲಿನ ಪ್ರದೇಶ ಭದ್ರವಾಗಿದೆಯೆ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ.
  • ಮನೆಯ ಬಾಗಿಲು, ಕಿಟಕಿಗಳು, ಛಾವಣಿಗಳನ್ನು ಮತ್ತು ಗೋಡೆಗಳನ್ನು ಬೇಕೀದ್ದಲ್ಲಿ ದುರಸ್ತಿ ಮಾಡಿಕೊಳ್ಳಿ.
  • ಒಂದು ವೇಳೆ ಅಪಾಯಗಳು ಸಂಭವಿಸಿದಾಗ ಆ ತಕ್ಷಣವೇ ವಿಪತ್ತು ಸ್ಫಂದನ ಪಡೆಗಳಿಗೆ ಮಾರ್ಗದರ್ಶನ ನೀಡಿ.
  • ಯಾವುದೇ ವದಂತಿಗಳನ್ನು ಹರಡುವುದು ಅಥವಾ ಕಿವಿಗೊಡದೆ ನಿಮ್ಮ ರಕ್ಷಣೆಯನ್ನು ಮೊದಲು ಮಾಡಿಕೊಳ್ಳಿ.
  • ಅಪಾಯ ಸಂಭವಿಸಿದಾಗ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಅದಷ್ಟು ಬೇಗ ಆಸ್ಪತ್ರೆಗೆ ಸಾಗಿಸುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ