International Day of Forests 2025: ಅರಣ್ಯ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 5:35 PM

ಕಾಡು ಇದ್ದರೇನೇ ನಾಡು ಎನ್ನುವ ಮಾತಿದೆ. ಕಾಡು ಇಲ್ಲದೇ ಹೋದರೆ ನಮ್ಮ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ. ಹೀಗಾಗಿ ನಮ್ಮ ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅರಣ್ಯ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

International Day of Forests 2025: ಅರಣ್ಯ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆ
ಸಾಂದರ್ಭಿಕ ಚಿತ್ರ
Follow us on

ಕಾಡು ಇದ್ದರೆ ಮಾತ್ರ ನಮ್ಮ ನಾಡು ಸಮತೋಲನದಿಂದ ಇರಲು ಸಾಧ್ಯ. ಭೂಮಿಯ ಬಹುದೊಡ್ಡ ಸಂಪತ್ತಾಗಿರುವ ಅರಣ್ಯ (Forest) ವು ಲಕ್ಷಾಂತರ ಬೆಳೆ ಬಾಳುವ ಮರ ಗಿಡಗಳನ್ನು ಒಳಗೊಂಡಿದೆ. ಅದೆಷ್ಟೋ ಜೀವರಾಶಿಗಳಿಗೆ ಆಶ್ರಯ ತಾಣವಾಗಿದೆ. ಆದರೆ ಇಂದು ಮಾನವನ ಅತಿಯಾದ ದುರಾಸೆಯಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಹೌದು, ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಿಸಿ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾನೆ. ಅರಣ್ಯನಾಶದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 21 ರಂದು ವಿಶ್ವ ಅರಣ್ಯ ದಿನ (International Day of Forests)ವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಅರಣ್ಯ ದಿನದ ಇತಿಹಾಸ

1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು. ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ವಿಸ್ತೃತವಾಗಿ ನಡೆದ ಚರ್ಚೆಯಲ್ಲಿ ವಿಶ್ವ ಅರಣ್ಯ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಆದರೆ 2012ರಲ್ಲಿ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನಗಳ ಕಾರ‍್ಯಕ್ರಮಗಳನ್ನು ನಡೆಸಿತು. ಈ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸಲು ವಿಶ್ವಸಂಸ್ಥೆಯೂ ಅನುಮತಿ ನೀಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ; ಈ ಗುಣವಿರುವ ಪುರುಷರು ಹೆಣ್ಣಿನ ಸಹವಾಸ ಮಾಡ್ಲೇಬೇಡಿ ಎನ್ನುತ್ತಾರೆ ಚಾಣಕ್ಯ

ಇದನ್ನೂ ಓದಿ
ಸುನಿತಾ ವಿಲಿಯಮ್ಸ್ ನಂತೆ ವಿಜ್ಞಾನಿಯಾಗಲು ಬಯಸುವಿರಾ? ಸಿದ್ದತೆ ಹೇಗಿರಬೇಕು?
AI ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ!
9 ವಿವಿ ಮುಚ್ಚಲ್ಲ: ಬಿಎಸ್​​ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​!

ವಿಶ್ವ ಅರಣ್ಯ ದಿನದ ಮಹತ್ವ

ಅರಣ್ಯಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದ್ದು ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಕೆಲವರು ಸಸಿಗಳನ್ನು ನೆಟ್ಟು ವಿಶ್ವ ಅರಣ್ಯ ದಿನ ಆಚರಿಸುತ್ತಾರೆ. ಇನ್ನು ಕೆಲವಡೆ ಅರಣ್ಯದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮ, ಕಾರ್ಯಗಾರಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:34 pm, Thu, 20 March 25