AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಗುಣವಿರುವ ಪುರುಷರು ಹೆಣ್ಣಿನ ಸಹವಾಸ ಮಾಡ್ಲೇಬೇಡಿ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ನಮ್ಮ ಜೀವನವನ್ನು ಸಂತೋಷ, ಸಂತೃಪ್ತಿ ಮತ್ತು ಸುಂದರಗೊಳಿಸಲು ಸಾಕಷ್ಟು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಹೆಣ್ಣನ್ನು ಕಂಡರೆ ಸಹಜವಾಗಿ ಪುರುಷರು ಆಕರ್ಷಿತರಾಗುತ್ತಾರೆ, ಪ್ರೀತಿಯಲ್ಲಿ ಬೀಳುತ್ತಾರೆ ಆದರೆ ಈ ಕೆಲವು ಪುರುಷರಿಗೆ ಮಹಿಳೆಯರಿಂದ ದೂರವಿರಿ ಎನ್ನುವ ಸಲಹೆ ನೀಡಿದ್ದಾರೆ. ಈ ಗುಣವಿರುವ ಪುರುಷರಿಗೆ ಮಹಿಳೆಯರು ಮಾರಕವಾಗಬಹುದು. ಹೀಗಾಗಿ ಮಹಿಳೆಯರ ಸಹವಾಸ ಮಾಡಬೇಡಿ ಎನ್ನುವ ಸಲಹೆ ಚಾಣಕ್ಯ ನೀಡಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti: ಈ ಗುಣವಿರುವ ಪುರುಷರು ಹೆಣ್ಣಿನ ಸಹವಾಸ ಮಾಡ್ಲೇಬೇಡಿ ಎನ್ನುತ್ತಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 20, 2025 | 10:09 AM

Share

ಗಂಡು ಹೆಣ್ಣು ಆಕರ್ಷಿತರಾಗುವುದು ಸಹಜ. ಒಂದೇ ಒಂದು ನೋಟದಲ್ಲಿಯೇ ಗಂಡು ಮಕ್ಕಳು ಪ್ರೀತಿ (Love) ಯಲ್ಲಿ ಬೀಳುತ್ತಾರೆ. ಕೆಲ ಪುರುಷರು ಮಹಿಳೆಯರ ಧ್ವನಿಗೆ ಆಕರ್ಷಿತರಾಗುತ್ತಾರೆ. ತಾನು ಮನಸಾರೆ ಪ್ರೀತಿಸುವ ಹುಡುಗಿ ಇಲ್ಲವಾದರೆ ಅಥವಾ ಕೈ ಕೊಟ್ಟರೆ ಜೀವನವೇ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ಈ ಕೆಲ ಪುರುಷರು ಮಹಿಳೆಯರಿಂದ ದೂರವಿರಲು ಆಚಾರ್ಯ ಚಾಣಕ್ಯ (Acharya Chanakya) ಸೂಚಿಸಿದ್ದಾರೆ. ಈ ಗುಣವಿರುವ ಪುರುಷರ ಬಾಳಲ್ಲಿ ಮಹಿಳೆಯರು ವಿಷವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

  • ಆರ್ಥಿಕವಾಗಿ ಸದೃಢರಲ್ಲದ ಪುರುಷರು : ಹಣವಿಲ್ಲದ ಹಾಗೂ ಆರ್ಥಿಕವಾಗಿ ಸದೃಢರಲ್ಲದ ಪುರುಷರು ಎಂದಿಗೂ ಮಹಿಳೆಯೊಂದಿಗೆ ಸಂಬಂಧ ಬೆಳೆಸುವ ಹಾಗೂ ಪ್ರೀತಿಯಲ್ಲಿ ಬೀಳುವ ಬಯಕೆಯನ್ನು ಹೊಂದಿರಬಾರದು. ಆಚಾರ್ಯ ಚಾಣಕ್ಯ ಹೇಳುವಂತೆ ಅಂತಹ ಪುರುಷರಿಗೆ ಮಹಿಳೆಯರ ಪ್ರತಿಯೊಂದು ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ಒಂದು ವೇಳೆ ಸಂಬಂಧ ಬೆಳೆಸಿದರೂ ಮೋಸ ಮಾಡುವುದೇ ಹೆಚ್ಚು. ಇಲ್ಲದಿದ್ದರೆ ಪುರುಷರು ತಮ್ಮ ಜೀವನದುದ್ದಕ್ಕೂ ಮಹಿಳೆಯರಿಂದ ನೋವು, ಅವಮಾನಗಳನ್ನು ಅನುಭವಿಸಬೇಕಾಗುತ್ತದೆ.
  • ವೃದ್ಧರು : ವೃದ್ಧರಿಗೆ ಈ ಮಹಿಳೆಯರು ವಿಷವಿದ್ದಂತೆ. ಹಣಕ್ಕಾಗಿ ಕೆಲ ಮಹಿಳೆಯರು ವೃದ್ಧರ ಹಿಂದೆ ಬೀಳುತ್ತಾರೆ. ಅವರಿಗೆ ಆ ವ್ಯಕ್ತಿಯ ನಿಜವಾದ ಪ್ರೀತಿ, ಕಾಳಜಿ ಇರುವುದಿಲ್ಲ. ಇದಕ್ಕೆ ಕಾಟನ ಈ ವೃದ್ಧರು ಮಹಿಳೆಯರು ದೈಹಿಕವಾಗಿ ಖುಷಿ ಪಡಿಸಲು ಸಾಧ್ಯವಿಲ್ಲ. ತನ್ನ ದೈಹಿಕ ಆಸೆ ಗಳನ್ನು ಈಡೇರಿಸಿಕೊಳ್ಳಲು ಮಹಿಳೆಯರು ಪರ ಗಂಡಸಿನ ಸಹವಾಸ ಮಾಡಬಹುದು. ಹೀಗಾಗಿ ವೃದ್ಧರು ಹೆಣ್ಣಿನ ಸಹವಾಸದಿಂದ ದೂರವಿರುವುದೇ ಉತ್ತಮ ಎಂದಿದ್ದಾರೆ ಚಾಣಕ್ಯ.
  • ಶಕ್ತಿಹೀನ ಪುರುಷ : ದೈಹಿಕ ಹಾಗೂ ಮಾನಸಿಕ ಶಕ್ತಿಹೀನ ಪುರುಷನು ತನ್ನ ಹೆಂಡತಿಯನ್ನು ಎರಡು ರೀತಿಯಿಂದಲೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಮಾನಸಿಕವಾಗಿ ದುರ್ಬಲವಾಗಿರುವ ಪುರುಷರು ತನ್ನವರನ್ನು ದುರ್ಬಲಗೊಳಿಸುತ್ತಾನೆ. ಈ ಗುಣವಿರುವ ವ್ಯಕ್ತಿಯೂ ಹೆಣ್ಣಿನ ಸಹವಾಸ ಮಾಡಿದರೆ ಇಬ್ಬರ ಜೀವನವು ಹಾಳಾಗುತ್ತದೆ. ಕೆಲವೊಮ್ಮೆ ಈ ಪುರುಷರಿಗೆ ಹೆಣ್ಣು ವಿಷದಂತೆಯಾಗಬಹುದು.
  • ಬುದ್ಧಿವಂತ ಪುರುಷ : ಬುದ್ಧಿವಂತ ಪುರುಷರು ಕ್ರೂರಿ ಮತ್ತು ದುಷ್ಟ ಸ್ವಭಾವದ ಮಹಿಳೆಯನ್ನು ಎಂದಿಗೂ ಪ್ರೀತಿಸಬಾರದು. ಒಂದು ವೇಳೆ ಅಂತಹ ಹೆಣ್ಣನ್ನು ಪ್ರೀತಿಸಿದರೆ ಆ ಪುರುಷನ ಶಕ್ತಿ ಮತ್ತು ಸಂಪತ್ತನ್ನು ಆಕೆಯು ಬರಿದು ಮಾಡುತ್ತಾಳೆ. ಬುದ್ಧಿವಂತ ಪುರುಷರಿಗೆ ಹೆಣ್ಣು ವಿಷವಾಗಬಹುದು, ಹೀಗಾಗಿ ಸಾಧ್ಯವಾದಷ್ಟು ಆಕೆಯ ಸಹವಾಸದಿಂದ ದೂರವಿರಿ ಎನ್ನುವ ಸಲಹೆ ನೀಡಿದ್ದಾರೆ ಚಾಣಕ್ಯ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ
Image
ಪ್ರತಿಸ್ಪರ್ಧಿಯನ್ನು ಮೀರಿಸಿ, ಕೆಲಸದ ಸ್ಥಳದಲ್ಲಿ ನಂ.1 ಆಗಲು ಚಾಣಕ್ಯನ ಸಲಹೆ
Image
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಬೆಲ್ಲದ ನೀರು ಕುಡಿದರೆ, ಈ ಬದಲಾವಣೆ
Image
ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಈ ಪ್ರಯೋಜಗಳಿವೆ
Image
ನೀವು ಮೊದಲು ಕಂಡ ಈ ಚಿತ್ರವೇ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ