Sign In

By signing in or creating an account, you agree with Associated Broadcasting Company's Terms & Conditions and Privacy Policy.

World Sparrow Day 2025 : ಗುಬ್ಬಚ್ಚಿಗಳ ದಿನಾಚರಣೆ ಶುರುವಾದದ್ದು ಹೇಗೆ? ಇತಿಹಾಸ, ಮಹತ್ವ ತಿಳಿಯಿರಿ

ಸ್ವಾರ್ಥಭರಿತ ಜೀವನ ಶೈಲಿ ಹಾಗೂ ಹೆಚ್ಚುತ್ತಿರುವ ಶಬ್ದ ಮಾಲಿನ್ಯದಿಂದಾಗಿ ಗುಬ್ಬಚ್ಚಿಗಳು ಅಳಿವಿನಂಚಿಗೆ ತಲುಪಿದೆ. ಹಿಂದೆಲ್ಲ ಮನೆಯಂಗಳದಲ್ಲಿ ಕಾಣಸಿಗುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳು ಕಾಣದಂತಾಗಿದೆ. ಈ ಗುಬ್ಬಚ್ಚಿಗಳನ್ನು ರಕ್ಷಿಸಲು ಮತ್ತು ಆ ಸಂತತಿಗಳ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನವನ್ನು ಮೀಸಲಾಗಿಡಲಾಗಿದ್ದು ಅದುವೇ ವಿಶ್ವ ಗುಬ್ಬಚ್ಚಿ ದಿನ. ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಹೇಗೆ? ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಷ್ಟು ಮಾಹಿತಿ ಇಲ್ಲಿದೆ.

World Sparrow Day 2025 : ಗುಬ್ಬಚ್ಚಿಗಳ ದಿನಾಚರಣೆ ಶುರುವಾದದ್ದು ಹೇಗೆ? ಇತಿಹಾಸ, ಮಹತ್ವ ತಿಳಿಯಿರಿ
World Sparrow Day 2025
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Mar 19, 2025 | 3:10 PM

ಭೂಮಿಯ ಮೇಲಿನ ಹಳೆಯ ಪಕ್ಷಿ ಪ್ರಭೇದಗಳಲ್ಲಿ ಗುಬ್ಬಚ್ಚಿ (Sparrow) ಯೂ ಒಂದು. ಇದು ಮನುಷ್ಯರ ನಡುವೆ ವಾಸಿಸಲು ಇಷ್ಟ ಪಡುವ ಪಕ್ಷಿ ಎನ್ನಬಹುದು. ಹಿಂದೆಲ್ಲಾ ಮನೆಯ ಹಂಚಿನಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಮನೆಯ ಸದಸ್ಯರೆನ್ನುವಂತೆ ಇದ್ದವು. ಆದರೆ ಇದೀಗ ಗುಬ್ಬಚ್ಚಿಗಳು ಅಳಿವಿನಂಚಿಗೆ ತಲುಪಿದೆ. ಭಾರತ ಸೇರಿದಂತೆ ಪ್ರಪಂಚದಾದಂತ್ಯ ಈ ಗುಬ್ಬಚ್ಚಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಕಣ್ಮರೆಯಾಗುವ ಈ ಗುಬ್ಬಚ್ಚಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುವುದು ನಿಜಕ್ಕೂ ಶ್ಲಾಘನೀಯ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನ (World Sparrow Day) ವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಗುಬ್ಬಚ್ಚಿ ದಿನದ ಇತಿಹಾಸ:

ನಾಸಿಕ್ ನಿವಾಸಿ ಮೊಹಮ್ಮದ್ ದಿಲಾವರ್ ಅವರು ಫಾರೆವರ್ ಸೊಸೈಟಿ ಸ್ಥಾಪಿಸಿದರು. ನೇಚರ್ ಫಾರೆವರ್ ಸೊಸೈಟಿ ಮತ್ತು ಇಕೋಸಿಸ್ ಆಕ್ಷನ್ ಫೌಂಡೇಶನ್ ಸಹಯೋಗದೊಂದಿಗೆ 2010ರಂದು ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳ ಸಂತತಿಗಳನ್ನು ಉಳಿಸುವ ಉದ್ದೇಶವನ್ನು ಈ ದಿನ ಹೊಂದಿದೆ.

ವಿಶ್ವ ಗುಬ್ಬಚ್ಚಿ ದಿನದ ಮಹತ್ವ ಹಾಗೂ ಆಚರಣೆ:

ಪಕ್ಷಿ ಪ್ರಬೇಧಗಳಲ್ಲಿ ಒಂದಾದ ಈ ಗುಬ್ಬಚ್ಚಿಗಳು ಕ್ರಮೇಣವಾಗಿ ಅಳಿವಿನಂಚಿಗೆ ಸಾಗುತ್ತಿವೆ. ನಗರೀಕರಣ, ಮೊಬೈಲ್ ಟವರ್ ಗಳ ಹೆಚ್ಚಳ ಹಾಗೂ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂತತಿಗಳು ಕಣ್ಮರೆಯತ್ತ ಸಾಗುತ್ತಿವೆ. ಹೀಗಾಗಿ ಎಲ್ಲೋ ಒಂದೆರಡು ಗುಬ್ಬಚ್ಚಿಗಳನ್ನು ಮಾತ್ರ ನೋಡುವಂತಾಗಿದೆ. ಹೀಗಾಗಿ ಈ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಬೇಧಗಳ ಸಂರಕ್ಷಣೆ ಹಾಗೂ ಅವುಗಳ ಸಂತತಿ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಗುಬ್ಬಚ್ಚಿ ದಿನ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಗುಬ್ಬಚ್ಚಿಗಳ ಸಂತತಿಗಳ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ.

ಇದನ್ನೂ ಓದಿ
Image
ಪ್ರತಿಸ್ಪರ್ಧಿಯನ್ನು ಮೀರಿಸಿ, ಕೆಲಸದ ಸ್ಥಳದಲ್ಲಿ ನಂ.1 ಆಗಲು ಚಾಣಕ್ಯನ ಸಲಹೆ
Image
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಬೆಲ್ಲದ ನೀರು ಕುಡಿದರೆ, ಈ ಬದಲಾವಣೆ
Image
ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಈ ಪ್ರಯೋಜಗಳಿವೆ
Image
ನೀವು ಮೊದಲು ಕಂಡ ಈ ಚಿತ್ರವೇ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ

ಮತ್ತಷ್ಟು ಓದಿ: Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ

ಗುಬ್ಬಚ್ಚಿಗಳ ಸಂರಕ್ಷಣೆ ಮಾಡುವುದು ಹೇಗೆ?

  • ನಿಮ್ಮ ಮನೆಯಲ್ಲಿ ಗುಬ್ಬಚ್ಚಿಗಳು ಗೂಡನ್ನು ಕಟ್ಟಿಕೊಂಡರೆ ಅದನ್ನು ತೆಗೆದುಹಾಕಬೇಡಿ. ಅವುಗಳ ಸಂತತಿ ಅಭಿವೃದ್ಧಿಗೆ ಈ ರೀತಿ ಕೈ ಜೋಡಿಸಿ.
  • ಬೆಳಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಅಂಗಳ, ಕಿಟಕಿಗಳ ಮೇಲೆ ಧಾನ್ಯ ಮತ್ತು ನೀರನ್ನು ಇರಿಸಿ ಅವುಗಳ ಹಸಿವನ್ನು ನೀಗಿಸಿ.
  • ಮಕ್ಕಳಿಗು ಗುಬ್ಬಚ್ಚಿಗಳಿಗೆ ಆಹಾರಕ್ಕಾಗಿ ಬಾಲ್ಕನಿಯಲ್ಲಿ ನೀರು ಮತ್ತು ಧಾನ್ಯಗಳ ಬಟ್ಟಲನ್ನು ಇಡಲು ಪ್ರೋತ್ಸಾಹಿಸಿ.
  • ಮನೆಯಲ್ಲಿ ಬಿಸಾಡಲು ಇಟ್ಟಿರುವ ಶೂ ಕ್ಯಾನ್ಸ್, ದೊಡ್ಡ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಮಡಿಕೆಗಳಿದ್ದರೆ ಅದನ್ನು ಮರದ ರೆಂಬೆ ಕೊಂಬೆಗಳಿಗೆ ನೇತು ಹಾಕಿ, ಇದು ಗುಬ್ಬಚ್ಚಿಗಳು ಗೂಡು ಕಟ್ಟಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು