Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ

ಎಲ್ಲಾ ವ್ಯಕ್ತಿಗಳ ವ್ಯಕ್ತಿತ್ವ ಒಂದೇ ರೀತಿ ಇರುವುದಿಲ್ಲ. ಆದರೆ ವ್ಯಕ್ತಿತ್ವ ತಿಳಿಯಬೇಕಂದರೆ ವ್ಯಕ್ತಿಯ ಜೊತೆಗೆ ಬೆರೆಯಬೇಕಿಲ್ಲ, ಹೆಸರು ಸಾಕಂತೆ. ಹುಟ್ಟಿದ ಮಗುವಿಗೆ ಯಾವ ಅಕ್ಷರದಿಂದ ಹೆಸರು ಇಡಬೇಕು ಎಂದು ಜಾತಕ ನೋಡುತ್ತೇವೆ. ಜಾತಕದಲ್ಲಿ ಯಾವ ಅಕ್ಷರ ಬರುತ್ತದೆಯೋ ಆ ಅಕ್ಷರದಿಂದಲೇ ಹೆಸರು ಇಡುತ್ತೇವೆ. ಈ ವೇಳೆ ಹೆಸರಿನ ಕೊನೆಯ ಅಕ್ಷರದ ಬಗ್ಗೆ ಗಮನ ಹರಿಸುವುದಿಲ್ಲ. ಇಂಗ್ಲಿಷ್ ವರ್ಣಮಾಲೆಯ ಯಾವ ಅಕ್ಷರದಿಂದ ನಿಮ್ಮ ಹೆಸರು ಕೊನೆಗೊಳ್ಳುತ್ತದೆಯೋ ಅದುವೇ ನಿಮ್ಮ ಬಗ್ಗೆ ಹೇಳುತ್ತವೆಯಂತೆ. ಹೆಸರಿನ ಕೊನೆಯ ಅಕ್ಷರದಿಂದ ವ್ಯಕ್ತಿಯ ವ್ಯಕ್ತಿತ್ವ, ಇಷ್ಟಗಳು ಹಾಗೂ ಹವ್ಯಾಸ ಸೇರಿದಂತೆ ಇನ್ನಿತ್ತರ ಕುತೂಹಲಕಾರಿ ಅಂಶಗಳನ್ನು ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
Personality Test
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Mar 18, 2025 | 12:32 PM

ಈ ಹೆಸರಿ(Name) ನಲ್ಲಿ ಏನಿದೆ ಎಂದು ಎಲ್ಲರೂ ಅಂದುಕೊಳ್ಳಬಹುದು, ಆದರೆ ಈ ಹೆಸರಿನಿಂದ ನೀವು ಇಂತಹ ವ್ಯಕ್ತಿಯೆಂದು ಗುರುತಿಸಿಕೊಳ್ಳುವುದು. ಹೊಸಬರ ಪರಿಚಯವಾದಾಗ ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವುದೇ ಈ ಹೆಸರಿನಿಂದ. ಹೀಗಾಗಿ ನಿಮ್ಮ ಸುಂದರ ಹೆಸರಿನಿಂದ ನಿಮ್ಮ ವ್ಯಕ್ತಿತ್ವ (Personality) ಹಾಗೂ ನಿಮ್ಮ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಹೌದು, ಒಬ್ಬ ವ್ಯಕ್ತಿಯ ಹೆಸರಿನ ಕೊನೆಯ ಅಕ್ಷರ (Letter) ಆತನ ವ್ಯಕ್ತಿತ್ವವನ್ನು ಹೇಳುತ್ತದೆ. ಆ ವ್ಯಕ್ತಿಯ ಹವ್ಯಾಸಗಳು, ಅಭಿರುಚಿ ಹಾಗೂ ವರ್ತನೆಗಳನ್ನು ಬಹಿರಂಗ ಪಡಿಸುತ್ತದೆ. ಹೀಗಾಗಿ ನಿಮ್ಮ ಹೆಸರಿನ ಕೊನೆಯ ಅಕ್ಷರ ಏನು ಹೇಳುತ್ತದೆ? ನಿಮ್ಮ ವ್ಯಕ್ತಿತ್ವ ಹೇಗಿದೆ? ಎಂದು ತಿಳಿದುಕೊಳ್ಳಬಹುದಾಗಿದೆ.

  •  ಕೊನೆಯ ಅಕ್ಷರ A ಆಗಿದ್ದರೆ: ಯಾವ ವ್ಯಕ್ತಿಯ ಹೆಸರು ಎ ಅಕ್ಷರದಲ್ಲಿ ಕೊನೆಯಾಗುತ್ತದೆ ಆ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿದ್ದು, ಇತರರ ಅಭಿಪ್ರಾಯಗಳಿಮದ ಪ್ರಭಾವಿತರಾಗುವುದಿಲ್ಲ. ಅಷ್ಟೇ ಅಲ್ಲದೇ ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವುದಿಲ್ಲ..ಆದರೆ ತಮ್ಮ ಜೀವನಸಂಗಾತಿಯನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ವಿಶೇಷ ಕಾಳಜಿ ತೋರುತ್ತಾರೆ. ಇವರಿಗೆ ತನ್ನ ಕುಟುಂಬವೇ ಮೊದಲ ಆದ್ಯತೆಯಾಗಿರುತ್ತದೆ.
  • E ಅಕ್ಷರದಿಂದ ಹೆಸರು ಕೊನೆಗೊಳ್ಳುತ್ತಿದ್ದರೆ: ಹೆಸರಿನ ಕೊನೆಯ ಅಕ್ಷರ ಇ ಆಗಿದ್ದರೆ ಈ ವ್ಯಕ್ತಿಗಳು ಸೌಮ್ಯಸ್ವಭಾವ ಹೊಂದಿದ್ದು, ಆಶಾವಾದಿಗಳಾಗಿರುತ್ತಾರೆ. ವಯಸ್ಸಿನಲ್ಲಿ ಚಿಕ್ಕವರಾಗಿದ್ದು ಆದರೆ ಪ್ರೌಢ ಬುದ್ಧಿಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಏನೇ ಬದಲಾದರೂ ಆ ಬದಲಾವಣೆಗಳಿಗೆ ಒಗ್ಗಿಕೊಂಡು ಜೀವನ ನಡೆಸುತ್ತಾರೆ. ಈ ವ್ಯಕ್ತಿಗಳಿಗೆ ನಾಟಕ ಮಾಡುವವರನ್ನು ಕಂಡರೆ ಆಗುವುದಿಲ್ಲ. ಇತರ ಮಾತು ಹಾಗೂ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಲ್ಲದೇ ಯಾರ ಆಕರ್ಷಣೆಗೂ ಒಳಗಾದ ತಮ್ಮ ಪಾಡಿಗೆ ತಾವು ಇರಲು ಇಷ್ಟ ಪಡುತ್ತಾರೆ.
  • ಹೆಸರಿನ ಕೊನೆಯ ಅಕ್ಷರ L ಅಥವಾ H ಆಗಿದ್ದರೆ: ಈ ರೀತಿ ವ್ಯಕ್ತಿಗಳು ನಿಷ್ಠಾವಂತರು. ಈ ವ್ಯಕ್ತಿಗಳು ತಮ್ಮ ಎಲ್ಲಾ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತೋರಿಕೆಗಾಗಿ ಹಾಗೂ ಎಲ್ಲರನ್ನು ಮೆಚ್ಚಿಸಲು ಬದುಕುವುದಿಲ್ಲ. ತಾವು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವವರೆಗೆ ಬಿಡುವುದಿಲ್ಲ. ಇವರಲ್ಲಿರುವ ಈ ಕೆಲವು ಗುಣಗಳಿಂದಲೇ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ.
  • O ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು: ಈ ವ್ಯಕ್ತಿಗಳು ಅಧ್ಯಯನ ಹಾಗೂ ಕಲಿಕೆಯಲ್ಲಿ ಸದಾ ಮುಂದೆ ಇರುತ್ತಾರೆ. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಹೊಸ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಪುಣರು. ಹೊಂದಿಕೊಳ್ಳುವ ಗುಣವಿದ್ದು ಎಲ್ಲದಕ್ಕೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಪರಿಸ್ಥಿತಿ ಹೇಗೆ ಇದ್ದರೂ ಎಲ್ಲವನ್ನು ಸಮಾಧಾನದಿಂದಲೇ ನಿಭಾಯಿಸಿಕೊಂಡು ಹೋಗುತ್ತಾರೆ.
  • ಹೆಸರಿನ ಕೊನೆಯ ಅಕ್ಷರ N ಅಥವಾ M ಆಗಿದ್ದರೆ: ಈ ವ್ಯಕ್ತಿಗಳು ಸೊಗಸಾದ ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತದೆ. ಈ ಜನರು ಶಿಸ್ತುಬದ್ಧವಾಗಿ ಜೀವನ ನಡೆಸುತ್ತಾರೆ. ಸಮಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ, ಹೀಗಾಗಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ತಮ್ಮ ಆಕರ್ಷಕ ವ್ಯಕ್ತಿತ್ವದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ.
  • R ಅಥವಾ S ಅಕ್ಷರದಿಂದ ಹೆಸರು ಮುಕ್ತಾಯಗೊಂಡರೆ: ಹೆಸರಿನ ಕೊನೆಯ ಅಕ್ಷರ ಆರ್ ಅಥವಾ ಎಸ್ ಆಗಿದ್ದರೆ ಈ ಜನರು ಎಲ್ಲರಿಗೂ ಮಾದರಿಯಾಗಿರುತ್ತಾರೆ. ಉಡುಗೆ ತೊಡುಗೆಗಳಿಗೆ ಹೆಚ್ಚು ಆದ್ಯತೆ ನೀಡುವ ಈ ವ್ಯಕ್ತಿಗಳು ಫ್ಯಾಷನ್ ಪ್ರಿಯರಾಗಿರುತ್ತಾರೆ. ಕೆಲಸದ ಬಗ್ಗೆ ಹೆಚ್ಚು ಶ್ರದ್ಧೆ ಹೊಂದಿದ್ದು, ಸಹೋದ್ಯೋಗಿಗಳು ಇವರ ಕೆಲಸ ಕಂಡು ಅಸೂಯೆ ಪಡುತ್ತಾರೆ.
  • Y ಅಥವಾ T ಅಕ್ಷರದಿಂದ ಹೆಸರು ಮುಕ್ತಾಯಗೊಂಡರೆ: ಈ ವ್ಯಕ್ತಿಗಳು ಪಟ ಪಟ ಮಾಡುವ ಈ ಜನರಿಗೆ ಸಂವಹನ ಕಲೆಯೂ ಒಲಿದಿರುತ್ತಿರುತ್ತದೆ. ಹೀಗಾಗಿ ಮಾತಿನಿಂದ ಮೋಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈ ವ್ಯಕ್ತಿಗಳ ವರ್ತನೆಗಳು, ಮಾತು ಅರ್ಥಗರ್ಭಿತವಾಗಿದ್ದು, ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ ನಿಸ್ಸಿಮರು. ಮೋಸ ಮಾಡಿದವರನ್ನು ಸುಲಭವಾಗಿ ಕ್ಷಮಿಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Tue, 18 March 25

ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ