Personality Test : ನೀವು ಫಿಟ್ ನೆಸ್ ಗೆ ಹೆಚ್ಚು ಆದ್ಯತೆ ನೀಡುತ್ತೀರಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
ಫಿಟ್ ನೆಸ್ ಎನ್ನುವ ಪದ ಹೆಚ್ಚಿನವರಿಗೆ ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಅರೋಗ್ಯಕರ ಜೀವನಶೈಲಿ, ಆರೋಗ್ಯ ಹಾಗೂ ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲಿ ಈ ಫಿಟ್ ನೆಸ್ ಕೂಡ ಸೇರಿಕೊಂಡಿದೆ. ಹೆಚ್ಚಿನವರು ಫಿಟ್ ನೆಸ್ ಆದ್ಯತೆ ನೀಡುವುದನ್ನು ನೋಡಿರಬಹುದು. ಸೇವಿಸುವ ಆಹಾರದಿಂದ ಹಿಡಿದು ಜಿಮ್, ವರ್ಕ್ ಔಟ್ ಬಗೆಗೂ ಹೆಚ್ಚು ಗಮನ ಕೊಡುವುದಿದೆ. ಹಾಗಾದ್ರೆ ನೀವೇನಾದ್ರು ಫಿಟ್ ನೆಸ್ ಫ್ರೀಕ್ ಆಗಿದ್ದರೆ ಅದುವೇ ಹೇಳುತ್ತೆ ವ್ಯಕ್ತಿತ್ವ, ಈ ಕುರಿತಾದ ಮಾಹಿತಿ ಇಲ್ಲಿದೆ.

ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ಬಾಯಲ್ಲಿ ಕೇಳುವ ಪದವೇ ಈ ಫಿಟ್ ನೆಸ್ (Fitness). ಅದರಲ್ಲಿಯೂ ಈ ಸೆಲೆಬ್ರಿಟಿಗಳು ಸ್ಲಿಮ್ ಆಗಿ ಕಾಣಲು ಫಿಟ್ ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಹೌದು, ನೀವೇನಾದ್ರು ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುತ್ತೀರಾ? ಬಿಡುವಿನ ವೇಳೆಯಲ್ಲಿ ಕ್ರೀಡೆಗಳನ್ನು ಆಡಲು ಅಥವಾ ಜಿಮ್‌ಗೆ ಹೋಗಲು ಇಷ್ಟಪಡುತ್ತೀರಾ?. ನೀವು ಫಿಟ್ ನೆಸ್ ಗೆ ನೀಡುವ ಆದ್ಯತೆಯೇ ನಿಮ್ಮ ವ್ಯಕ್ತಿತ್ವ (Personality) ವನ್ನು ರಿವೀಲ್ ಮಾಡುತ್ತದೆ. ಹಾಗಾದ್ರೆ ಫಿಟ್ ನೆಸ್ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಗುಣಸ್ವಭಾವ ಹೇಗಿರುತ್ತದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.
ಫಿಟ್‌ನೆಸ್ ಪ್ರಿಯರು ನಿರಂತರ ಕ್ರಿಯೆ, ಉತ್ಸಾಹ ಮತ್ತು ಹೊಸ ಅನುಭವಗಳನ್ನು ಪಡೆಯಲು ಇಷ್ಟಪಡುತ್ತಾರೆ. ಈ ಜನರು ಆತ್ಮವಿಶ್ವಾಸ, ದೃಢನಿಶ್ಚಯ ಹಾಗೂ ಜೀವನದಲ್ಲಿ ಯಶಸ್ವಿಯಾಗಲು ಬಯಸುತ್ತಾರೆ. ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ನೇರವಾಗಿ ಮಾತನಾಡುವ ವ್ಯಕ್ತಿಗಳಿರುವರು.
ಈ ಜನರು ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದು, ತನ್ನ ಸುತ್ತಮುತ್ತಲಿನ ವ್ಯಕ್ತಿಗಳನ್ನು ಪ್ರೇರೇಪಿಸುತ್ತಾರೆ. ವಾಸ್ತವಿಕ ಗುರಿಗಳನ್ನು ಹೊಂದಿಸಿಕೊಂಡು ಅದನ್ನು ಸಾಧಿಸಲು ಶ್ರಮಿಸುವ ಸಾಧ್ಯತೆ ಹೆಚ್ಚು. ಆತ್ಮೀಯ ವ್ಯಕ್ತಿಗಳನ್ನು ಪ್ರೀತಿಪಾತ್ರರನ್ನು ಕಾಳಜಿಯಿಂದ ನೋಡುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವರ ಭಾವನೆಗಳಿಗೆ ಮಿಡಿಯುವ ಹೃದಯ ಇವರದ್ದಾಗಿರುತ್ತದೆ.
ಇದನ್ನೂ ಓದಿ: ಈ ಗುಣಗಳಿದ್ದರೆ ನಿಮ್ಮ ಆಯಸ್ಸು ಬೇಗನೇ ಕಡಿಮೆಯಾಗುತ್ತಂತೆ
ಈ ಜನರಲ್ಲಿ ಆತಂಕ, ನಕಾರಾತ್ಮಕತೆ ಮತ್ತು ಸ್ವಯಂ ಅನುಮಾನವನ್ನು ಅನುಭವಿಸುವ ಸಾಧ್ಯತೆ ಕಡಿಮೆ. ಸದಾ ಸಕಾರಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಇವರು ಉತ್ಸಾಹಭರಿತರು, ಕ್ರಿಯಾಶೀಲರು, ವಿಶ್ವಾಸ, ದೃಶ್ಯೀಕರಣ, ಮಾತು, ಹೋರಾಟದ ಮನೋಭಾವ ಹಾಗೂ ಏಕಾಗ್ರತೆ ಅಧಿಕವಾಗಿದ್ದು, ಎಲ್ಲರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








