AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗುಣಗಳಿದ್ದರೆ ನಿಮ್ಮ ಆಯಸ್ಸು ಬೇಗನೇ ಕಡಿಮೆಯಾಗುತ್ತಂತೆ

ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮವು ಆಯಸ್ಸನ್ನು ಹೇಗೆ ಕಡಿಮೆ ಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮನುಷ್ಯನಲ್ಲಿರುವ ಈ ಕೆಲವು ಕೆಟ್ಟ ಗುಣಗಳು ಸಾವಿಗೆ ಹತ್ತಿರವಾಗುವಂತೆ ಮಾಡುತ್ತದೆಯಂತೆ. ಈ ಬಗ್ಗೆ ವಿದುರ ತನ್ನ ನೀತಿಯಲ್ಲಿ ಉಲ್ಲೇಖ ಮಾಡಿದ್ದು, ಈ ಕೆಟ್ಟ ಗುಣಗಳನ್ನು ಕಡಿಮೆ ಮಾಡಿಕೊಂಡು ಆಯಸ್ಸನ್ನು ಹೆಚ್ಚಿಸಿಕೊಳ್ಳಿ ಎನ್ನುವ ಸಲಹೆಗಳನ್ನು ನೀಡಿದ್ದಾನೆ. ಹಾಗಾದ್ರೆ ಮನುಷ್ಯನ ಆಯಸ್ಸನ್ನು ಕಡಿಮೆಗೊಳಿಸುವ ಆ ಕೆಟ್ಟ ಗುಣಗಳಾವುವು ಎನ್ನುವ ಮಾಹಿತಿ ಇಲ್ಲಿದೆ.

ಈ ಗುಣಗಳಿದ್ದರೆ ನಿಮ್ಮ ಆಯಸ್ಸು ಬೇಗನೇ ಕಡಿಮೆಯಾಗುತ್ತಂತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 15, 2025 | 12:27 PM

Share

ಸಾವು ಎನ್ನುವುದು ಖಚಿತ. ಹೀಗಾಗಿ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ದಿನ ಇಹಲೋಕವನ್ನು ತ್ಯಜಿಸಲೇ ಬೇಕು. ಆದರೆ ವ್ಯಕ್ತಿಯಲ್ಲಿನ ಈ ಕೆಟ್ಟ ಗುಣಗಳು ಆಯಸ್ಸನ್ನು ಕಡಿಮೆ ಮಾಡಿ, ಸಾವಿಗೆ ಹತ್ತಿರವಾಗುವಂತೆ ಮಾಡುತ್ತದೆ ಎಂದಿದ್ದಾನೆ ವಿದುರ. ಯಾವೊಬ್ಬ ವ್ಯಕ್ತಿಯ ಈ ರೀತಿ ನಡೆದುಕೊಳ್ಳುತ್ತಾನೋ ಆತನ ಆಯಸ್ಸು ಕಡಿಮೆ ಆಗೋದು ಖಂಡಿತ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ಹೀಗಾಗಿ ದೀರ್ಘ ಆಯಸ್ಸನ್ನು ಪಡೆಯಲು ಈ ಗುಣಗಳನ್ನು ಬಿಟ್ಟು ಬಿಡುವುದು ಸೂಕ್ತ.

  • ಅತಿಯಾದ ಕೋಪ : ಕೋಪವು ಎಲ್ಲರಿಗೂ ಕೂಡ ಬರುತ್ತದೆ. ಆದರೆ ಸಿಟ್ಟನ್ನು ನಿಯಂತ್ರಿಸುವುದು ತಿಳಿದಿರಬೇಕು. ಕೋಪದ ಕೈಗೆ ಬುದ್ಧಿ ಕೊಟ್ಟು ತಪ್ಪು ಮಾಡುವುದೇ ಹೆಚ್ಚು. ಸಿಟ್ಟಿನಲ್ಲಿದ್ದಾಗ ಸರಿ ತಪ್ಪುಗಳನ್ನು ವಿಮರ್ಶಿಸಲು ಸಾಧ್ಯವಿಲ್ಲ. ಇದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅತಿಯಾಗಿ ಕೋಪಿಸಿಕೊಳ್ಳುವವರು ನರಕಕ್ಕೆ ಹೋಗುತ್ತಾರೆ, ಆಯಸ್ಸು ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಸಿಟ್ಟನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಇರುವುದನ್ನು ಕಲಿಯಿರಿ ಎಂದು ತಿಳಿಸಿದ್ದಾನೆ ವಿದುರ.
  • ತಾನೇ ದೊಡ್ಡವನು ಎನ್ನುವ ಅಹಂ ಭಾವ : ತಾನು ತನ್ನಿಂದಲೇ ಎನ್ನುವ ಭಾವನೆಯೂ ವ್ಯಕ್ತಿಯ ವಿನಾಶಕ್ಕೆ ಕಾರಣವಾಗುತ್ತದೆ. ತಾನು ಹೇಳಿದ್ದೆ ಸರಿ ಎನ್ನುವ ಅಹಂಕಾರವಿರುವ ವ್ಯಕ್ತಿಯು ಗುರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ. ತಮಗಿಂತ ವಯಸ್ಸಿನಲ್ಲಿ ಹಿರಿಯರನ್ನು ಅವಮಾನಿಸುತ್ತಾರೆ. ತಾನೇ ದೊಡ್ಡವನು ಎನ್ನುವ ಅಹಂಕಾರದಿಂದ ಮೆರೆದರೆ ಆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಎಂದು ವಿದುರನು ತನ್ನ ನೀತಿಯಲ್ಲಿ ತಿಳಿಸಿದ್ದಾನೆ.
  • ಸ್ವಾರ್ಥ : ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳು ಒಂದೊಂದು ರೀತಿಯಲ್ಲಿ ಸ್ವಾರ್ಥಿಗಳೇ ಆಗಿರುತ್ತಾರೆ. ಆದರೆ ಸ್ವಾರ್ಥದ ಮನೋಭಾವವು ಬೇರೆಯವರನ್ನು ಉಪಯೋಗಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ವಿದುರನು ಹೇಳುವಂತೆ ಸ್ವಾರ್ಥಿಯಾದವನಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ತನಗಾಗಿ ತನ್ನ ಜೊತೆಗಿದ್ದ ವ್ಯಕ್ತಿಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತಾನೆ. ಈ ಗುಣದಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆಯಂತೆ.
  • ಮಾತಿನ ಮೇಲೆ ಹಿಡಿತವಿರಲಿ : ಕೆಲವು ಜನರು ಮಾತಿನಿಂದಲೇ ಮನೆ ಕಟ್ಟುತ್ತಾರೆ. ಕೆಲವರದ್ದು ಬಾಯಿಬಿಟ್ಟರೆ ಸಾಕು ಮಾತು ಬಿಟ್ಟರೆ ಬೇರೇನೂ ಇರುವುದಿಲ್ಲ. ಅಂತಹ ವ್ಯಕ್ತಿಗಳನ್ನು ನೀವು ನಿಮ್ಮ ಸುತ್ತಮುತ್ತಲಿನಲ್ಲಿ ಗಮನಿಸಿದ್ದಿರಬಹುದು. ಹೆಚ್ಚು ಮಾತನಾಡುವ ಜನರು ಸುಳ್ಳನ್ನು ಹೇಳುತ್ತಾರೆ. ತಮ್ಮ ಮಾತಿನಿಂದಲೇ ಎದುಗಿರುವ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾರೆ. ಹೀಗಾಗಿ ಮಾತು ಇತಮಿತವಾಗಿರಬೇಕು. ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು. ಅಗತ್ಯ ಮೀರಿ ಮಾತನಾಡಿದರೆ ವ್ಯಕ್ತಿಯ ವಯಸ್ಸು ಕಡಿಮೆಯಾಗುತ್ತದೆ ಎನ್ನುತ್ತಾನೆ ವಿದುರ.
  • ತ್ಯಾಗದ ಭಾವನೆಯಿರಬೇಕು : ಈಗಿನ ಕಾಲದಲ್ಲಿ ತ್ಯಾಗದ ಗುಣವಿರುವ ಜನರನ್ನು ನೋಡುವುದಕ್ಕೆ ಸಿಗುವುದು ಕಡಿಮೆ. ಆದರೆ ವಿದುರನು, ತನ್ನ ಬಗ್ಗೆ ಯೋಚಿಸುವ ಬದಲು ಇನ್ನೊಬ್ಬರ ಬಗ್ಗೆ ಯೋಚಿಸಬೇಕು. ಏನು ಇಲ್ಲದವರನ್ನು ನೋಡಿ ತನ್ನ ಬಳಿ ಇಷ್ಟದರೂ ಇದೆ ಎಂದು ತೃಪ್ತಿ ಪಟ್ಟುಕೊಳ್ಳಬೇಕು. ಕೈಲಾದರೆ ಸಹಾಯ ಅಥವಾ ತ್ಯಾಗ ಮಾಡುವ ಗುಣವಿರಬೇಕು. ತ್ಯಾಗ ಹಾಗೂ ಸಮರ್ಪಣೆ ಮನೋಭಾವವಿಲ್ಲದೇ ಹೋದಲ್ಲಿ ವ್ಯಕ್ತಿಯ ಆಯಸ್ಸು ಕಡಿಮೆಯಾಗಿ, ಸಾವಿಗೆ ಹತ್ತಿರವಾಗುತ್ತಾನೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
ದೇಹದ ಈ ಭಾಗಕ್ಕೆ ಒತ್ತಡ ಹಾಕಿದ್ರೆ ಮಗು ಅಳುವುದನ್ನು ನಿಲ್ಲಿಸುತ್ತೆ
Image
3 ದಿನ ಸ್ಮಾರ್ಟ್‌ಫೋನ್‌ನಿಂದ ದೂರವಿದ್ದರೆ ನಿಮ್ಮ ಮೆದುಳಿಗೆ ಹೀಗಾಗುತ್ತದೆ!
Image
ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡುತ್ತೀರಾ?
Image
ಈ ಚಿತ್ರದಲ್ಲಿ ನಿಮ್ಮ ಆಯ್ಕೆಯ ವೃತ್ತವೇ ನಿಮ್ಮ ವ್ಯಕ್ತಿತ್ವ ಹೇಳುತ್ತೆ

Published On - 12:27 pm, Sat, 15 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ