Personality Test : ಸೌಂದರ್ಯ ಹೆಚ್ಚಿಸುವ ಕುತ್ತಿಗೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಪ್ರಪಂಚದಲ್ಲಿರುವ ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಸನ್ನಿವೇಶ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಹೇಗೆ ವರ್ತಿಸುತ್ತಾರೆ ಎನ್ನುವ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸುತ್ತದೆ. ಆದರೆ ದೇಹದ ಪ್ರತಿಯೊಂದು ಅಂಗಗಳು ವ್ಯಕ್ತಿತ್ವ ಹಾಗೂ ಗುಣಸ್ವಭಾವವನ್ನು ಹೇಳುತ್ತದೆ. ಕಣ್ಣು, ಕಿವಿ, ಬಾಯಿ, ನಾಲಗೆ, ಹಣೆ ಹಾಗೂ ಹುಬ್ಬುಗಳ ಆಕಾರದಿಂದಲೇ ವ್ಯಕ್ತಿಯ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಬಹುದು. ಅದೇ ರೀತಿ ವ್ಯಕ್ತಿಯ ಕುತ್ತಿಗೆ ಉದ್ದ ನೋಡಿ ವ್ಯಕ್ತಿಯೂ ನಿಗೂಢ ಗುಣಸ್ವಭಾವ ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಪ್ರತಿಯೊಬ್ಬರು ಗುಣಸ್ವಭಾವ ಹಾಗೂ ವಿಭಿನ್ನ ವ್ಯಕ್ತಿತ್ವ (Personality) ವನ್ನು ಹೊಂದಿರುತ್ತಾರೆ. ಹೀಗಾಗಿ ಎಲ್ಲರೂ ಒಂದೇ ರೀತಿ ಇರುತ್ತಾರೆ ಎಂದು ಹೇಳುವುದು ಕಷ್ಟಕರ. ಆದರೆ ಒಬ್ಬ ವ್ಯಕ್ತಿಯು ಹೇಗೆ ಎಂದು ತಿಳಿಯಲು ಆತನ ಜೊತೆಗೆ ಸ್ವಲ್ಪ ಸಮಯವಾದರೂ ಕಳೆಯಬೇಕಾಗುತ್ತದೆ. ಆದರೆ ಒಬ್ಬ ವ್ಯಕ್ತಿ ನಡೆಯುವ ಶೈಲಿಯಿಂದ, ಕುಳಿತುಕೊಳ್ಳುವ ಭಂಗಿ, ನಿಂತುಕೊಳ್ಳುವ ಭಂಗಿ, ಮೂಗು, ಮುಖ, ಹಣೆ, ಕಣ್ಣು, ಕಿವಿ, ಮೂಗು ಕೈ ಬೆರಳುಗಳ ಆಕಾರ ಹೀಗೆ ದೇಹದ ಪ್ರತಿಯೊಂದು ಅಂಗಗಳ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಗೆಂಬುದನ್ನು ತಿಳಿಯಬಹುದು.
ಅದೇ ರೀತಿ ವ್ಯಕ್ತಿಯ ಕುತ್ತಿಗೆ (Neck) ಯ ಉದ್ದವು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಉದ್ದ ಕುತ್ತಿಗೆ (Long Neck) ಹಾಗೂ ಗಿಡ್ಡ ಕುತ್ತಿಗೆ (Short Neck) ಹೊಂದಿದ್ದವರ ವ್ಯಕ್ತಿತ್ವ ಹೇಗಿದೆ ಎನ್ನುವ ಕುತೂಹಲಕಾರಿ ಅಂಶ ಈ ಕೆಳಗಿದೆ.

Neck 2
* ಉದ್ದನೆಯ ಕುತ್ತಿಗೆ ಹೊಂದಿದ್ದರೆ : ಉದ್ದವಾದ ಕುತ್ತಿಗೆ ಇದ್ದರೆ, ಆ ವ್ಯಕ್ತಿಗಳು ಸುಂದರ ಹಾಗೂ ಬುದ್ಧಿವಂತರಾಗಿರುತ್ತದೆ. ಈ ಜನರು ಶಾಂತ ಸ್ವಭಾವ ಹೊಂದಿದ್ದು ತನ್ನ ಸಭ್ಯ ಗುಣಗಳಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಮುಕ್ತವಾಗಿ ಮಾತನಾಡಿ ಎಲ್ಲರೊಂದಿಗೆ ಬೆರೆಯುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ಹಾಗೂ ಉತ್ತಮ ಸಂವಹನಕಾರರಾಗಿದ್ದು ಸ್ವಾವಲಂಬಿ ಜೀವನ ನಡೆಸುತ್ತಾರೆ. ಈ ಜನರು ಬುದ್ಧಿವಂತರಾಗಿರುವ ಕಾರಣ ಜ್ಞಾನದ ಹಸಿವು ಹೆಚ್ಚಿರುತ್ತದೆ. ಹೀಗಾಗಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಪ್ರಕೃತಿ ಪ್ರೇಮಿಗಳಾಗಿದ್ದು, ಹಚ್ಚ ಹಸಿರಿನ ಪರಿಸರದ ನಡುವೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಇವರು ಸ್ವತಂತ್ರ್ಯವನ್ನು ಪ್ರೀತಿಸುತ್ತಾರೆ, ಹೀಗಾಗಿ ಸ್ವತಂತ್ರರಾಗಿದ್ದು ತಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.
ಮತ್ತಷ್ಟು ಓದಿ: Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
* ಗಿಡ್ಡ ಕುತ್ತಿಗೆ ಹೊಂದಿದ್ದರೆ : ಕೆಲವು ವ್ಯಕ್ತಿಗಳು ಗಿಡ್ಡ ಕುತ್ತಿಗೆ ಹೊಂದಿರುತ್ತಾರೆ, ಈ ವ್ಯಕ್ತಿಗಳು ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಶ್ರಮ ಜೀವಿಗಳಾಗಿದ್ದು ಬೆವರು ಸುರಿಸುತ್ತಾರೆ. ಸಮಸ್ಯೆಗಳು ಎದುರಾದಾಗ ಆದರಿಂದ ಹೊರಬರಲು ದಾರಿಯನ್ನು ಕಂಡುಕೊಳ್ಳುತ್ತಾರೆ. ಕುತ್ತಿಗೆ ಗಿಡ್ಡವಾಗಿದ್ದರೆ ಅದು ಸ್ಥಿರತೆಯನ್ನು ಸೂಚಿಸುತ್ತದೆ. ಈ ವ್ಯಕ್ತಿಗಳು ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಕಷ್ಟು ಬಾರಿ ಯೋಚಿಸುತ್ತಾರೆ.
ಬೇರೆಯವರ ಅಭಿಪ್ರಾಯಗಳ ಮೇಲೆ ಹೆಚ್ಚು ಪ್ರಭಾವಿತರಾಗಿರುವುದಿಲ್ಲ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ತುಂಬಾ ಪ್ರಾಯೋಗಿಕರಾಗಿದ್ದು, ಎಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಗುಣ ಇವರಲ್ಲಿ ಕಾಣಬಹುದು. ಸನ್ನಿವೇಶಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಗುಣ ಹೊಂದಿದ್ದು, ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ