Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಈ ಪಾನೀಯ ದೇಹಕ್ಕೆ ತಂಪು, ತ್ವಚೆಗೂ ಪ್ರಯೋಜನಕಾರಿ

ಬಿರು ಬಿಸಿಲಿನಲ್ಲಿ ಹೊರಗೆ ಹೋಗುವುದೆಂದರೆ ತಲೆ ನೋವಿನ ಕೆಲಸ. ಹೌದು, ಬೇಸಿಗೆಯಲ್ಲಿ ಸುಡು ಬಿಸಿಲಿನಿಂದ ಚರ್ಮದ ಕಾಂತಿ ಮಂದವಾಗುವುದು, ಸನ್​ ಬರ್ನ್ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೆಚ್ಚಿನವರು ಮನೆಯಲ್ಲೇ ರೋಸ್ ವಾಟರ್, ಸೌತೆಕಾಯಿ ಮೊದಲಾದವುಗಳನ್ನು ಬಳಸಿ ತ್ವಚೆ ಆರೈಕೆ ಮಾಡುತ್ತಾರೆ. ಆದರೆ ಆಹಾರದಲ್ಲಿ ಈ ಹಣ್ಣಿನ ಜ್ಯೂಸ್ ಸೇರಿಸಿಕೊಳ್ಳುವ ಮೂಲಕ ಹೊಳಪುಳ್ಳ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹಣ್ಣಿನ ರಸವು ಚರ್ಮವನ್ನು ತಂಪಾಗಿಸಿ ಕಾಂತಿಯುತ ಉಳಿಯುವಂತೆ ಮಾಡುತ್ತದೆ.

ಬೇಸಿಗೆಯಲ್ಲಿ ಈ ಪಾನೀಯ  ದೇಹಕ್ಕೆ ತಂಪು, ತ್ವಚೆಗೂ ಪ್ರಯೋಜನಕಾರಿ
ನಿಂಬೆ, ಪುದೀನಾ ಜ್ಯೂಸ್ Image Credit source: Youtube
Follow us
ಸಾಯಿನಂದಾ
| Updated By: ನಯನಾ ರಾಜೀವ್

Updated on: Mar 19, 2025 | 2:15 PM

ಬೇಸಿಗೆ (Summer) ಆರಂಭವಾಗಿದೆ, ಮುಂಜಾನೆ ಹತ್ತು ಗಂಟೆಯಾಗುತ್ತಿದ್ದಂತೆ ರಣ ರಣ ಬಿಸಿಲು ನೆತ್ತಿಯನ್ನು ಸುಡುತ್ತದೆ. ಹೀಗಾಗಿ ಉರಿ ಬಿಸಿಲು ಹಾಗೂ ಸೆಕೆಯನ್ನು ತಾಳಲಾರದೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ದೇಹವು ಹೈಡ್ರೇಟ್ ಆಗಿರಲು ಅನೇಕ ರೀತಿಯ ಪಾನೀಯ (Cool Drinks)ಗಳನ್ನು ಟ್ರೈ ಮಾಡುತ್ತಿದ್ದಾರೆ. ಆದರೆ ಈ ಪಾನೀಯಗಳು ದೇಹವನ್ನು ತಂಪಾಗಿಸುವುದು ಮಾತ್ರವಲ್ಲ, ಸೂರ್ಯನ ಶಾಖದಿಂದ ಸುಕ್ಕಾದ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಹಾಗಾದ್ರೆ ಯಾವೆಲ್ಲಾ ತಂಪು ಪಾನೀಯಗಳು ದೇಹವನ್ನು ಕೂಲ್ ಆಗಿಸುತ್ತದೆ ಹಾಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಮಾಹಿತಿ ಇಲ್ಲಿದೆ.

ಕಾಂತಿಯುತ ತ್ವಚೆಗೆ ಈ ಪಾನೀಯ ನಿತ್ಯ ಸೇವಿಸಿ * ಕಿತ್ತಳೆ ಮತ್ತು ಶುಂಠಿ ರಸ : ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಈ ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ರಕ್ತ ಪರಿಚಲನೆ ಹೆಚ್ಚಿಸಿ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ.

* ಕಲ್ಲಂಗಡಿ ಮತ್ತು ಪುದೀನ ರಸ : ಬೇಸಿಗೆಯಲ್ಲಿ ಎಲ್ಲೆಡೆ ಸಿಗುವ ಹಣ್ಣುಗಳಲ್ಲಿ ಒಂದು ಈ ಕಲ್ಲಂಗಡಿ, ಇದು ಹೈಡ್ರೇಟಿಂಗ್ ಮಾತ್ರವಲ್ಲದೆ ವಿಟಮಿನ್ ಎ, ಸಿ ಮತ್ತು ಲೈಕೋಪೀನ್‌ನಿಂದ ಕೂಡಿದೆ. ಈ ಹಣ್ಣಿನ ರಸವು ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಪುದೀನಾವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಚರ್ಮದ ಉರಿ ಹಾಗೂ ಮೊಡವೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ
Image
ತುಳಸಿ ಗಿಡ ಒಣಗಿ ಹೋಗಿದೆಯೇ? ಹಚ್ಚಹಸುರಾಗಿ ಬೆಳೆಯಲು ಈ ಟಿಪ್ಸ್​ ಫಾಲೋ ಮಾಡಿ
Image
ರಸಭರಿತ ತಾಜಾ ಕಲ್ಲಂಗಡಿ ಹಣ್ಣು ಖರೀದಿಸುವುದು ಹೇಗೆ?
Image
ಕೂದಲಿಗೆ ಅತಿಯಾಗಿ ಅಲೋವೆರಾ ಜೆಲ್ ಹಚ್ಚುತ್ತೀರಾ? ಇದರ ಅಡ್ಡಪರಿಣಾಮಗಳೇನು?
Image
ಮಾವಿನ ಹಣ್ಣುಗಳನ್ನು ಖರೀದಿಸುವ ಮುನ್ನ ಎಚ್ಚರ!

ಮತ್ತಷ್ಟು ಓದಿ: Raw Papaya vs Ripe Papaya: ಇವೆರಡರಲ್ಲಿ ಕೂದಲಿನ ಬೆಳವಣಿಗೆಗೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ

* ಅನಾನಸ್ ಮತ್ತು ಶುಂಠಿ ರಸ : ಅನಾನಸ್‌ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಗೆ ಸಹಾಯಕವಾಗಿದೆ. ಇದರಲ್ಲಿರುವ ಬ್ರೋಮೆಲೈನ್ ಎಂಬ ಕಿಣ್ವವು ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಶುಂಠಿಯಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಹೊಳಪು ತಂದು ಕೊಡುತ್ತದೆ.

* ನಿಂಬೆ ಮತ್ತು ಪುದೀನ ರಸ : ಸಿಟ್ರಸ್ ಹಣ್ಣಾಗಿರುವ ನಿಂಬೆಯೂ ವಿಟಮಿನ್ ಸಿ ಸಮೃದ್ಧವಾಗಿದೆ. ನಿಂಬೆ ಹಾಗೂ ಪುದೀನಾ ರಸದ ನಿಯಮಿತ ಸೇವನೆಯಿಂದ ತ್ವಚೆಯಲ್ಲಿ ನಾನಾ ರೀತಿ ಬದಲಾವಣೆಗಳನ್ನು ಕಾಣಬಹುದು. ನಿಂಬೆಯೂ ಮುಖದ ಹೊಳಪನ್ನು ಹೆಚ್ಚಿಸುವ ಗುಣ ಹೊಂದಿದೆ. ಪುದೀನಾವು ಉರಿಯೂತ ನಿವಾರಕ ಗುಣ ಹೊಂದಿದ್ದು, ಇದು ಮೊಡವೆಗಳನ್ನು ಕಡಿಮೆ ಮಾಡಿ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ಯಾರು ಮಾಡಿಸುತ್ತಿದ್ದಾರೆ ಅಂತ ಹೇಳಿದರೆ ರಾಜಕೀಯ ಆರೋಪವಾಗುತ್ತದೆ: ಸಚಿವ
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಚಿವ ಸತೀಶ್ ಜಾರಕಿಹೊಳಿ ಬಾಂಬ್​: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ​
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ನಮ್ಮ ನಡತೆ ಸರಿಯಾಗಿದ್ದರೆ ಯಾರೂ ಟಾರ್ಗೆಟ್ ಮಾಡಲ್ಲ: ಬಾಲಕೃಷ್ಣ
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?
ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?