Hair Care: ಕೂದಲಿನ ಆರೈಕೆಗೆ ಪರಿಣಾಮಕಾರಿ ಅಲೋವೆರಾ ಜೆಲ್; ಅತಿಯಾಗಿ ಬಳಸಿದ್ರೆ ಅಡ್ಡಪರಿಣಾಮಗಳೇ ಹೆಚ್ಚು
ಇಂದಿನ ಕಳಪೆ ಮಟ್ಟದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ತಲೆಯಲ್ಲಿ ಹೊಟ್ಟು, ಕೂದಲು ಉದುರುವಿಕೆ, ಕೂದಲು ಬೆಳ್ಳಗಾಗುವುದು, ಬೋಳು ತಲೆ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮನೆಯಂಗಳದಲ್ಲಿರುವ ಅಲೋವೆರಾ ಸಸ್ಯದ ಪಾತ್ರ ದೊಡ್ಡದು. ಹೆಚ್ಚಿನವರು ಕೂದಲಿನ ಆರೈಕೆಯಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಲೋಳೆಸರವನ್ನು ಹೆಚ್ಚಾಗಿ ಬಳಸುತ್ತಾರೆ. ಕೂದಲನ್ನು ಆರೋಗ್ಯವಾಗಿಡುವಲ್ಲಿ ಅಲೋವೆರಾಕ್ಕಿಂತ ಮಿಗಿಲಾದ ಪರಿಹಾರವಿಲ್ಲ. ಆದರೆ ಇದರ ಅತಿಯಾದ ಬಳಕೆಯೂ ಕೂದಲಿನ ಮೇಲೆ ವ್ಯತಿರಿಕ್ತವಾದ ಪರಿಣಾಮಗಳನ್ನು ಬಿರುತ್ತದೆ ಆ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಪ್ರತಿಯೊಬ್ಬರ ಮನೆಯಂಗಳದಲ್ಲಿರುವ ಅಲೋವೆರಾ (Aloe Vera) ವು ಚರ್ಮದ ಆರೈಕೆ (Skin Care) ಮತ್ತು ಕೂದಲಿನ ಆರೈಕೆ (Hair Care) ಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲೋವೆರಾವು ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದ್ದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನೆತ್ತಿಗೆ ಜಲಸಂಚಯನ ಮತ್ತು ತೇವಾಂಶವನ್ನು ಒದಗಿಸುತ್ತದೆ ಮತ್ತು ಉರಿಯೂತವನ್ನು ಶಮನಗೊಳಿಸುತ್ತದೆ. ಆದರೆ ಇವುಗಳ ಅತಿಯಾದ ಬಳಕೆ ಒಳ್ಳೆಯದಲ್ಲ. ಹಾಗಾದ್ರೆ ಅತಿಯಾದ ಅಲೋವೆರಾ ಜೆಲ್ (Aloe Vera Jel) ಬಳಸುವುದರಿಂದ ಕೂದಲಿನ ಮೇಲಾಗುವ ಅಡ್ಡ ಪರಿಣಾಮಗಳೇನು? ಎಂಬುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.
- ತಾಜಾವಲ್ಲದ ಜೆಲ್ ನಿಂದ ತುರಿಕೆ ಸಮಸ್ಯೆ ಉದ್ಭವ : ಮುಖ ಮತ್ತು ಕೂದಲಿನ ನೆತ್ತಿಗೆ ಯಾವಾಗಲೂ ತಾಜಾ ಅಲೋವೆರಾದ ಜೆಲ್ ಹಚ್ಚುವುದು ಸೂಕ್ತ. ಅಲೋವೆರಾ ಸಸ್ಯವು ಆರೋಗ್ಯಕರವಾಗಿಲ್ಲದಿದ್ದರೆ ಅಥವಾ ಹೊರತೆಗೆದ ಜೆಲ್ ಅನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಕೆಟ್ಟ ವಾಸನೆ ಬೀರುತ್ತದೆ. ಈ ಜೆಲ್ ಬ್ಯಾಕ್ಟೀರಿಯಾ ಅಥವಾ ಇತರ ಸೂಕ್ಷ್ಮಜೀವಿಗಳಿಂದ ಕಲುಷಿತಗೊಳಿಸಬಹುದು, ಇದು ತುರಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಅಲೋವೆರಾ ಜೆಲ್ ಕೆಟ್ಟ ವಾಸನೆಯನ್ನು ಹೊಂದಿದ್ದರೆ ಅದನ್ನು ಬಳಸದೇ ಇರುವುದು ಉತ್ತಮ.
- ನೆತ್ತಿಯ ದುರ್ವಾಸನೆಗೆ ಕಾರಣವಾಗುತ್ತದೆ : ಕೂದಲಿಗೆ ಹಚ್ಚಿದ ಅಲೋವೆರಾ ಜೆಲ್ ಅನ್ನು ಸರಿಯಾಗಿ ತೊಳೆಯದಿದ್ದರೆ, ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತದೆ. ಇದು ಕೂದಲನ್ನು ಎಣ್ಣೆಯುಕ್ತವಾಗಿ ಕಾಣುವಂತೆ ಮಾಡುತ್ತದೆ. ಇದು ಇತರ ಕೂದಲಿನ ಉತ್ಪನ್ನಗಳೊಂದಿಗೆ ಪ್ರತಿಕ್ರಿಯಿಸಬಹುದು. ಅದಲ್ಲದೇ ಕೊಳೆ ಸಂಗ್ರಹವಾಗಲು ಕಾರಣವಾಗಬಹುದು. ಇದರ ಕಣಗಳು ಕೂದಲಿನಲ್ಲಿಯೇ ಉಳಿದು ನೆತ್ತಿಯ ಮೇಲೆ ದುರ್ವಾಸನೆಯನ್ನು ಉಂಟು ಮಾಡುತ್ತದೆ.
- ಕೂದಲು ಒಡೆಯುವಿಕೆ ಮತ್ತು ಶುಷ್ಕತೆಗೆ ದಾರಿ : ಅಲೋವೆರಾ ಕೂದಲನ್ನು ಬಲಪಡಿಸುವ ಮತ್ತು ಆರ್ಧ್ರಕಗೊಳಿಸುವ ಗುಣಲಕ್ಷಣಗಳಿಗೆ ಹೊಂದಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಇದು ಕೂದಲು ಒಡೆಯುವಿಕೆ ಮತ್ತು ಶುಷ್ಕತೆಗೆ ಕಾರಣವಾಗಬಹುದು. ಕೂದಲು, ನೆತ್ತಿ ಹಾಗೂ ಕೂದಲಿನ ಬುಡಕ್ಕೆ ಅಲೋವೆರಾವನ್ನು ಹಚ್ಚುವುದರಿಂದ ಅಲರ್ಜಿ ಹಾಗೂ ತುರಿಕೆಯೂ ಉಂಟಾಗಬಹುದು.
- ನೆತ್ತಿಯಲ್ಲಿ ಕಿರಿಕಿರಿ ಉಂಟು ಮಾಡುತ್ತದೆ : ಅಲೋವೆರಾವನ್ನು ಅತಿಯಾಗಿ ಬಳಸುವುದು ಅಥವಾ ಹೆಚ್ಚು ಸಮಯ ಹಾಗೆಯೇ ಬಿಡುವುದು ಕೂಡ ನೆತ್ತಿಯ ಕಿರಿಕಿರಿಗೆ ಕಾರಣವಾಗಬಹುದು. ಹೀಗಾಗಿ ಕೂದಲಿಗೆ ಹಚ್ಚುವ ಮುನ್ನ ಯಾವಾಗಲೂ ಪ್ಯಾಚ್ ಪರೀಕ್ಷೆಯನ್ನು ಮಾಡಿಸಿ, ನಿಮ್ಮ ತ್ವಚೆಗೆ ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದರೆ ಮಾತ್ರ ಇದನ್ನು ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ