AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ಈ ಚಿತ್ರದಲ್ಲಿ ಮೊದಲು ಮಹಿಳೆಯ ಮುಖ ಕಂಡರೆ ನೀವು ಶಾಂತ ಸ್ವಭಾವದ ವ್ಯಕ್ತಿಗಳು ಎಂದರ್ಥ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿದೆ. ಈ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಚಿತ್ರವನ್ನು ನೋಡಿದಾಗ ಮೊದಲು ಏನು ಕಾಣಿಸುತ್ತದೆ ಎನ್ನುವುದರ ಆಧಾರದ ಮೇಲೆ ವ್ಯಕ್ತಿಯ ಗುಣಸ್ವಭಾವ ಹಾಗೂ ವ್ಯಕ್ತಿತ್ವ ನಿರ್ಣಯಿಸಬಹುದು. ಸದ್ಯಕ್ಕೆ ವೈರಲ್ ಆಗಿರುವ ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದು ಮಹಿಳೆನಾ ಅಥವಾ ಮರನಾ? ಎನ್ನುವುದರ ಮೇಲೆ ನಿಮ್ಮ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ಈ ಚಿತ್ರದಲ್ಲಿ ಮೊದಲು ಮಹಿಳೆಯ ಮುಖ ಕಂಡರೆ ನೀವು ಶಾಂತ ಸ್ವಭಾವದ ವ್ಯಕ್ತಿಗಳು ಎಂದರ್ಥ
ಸಾಂಧರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 17, 2025 | 11:46 AM

Share

ಇತ್ತೀಚೆಗಿನ ದಿನಗಳಲ್ಲಿ ಮೆದುಳಿಗೆ ಕೆಲಸ ಕೊಡುವ ಹಾಗೂ ವ್ಯಕ್ತಿತ್ವ ಪ್ರತಿಬಿಂಬಿಸುವ ಆಪ್ಟಿಕಲ್‌ ಇಲ್ಯೂಷನ್‌ (Optical Ilusion) ವೈರಲ್ ಆಗುತ್ತಿರುತ್ತದೆ. ಇದು ದಿಗ್ಭ್ರಮೆ ಮೂಡಿಸುವುದು ಮಾತ್ರವಲ್ಲ, ವ್ಯಕ್ತಿತ್ವ (Personality)ವನ್ನು ಬಹಿರಂಗ ಪಡಿಸುತ್ತದೆ. ಕೆಲವೊಮ್ಮೆ ನಮ್ಮ ಕಣ್ಣು, ಮನಸ್ಸಿಗೆ ಮೋಸ ಮಾಡುತ್ತವೆ. ನೈಜತೆಗಿಂತ ದೂರವಿರುವ ಈ ಆಪ್ಟಿಕಲ್‌ ಇಲ್ಯೂಷನ್‌ಗಳು ನೋಡಿದ ತಕ್ಷಣ ಇದೇನಪ್ಪಾ ಇದು ಎಂದು ಯೋಚನೆಗೆ ಇಳಿಯುವಂತೆ ಮಾಡುತ್ತದೆ. ಈ ಚಿತ್ರದಲ್ಲಿ ಮಹಿಳೆ ಹಾಗೂ ಮರವಿದ್ದು, ಆದರೆ ನೀವು ಮೊದಲು ಏನ್ನನ್ನು ನೋಡುತ್ತಿರೋ ನೀವು ತಾಳ್ಮೆಯಿಲ್ಲದ ವ್ಯಕ್ತಿಯೋ ಅಥವಾ ಶಾಂತ ವ್ಯಕ್ತಿಯೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾದ್ರೆ ಈ ಚಿತ್ರದ ಮೂಲಕ ನಿಮ್ಮ ನಿಗೂಢ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು.

  • ಮರ : ಈ ಚಿತ್ರದಲ್ಲಿ ಮೊದಲು ಮರವನ್ನು ಗಮನಿಸಿದರೆ ಅಂತಹ ವ್ಯಕ್ತಿಗಳು ಸೃಜನಶೀಲರು. ಬುದ್ಧಿವಂತರಾಗಿದ್ದು ಇವರ ಪ್ರತಿಯೊಂದು ಮಾತು ಅರ್ಥಗರ್ಭಿತವಾಗಿರುತ್ತದೆ. ಈ ಜನರು ಅಧ್ಯಯನಶೀಲರಾಗಿದ್ದು, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಜೀವನದಲ್ಲಿ ಉತ್ತುಂಗಕ್ಕೆ ಏರಬೇಕು ಎನ್ನುವ ಹಂಬಲವಿರುತ್ತದೆ. ಆದರೆ ಜೀವನದಲ್ಲಿ ತಾಳ್ಮೆಯೂ ಕೂಡ ಅಷ್ಟೇ ಅಗತ್ಯ ಎನ್ನುವುದನ್ನು ನೆನಪಿನಲ್ಲಿಡುವುದು ಮುಖ್ಯ. ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಈ ವ್ಯಕ್ತಿಗಳು ಚಿಕ್ಕ ವಿಷಯಗಳನ್ನು ನಿರ್ಲಕ್ಷ್ಯ ಮಾಡುವುದು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗಾಗಿ ಜೀವನದಲ್ಲಿ ಸಮತೋಲನ ಕಾಪಾಡುವುದು ಮುಖ್ಯವಾಗುತ್ತದೆ.
  • ಮಹಿಳೆ : ಈ ಚಿತ್ರದಲ್ಲಿ ಮೊದಲು ಮಹಿಳೆಯನ್ನು ಮೊದಲು ನೋಡಿದರೆ ಈ ಜನರು ಪ್ರೀತಿಯನ್ನು ಹುಡುಕುತ್ತಾರೆ. ಹೀಗಾಗಿ ತನ್ನನ್ನು ಹೆಚ್ಚು ಇಷ್ಟ ಪಡುವ ಜನರ ಪ್ರೀತಿಯಲ್ಲಿ ಬೀಳುತ್ತೀರಿ. ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ವ್ಯಕ್ತಿ ಇವರಾಗಿದ್ದು, ಕಾಳಜಿ ವಹಿಸುವವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಶಾಂತ ಹಾಗೂ ತಾಳ್ಮೆಯ ವ್ಯಕ್ತಿಯಾಗಿದ್ದು, ತಮ್ಮ ಸುತ್ತಮುತ್ತಲಿನ ಜನರನ್ನು ನೋಡಿಕೊಳ್ಳಲು ಆದ್ಯತೆ ನೀಡುತ್ತಾರೆ. ಇತರರು ಕಡೆಗಣಿಸಬಹುದಾದ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುವ ವ್ಯಕ್ತಿಗಳು ಇವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ