AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Human Solidarity Day 2025: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸುಸ್ಥಿರ ಅಭಿವೃದ್ಧಿ ಸಾಧ್ಯ

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿದೆ. ಅದೇ ರೀತಿ ಪ್ರತಿಯೊಂದು ದೇಶಗಳು ದ್ವೇಷವನ್ನು ಮರೆತು ಪರಸ್ಪರ ಒಗ್ಗಟ್ಟಿನಿಂದ ಇದ್ದಾಗ, ಅಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ದೇಶ ದೇಶಗಳ ನಡುವೆ ಒಂದು ಉತ್ತಮ ಸಂಬಂಧ ಏರ್ಪಡುತ್ತದೆ. ಹಾಗಾಗಿ ಜಗತ್ತಿನಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸಲು ಪ್ರತಿವರ್ಷ ಡಿಸೆಂಬರ್‌ 20 ರಂದು ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.

International Human Solidarity Day 2025: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸುಸ್ಥಿರ ಅಭಿವೃದ್ಧಿ ಸಾಧ್ಯ
ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on:Dec 20, 2025 | 9:40 AM

Share

ಈ ಪ್ರಪಂಚವು ಸಾಕಷ್ಟು ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಅನೇಕ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳ ಜನರು  ವಾಸಿಸುತ್ತಿದ್ದಾರೆ. ಈ ವೈವಿಧ್ಯತೆಯಿಂದಾಗಿ ಜನರಲ್ಲಿ ಸಹಜವಾಗಿ  ಭೇದಭಾವಗಳ ಭಾವನೆ ಮೂಡತ್ತದೆ. ಈ ಕಾರಣದಿಂದಾಗಿ ಸಮಾಜ ಮತ್ತು ದೇಶ ದೇಶಗಳ ನಡುವೆ ಯುದ್ಧ, ಹಿಂಸಾಚಾರ, ಭಯೋತ್ಪಾದನೆ ಮತ್ತು ಇತರ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತದೆ. ಇದು ಇಡೀ ಮಾನವ ಜನಾಂಗಕ್ಕೆ ಹಾನಿಯುಂಟುಮಾಡುತ್ತದೆ. ಅದೇ ದೇಶ ದೇಶಗಳು ಒಗ್ಗಟ್ಟಿನಿಂದ (Solidarity) ಇದ್ದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ʼವಸುದೈವ ಕುಟುಂಬಕಂʼ ಅಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬ ಪರಿಕಲ್ಪನೆಯಂತೆ ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ, ನಾಗರಿಕರಲ್ಲಿ ಏಕತೆ ಮತ್ತು ಸಹೋದರತ್ವ ಭಾವನೆಯನ್ನು ಮೂಡಿಸುವ ಮತ್ತು ಜಗತ್ತಿನಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ  ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನದ ಇತಿಹಾಸವೇನು?

ವಿಶ್ವದಲ್ಲಿ ಪರಸ್ಪರ ಸಹಕಾರ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲು ಮೊದಲು ಪ್ರಸ್ತಾಪಿಸಿತು. ಇದರ ನಂತರ 22 ಡಿಸೆಂಬರ್ 2005 ರಂದು 60/209 ನಿರ್ಣಯದ ಅಡಿಯಲ್ಲಿ ಡಿಸೆಂಬರ್ 20 ರಂದು ಅಂತರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್  20 ರಂದು ಜಾಗತಿಕ ಮಟ್ಟದಲ್ಲಿ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?

ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನದ ಮಹತ್ವವೇನು?

  • ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವುದು.
  • ಜನರಲ್ಲಿ ಏಕತೆ ಮತ್ತು ಸಹೋದರತ್ವವನ್ನು ಉತ್ತೇಜಿಸುವುದು
  • ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವುದು.
  • ಅಭಿವೃದ್ಧಿಗಾಗಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು.
  • ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು.
  • ಜಗತ್ತಿನಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವುದು.
  • ಯಾವುದೇ ಯುದ್ಧ, ಹಿಂಸಾಚಾರವಿಲ್ಲದೆ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು.

ಒಟ್ಟಿನಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸಲು ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 20 ರಂದು ಜಾಗತಿಕವಾಗಿ ಮಾನವ ಒಗ್ಗಟ್ಟಿನ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Sat, 20 December 25