ನರೇಂದ್ರ ಮೋದಿ, ರತನ್ ಟಾಟಾ
ನಮ್ಮ ಸುತ್ತಮುತ್ತ ಬಲಗೈ ಬಳಸುವ ಜನರನ್ನು ಹೆಚ್ಚಾಗಿ ಕಾಣುತ್ತೇವೆ. ನಾವು ಬಲಗೈಯಲ್ಲಿ ಮಾಡುವ ಕೆಲಸವನ್ನು ಅಷ್ಟೇ ಸಲೀಸಾಗಿ ಎಡಗೈಯಲ್ಲಿ ಮಾಡಿ ಮುಗಿಸುತ್ತಾರೆ. ಆದರೆ ಎಡಗೈ ಬಳಸುವರ ಸಂಖ್ಯೆಯೂ ಅಲ್ಪವಾಗಿದ್ದರೂ ಕೂಡ ಅವರಿಗೆ ವಿಶೇಷವಾದ ದಿನವನ್ನು ಮೀಸಲಿಡಲಾಗಿದೆ. ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವವರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ 13 ರಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನು ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಎಡಚರರ ದಿನದ ಇತಿಹಾಸ
1976 ರಲ್ಲಿ ಲೆಫ್ ತಾಂಡರ್ಸ್ ಇಂಟರ್ನ್ಯಾಷನಲ್ ಇಂಕ್‌ನ ಸಂಸ್ಥಾಪಕ ಡೀನ್ ಆರ್ ಕ್ಯಾಂಪ್‌ಬೆಲ್ ಈ ದಿನವನ್ನು ಮೊದಲು ಜಾರಿಗೆ ತಂದರು. 1990 ರಲ್ಲಿ, ಎಡಗೈಯನ್ನು ಉತ್ತೇಜಿಸುವ ಉದ್ದೇಶದಿಂದ ಲೆಫ್‌ಥ್ಯಾಂಡರ್ಸ್ ಇಂಟರ್‌ನ್ಯಾಷನಲ್ ಕ್ಲಬ್ ಅನ್ನು ಸ್ಥಾಪಿಸಲಾಯಿತು. 1992 ರಲ್ಲಿ, “ಎಡಗೈಯವರ ಅನುಕೂಲಗಳು ಮತ್ತು ಅನಾನುಕೂಲಗಳು” ಕುರಿತು ಜಾಗೃತಿ ಮೂಡಿಸಲು ಇದೇ ಕ್ಲಬ್ ಇಂಟರ್ ನ್ಯಾಷನಲ್ ಲೆಫ್ಟ್ ಹ್ಯಾಂಡರ್ಸ್ ಡೇಯನ್ನು ಆರಂಭಿಸಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 13 ರಂದು ಅಂತಾರಾಷ್ಟ್ರೀಯ ಎಡಚರರ ದಿನವನ್ನು ಆಚರಿಸಲಾಗುತ್ತಿದೆ.
ಯಶಸ್ಸಿನ ಹಾದಿ ತುಳಿದ ಎಡಗೈ ಸಾಧಕರುಗಳು
- ಮಹಾತ್ಮ ಗಾಂಧಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯನ್ನು ಉತ್ತೇಜಿಸಿದರು. ಬ್ರಿಟಿಷರ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಅವರ ಈ ಸತ್ಯಾಗ್ರಹದ ಪರಿಕಲ್ಪನೆ ಭಾರತವನ್ನು ಸ್ವಾತಂತ್ರ್ಯಗೊಳಿಸಿತು. ಇಂದೂ ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವ ಗಾಂಧೀಜಿಯವರು ಎಡಗೈಯನ್ನೇ ಹೆಚ್ಚಾಗಿ ಬಳಸುತ್ತಿದ್ದರು.
- ನರೇಂದ್ರ ಮೋದಿ: ಇಂದು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಎಡಗೈ ಬಳಸುವರರಲ್ಲಿ ಒಬ್ಬರಾಗಿದ್ದಾರೆ.
- ಮದರ್ ತೆರೇಸಾ: ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಸೇವೆಗೆ ತನ್ನ ಬದುಕನ್ನು ಮುಡುಪಾಗಿಟ್ಟ ಮದರ್ ತೆರೇಸಾ ಎಲ್ಲರಿಗೂ ಚಿರಪರಿಚಿತವಾದ ಹೆಸರು. ಆದರೆ ಅವರು ಎಡಗೈ ಬಳಕೆಯನ್ನು ಮಾಡುತ್ತಿದ್ದರಂತೆ.
- ಸಚಿನ್ ತೆಂಡೂಲ್ಕರ್: ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್, ಆಟೋಗ್ರಾಫ್ ಬರೆಯುವಾಗ ಮತ್ತು ಟೇಬಲ್ ಟೆನಿಸ್ ಆಡುವಾಗ ತಮ್ಮ ಎಡಗೈಯನ್ನೇ ಹೆಚ್ಚು ಬಳಸುತ್ತಾರೆ.
- ಸೌರವ್ ಗಂಗೂಲಿ: ಭಾರತೀಯ ಕ್ರಿಕೆಟ್ ಲೋಕದಲ್ಲಿ ಗುರುತಿಸಿಕೊಂಡಿರುವ ಸೌರವ್ ಗಂಗೂಲಿ ತಮ್ಮ ಬಲಗೈಯನ್ನು ಬರವಣಿಗೆ ಹಾಗೂ ಬೌಲಿಂಗ್ ಗೆ ಬಲಗೈಯನ್ನೇ ಹೆಚ್ಚು ಬಳಸುತ್ತಾರೆ. ಆದರೆ ಬ್ಯಾಟಿಂಗ್ ವೇಳೆ ಅವರು ಎಡಗೈ ಬಳಸುತ್ತಾರೆ.
- ರತನ್ ಟಾಟಾ: ಭಾರತೀಯ ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾರವರು ಎಡಚರಾಗಿದ್ದಾರೆ. ಹೀಗಾಗಿ 2015 ರ ವರೆಗೆ, ಟಾಟಾದ ಟ್ರಸ್ಟ್‌ಗಳು ಭಾರತೀಯ ಎಡಚರ ಕ್ಲಬ್ ಗೆ ವಿದ್ಯಾರ್ಥಿವೇತನವನ್ನು ನೀಡಿವೆ.
- ಅಮಿತಾಬ್ ಬಚ್ಚನ್: ಖ್ಯಾತ ನಟರಾಗಿ ಬಾಲಿವುಡ್ ರಂಗದಲ್ಲಿ ಗುರುತಿಸಿಕೊಂಡಿರುವ ಶಹನ್‌ಶಾ ಅಮಿತಾಬ್ ಬಚ್ಚನ್ ಅವರು ಕೂಡ ಎಡಗೈಯಲ್ಲಿ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ