
ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತ ಹೇಳ್ತಾರೆ. ವಿದ್ಯಾರ್ಥಿ (Students) ಜೀವನವು ನಮ್ಮ ಜೀವನದ ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು, ಈ ಸಮಯದಲ್ಲಿ ನಾವು ಹೇಗೆ ಇರುತ್ತೇವೆ ಅನ್ನೋದರ ಮೇಲೆ ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ. ಹೌದು ಈ ಸಮಯದಲ್ಲಿನ ಕಠಿಣ ಪರಿಶ್ರಮ, ಉತ್ತಮ ಅಭ್ಯಾಸ, ಹವ್ಯಾಸಗಳು ಉತ್ತಮ ಭವಿಷ್ಯವನ್ನು ರೂಪಿಸಲು ಮುನ್ನುಡಿ ಬರೆಯುತ್ತದೆ. ಅದೇ ಕೆಟ್ಟ ಅಭ್ಯಾಸಗಳು ಭವಿಷ್ಯವನ್ನೇ ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನೇ ಮೈಗೂಡಿಸಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳು ಈ ಕೆಲವು ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿದರೆ, ಈ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಬಹುದು.
ಸಮಯವು ಅತ್ಯಂತ ಅಮೂಲ್ಯವಾದದ್ದು, ಅದನ್ನು ವ್ಯರ್ಥ ಮಾಡದೇ ಸರಿಯಾಗಿ ಬಳಸಿಕೊಳ್ಳುವ ವಿದ್ಯಾರ್ಥಿಗಳು ಮಾತ್ರ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರುತ್ತಾರೆ. ಹೌದು ವೈದ್ಯರು, ಎಂಜಿನಿಯರ್ಗಳು ಅಥವಾ ಐಎಎಸ್/ಪಿಸಿಎಸ್ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಮಯ ನಿರ್ವಹಣೆ ಬಹಳ ಮುಖ್ಯ . ಸಮಯ ನಿರ್ವಹಣೆಯ ಮೂಲಕ ಯಶಸ್ಸನ್ನು ಸಾಧಿಸಬಹುದು. ಸಮಯವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಕೆಲಸಗಳು ಬಾಕಿ ಉಳಿಯುತ್ತದೆ, ಇದು ದೈನಂದಿನ ದಿನಚರಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಯಶಸ್ಸನ್ನು ಸಾಧಿಸಲು ಸಣ್ಣ ಗುರಿಗಳನ್ನು ಹೊಂದಿಸುವ ಮತ್ತು ಬೆಳಗ್ಗೆ ಬೇಗ ಏಳುವ ಮೂಲಕ ದೈನಂದಿನ ದಿನಚರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ವೃತ್ತಿಪರ ಜೀವನ ಮತ್ತು ಕೆಲಸದಲ್ಲಿ ಸಣ್ಣ ತಪ್ಪುಗಳು ಸಹ ಗಮನಾರ್ಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ವಿದ್ಯಾರ್ಥಿಗಳು ಇಂದಿನಿಂದಲೇ ಪ್ರತಿಯೊಂದು ಕೆಲಸದಲ್ಲೂ ಶ್ರದ್ಧೆಯಿಂದ ಗಮನಹರಿಸಬೇಕು, ತಮ್ಮ ಕೆಲಸ ಕಾರ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದನ್ನು ತಪ್ಪಿಸಬೇಕು. ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಜೀವನದಲ್ಲಿ ಏಕಾಗ್ರತೆಯನ್ನು ತರದ ಹೊರತು, ಎಂದಿಗೂ ಯಶಸ್ಸನ್ನು ಸಾಧಿಸುವುದಿಲ್ಲ. ಅದರಲ್ಲೂ ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಈ ಸಮಯದಲ್ಲಿ ಓದು ಮತ್ತು ಗುರಿಗಳ ಮೇಲೆ ಗಮನ ಹರಿಸುವುದನ್ನು ಬಿಟ್ಟು, ಮೋಜು ಮಸ್ತಿಯಲ್ಲಿ ಸಮಯ ಕಳೆದರೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಗಮನ ಯಾವಾಗಲೂ ಗುರಿ ಸಾಧಿಸುವುದರ ಮೇಲೆ ಇರಬೇಕು. ಓದಿನ ಮೇಲೆ ಏಕಾಗ್ರತೆ ಇರಬೇಕು. ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಧ್ಯಾನ ಮತ್ತು ಯೋಗಾಭ್ಯಾಸವನ್ನು ನಿತ್ಯ ಅಭ್ಯಾಸ ಮಾಡಬೇಕು.
ಇದನ್ನೂ ಓದಿ: ಪೋಷಕರು ಮಾತ್ರವಲ್ಲ ಶಿಕ್ಷಕರೂ ಕೂಡ ಮಕ್ಕಳಿಗೆ ಈ ಅತ್ಯಮೂಲ್ಯ ಜೀವನ ಪಾಠಗಳನ್ನು ಕಲಿಸಬೇಕು
ಸಾಮಾನ್ಯವಾಗಿ ಮಕ್ಕಳು, ಯುವಕರು ಶಿಕ್ಷಕರು, ಪೋಷಕರು ಅಥವಾ ಸ್ನೇಹಿತರು ಹೇಳುವ ಯಾವುದೇ ಮಾತಿಗೆ ಬೇಗನೆ ಕೋಪಗೊಳ್ಳುತ್ತಾರೆ. ಅವರು ಏನೇ ಹೇಳಿದರೂ ನಮ್ಮ ಒಳ್ಳೆಯದಕ್ಕಾಗಿಯೇ ಅಗಿರುತ್ತದೆ. ಆದ್ದರಿಂದ ಹಿರಿಯರು ಹೇಳುವ ಬುದ್ಧಿಮಾತನ್ನು ಸ್ವೀಕರಿಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯಬೇಕು. ಆಗ ಮಾತ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಅಧ್ಯಯನ ಅಥವಾ ನಿಯೋಜನೆಗಳನ್ನು ಮುಂದೂಡುವುದು ಸಾಮಾನ್ಯ. ಇದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದಂತೆ. ಸಣ್ಣದೆಂದು ತೋರುವ ಈ ಅಭ್ಯಸ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವಿಳಂಬ ಮಾಡದೆ ಕೆಲಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು.
ಇದಲ್ಲದೆ ಅತಿಯಾದ ಮೊಬೈಲ್ ಬಳಕೆ, ಬೆಳಗ್ಗೆ ತಡವಾಗಿ ಎದ್ದೇಳುವುದು ಜಡ ಜೀವನಶೈಲಿ ಇವೆಲ್ಲವೂ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ