Children’s Day 2026: ಪೋಷಕರು ಮಾತ್ರವಲ್ಲ ಶಿಕ್ಷಕರೂ ಕೂಡ ಮಕ್ಕಳಿಗೆ ಈ ಅತ್ಯಮೂಲ್ಯ ಜೀವನ ಪಾಠಗಳನ್ನು ಕಲಿಸಬೇಕು
ಇಂದಿನ ಮಕ್ಕಳೇ ನಾಳಿನ ರಾಷ್ಟ್ರದ ರುವಾರಿಗಳು. ಹೀಗಿರುವಾಗ ಈ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ಬಹಳ ಮುಖ್ಯ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ನೀಡುವುದು ಬಹಳ ಮುಖ್ಯ. ಅದೇ ರೀತಿ ಉತ್ತಮ ಜೀವನ ಪಾಠಗಳನ್ನು ಕಲಿಸುವುದು ಕೂಡ ಅಷ್ಟೇ ಮುಖ್ಯ. ಮಕ್ಕಳ ದಿನಾಚರಣೆಯ ಈ ಶುಭ ದಿನದಂದು ಪೋಷಕರು ಮತ್ತು ಶಿಕ್ಷಕರು ಭವಿಷ್ಯದ ಅಮೂಲ್ಯ ಸಂಪತ್ತಾಗಿರುವ ಮಕ್ಕಳಿಗೆ ಯಾವೆಲ್ಲ ಜೀವನ ಪಾಠಗಳನ್ನು ಕಲಿಸಿಕೊಡಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ಪಂಡಿತ್ ಜವಾಹರ್ಲಾಲ್ ನೆಹರು ಅವರಿಗೆ ಮಕ್ಕಳೆಂದರೆ (children) ಪಂಚಪ್ರಾಣ. ಮಕ್ಕಳು ಸಹ ಅವರು ಪ್ರೀತಿಯಿಂದ ನೆಹರು ಚಾಚಾ ಎಂದೇ ಕರೆಯುತ್ತಿದ್ದರು. ಮಕ್ಕಳ ಬಗ್ಗೆ ತುಂಬಾ ಒಲವನ್ನು ಹೊಂದಿದ್ದ ಅವರು, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಶಿಕ್ಷಣ ಮತ್ತು ಪ್ರೀತಿ ನೀಡಿದರೆ ಅವರು ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದು ನಂಬಿದ್ದರು. ಜೊತೆಗೆ ದೇಶದ ಮಕ್ಕಳುಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕು ಎಂಬುದು ನೆಹರು ಅವರ ಮುಖ್ಯ ಧ್ಯೇಯವಾಗಿತ್ತು. ಮಕ್ಕಳ ಮೇಲಿರುವ ಅವರ ಈ ಪ್ರೀತಿಗಾಗಿ ಅವರ ಜನ್ಮ ಜಯಂತಿಯಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆಯ ಈ ಶುಭ ದಿನದಂದು ಪೋಷಕರು ಮತ್ತು ಶಿಕ್ಷಕರು ಭವಿಷ್ಯದ ಅಮೂಲ್ಯ ಸಂಪತ್ತಾಗಿರುವ ಮಕ್ಕಳಿಗೆ ಯಾವೆಲ್ಲ ಜೀವನ ಪಾಠಗಳನ್ನು ಕಲಿಸಿಕೊಡಲೇಬೇಕು ಎಂಬುದನ್ನು ನೋಡೋಣ ಬನ್ನಿ.
ಮಕ್ಕಳ ದಿನಾಚರಣೆಯ ಇತಿಹಾಸವೇನು?
1954 ರಲ್ಲಿ ವಿಶ್ವಸಂಸ್ಥೆಯು ನವೆಂಬರ್ 20 ರಂದು ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲು ಘೋಷಿಸಿತು. ಭಾರತವು ಇದೇ ದಿನ ಈ ದಿನವನ್ನು ಆಚರಿಸುತ್ತಿತ್ತು. ಆದರೆ 1964 ರಲ್ಲಿ ಪಂಡಿತ್ ಜವಾಹರಲಾಲದ ನೆಹರು ಅವರ ನಿಧನದ ನಂತರ ಭಾರತೀಯ ಸಂಸತ್ತು ನೆಹರೂರವರ ಮಕ್ಕಳ ಮೇಲಿನ ಪ್ರೀತಿಯನ್ನು ಸ್ಮರಿಸಲು ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನವಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಮಕ್ಕಳಿಗೆ ಸಮರ್ಪಿಸಲಾಗಿದೆ.
ಮಕ್ಕಳಿಗೆ ಕಲಿಸಿಕೊಡಲೇಬೇಕಾದ ಜೀವನ ಪಾಠಗಳಿವು:
ಸತ್ಯ ಮತ್ತು ಪ್ರಾಮಾಣಿಕತೆ:
ಮಕ್ಕಳಿಗೆ ಯಾವಾಗಲೂ ಸತ್ಯವನ್ನೇ ಹೇಳುವ ಅಭ್ಯಾಸವನ್ನು ಬೆಳೆಸಬೇಕು. ಮಕ್ಕಳು ತಪ್ಪು ಮಾಡಿ ಸತ್ಯವನ್ನೇ ಹೇಳಿದರೆ, ಅವರನ್ನು ಗದರಿಸಬಾರದು, ಬದಲಾಗಿ, ಸತ್ಯವನ್ನೇ ಹೇಳುವುದು ಯಾವಾಗಲೂ ಸರಿಯಾದ ಕೆಲಸ ಎಂದು ವಿವರಿಸಬೇಕು. ಪೋಷಕರು ಮಕ್ಕಳೊಂದಿಗೆ ಪ್ರಾಮಾಣಿಕವಾಗಿದ್ದರೆ ಮಕ್ಕಳು ಸಹ ಅದನ್ನೇ ಕಲಿಯುತ್ತಾರೆ.
ಕಠಿಣ ಪರಿಶ್ರಮದ ಮಹತ್ವ:
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರ ಕಡೆಯಿಲ್ಲ ಎಲ್ಲವನ್ನೂ ಬೇಗನೆ ಸಿಗುತ್ತದೆ. ಹೀಗೆ ಅವರು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟರೆ, ಹಣದ ಮೌಲ್ಯವೂ ಗೊತ್ತಾಗೋದಿಲ್ಲ, ಹಠಮಾರಿತನವನ್ನು ಸಹ ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಕಠಿಣ ಪರಿಶ್ರಮವಿಲ್ಲದೆ ಏನೂ ಬರುವುದಿಲ್ಲ ಎಂದು ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಕಲಿಸುವುದು ಮುಖ್ಯ. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಯಶಸ್ಸು ಅನ್ನೋದು ಲಭಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು.
ಇತರರನ್ನು ಗೌರವಿಸುವುದು ಮತ್ತು ಸಹಾಯ ಮಾಡುವ ಗುಣ:
ಹಿರಿಯರಾಗಿರಲಿ, ಕಿರಿಯರಾಗಿರಲಿ ಅಥವಾ ಅಪರಿಚಿತರಾಗಿರಲಿ ಎಲ್ಲರನ್ನೂ ಗೌರವಿಸುವುದು ಮುಖ್ಯ ಎಂದು ಮಕ್ಕಳಿಗೆ ಕಲಿಸಿ. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವುದನ್ನು ಮಾನವೀಯತೆ ಎಂಬುದನ್ನು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಕಲಿಸಿಕೊಡಬೇಕು. ಮಕ್ಕಳಿಗೆ ಅವರ ಆಟಿಕೆಗಳನ್ನು ಹಂಚಿಕೊಳ್ಳುವುದು ಅಥವಾ ಸ್ನೇಹಿತರಿಗೆ ಸಹಾಯ ಮಾಡುವಂತಹ ಸಣ್ಣ ವಿಷಯಗಳನ್ನು ಕಲಿಸಿ. ಹೀಗೆ ಮಾಡಿದಾಗ, ಉತ್ತಮ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಇದನ್ನೂ ಓದಿ: ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ದೇಶದ ಅಭಿವೃದ್ಧಿ ಸಾಧ್ಯ
ಸಮಯದ ಮೌಲ್ಯ:
ಸಮಯದ ಮಹತ್ವವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಎಲ್ಲಾ ಕೆಲಸವನ್ನು ಸಮಯಕ್ಕೆ ಮಾಡಿ ಮುಗಿಸಬೇಕು ಎಂಬುದನ್ನು ಕಲಿಸಿ. ಮೊದಲು ಪಾಠ ನಂತರ ಆಟ, ಸಮಯಕ್ಕೆ ಸರಿಯಾಗಿ ಮಲಗುವುದು ಬೆಳಗ್ಗೆ ಬೇಗನೆ ಎಚ್ಚರಗೊಳ್ಳುವುದುಈ ರೀತಿಯ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿ. ಈ ರೀತಿಯ ಅಭ್ಯಾಸಗಳು ಇದು ಶಿಸ್ತು ಮತ್ತು ಜವಾಬ್ದಾರಿ ಎರಡನ್ನೂ ಬೆಳೆಸುತ್ತದೆ.
ತಾಳ್ಮೆಯನ್ನು ಕಲಿಸಿ:
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರಿಗೆ ತಾಳ್ಮೆಯ ಕೊರತೆಯಿದೆ; ಅವರು ಎಲ್ಲವನ್ನೂ ಬೇಗನೆ ಬಯಸುತ್ತಾರೆ. ಆದರೆ ನಿಮ್ಮ ಮಕ್ಕಳಿಗೆ ತಾಳ್ಮೆಯಿಂದಿರಲು ಕಲಿಸಿ. ತಾಳ್ಮೆ ಮತ್ತು ಪರಿಶ್ರಮದಿಂದ ಮಾತ್ರ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಿ. ಅಲ್ಲದೆ, ಮಕ್ಕಳಲ್ಲಿ ಹಂಚಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ಸಂಬಂಧಗಳನ್ನು ಬಲಪಡಿಸುತ್ತದೆ.
ಇದು ಮಾತ್ರವಲ್ಲದೆ ದೇಶಭಕ್ತಿ, ಸಹಾನೂಭೂತಿ, ಸಹಾಯ ಮನೋಭಾವ, ಶಿಸ್ತು ಇವೆಲ್ಲವನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು. ಆಗ ಮಾತ್ರ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
