AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳಿನಾಡಿನಲ್ಲೂ ಪಾರುಪತ್ಯ ಆರಂಭಿಸಿದ ‘ರಾಮಾಯಣ’; ಬಾಕ್ಸ್ ಆಫೀಸ್ ಸುನಾಮಿ ನಿರೀಕ್ಷೆ

ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾ ತಮಿಳುನಾಡಿನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸೂರ್ಯ ಅಭಿನಯದ ತಮಿಳು ಚಿತ್ರ 'ಸೀನ್' ಗಳಿಕೆಗಿಂತಲೂ ರಾಮಾಯಣ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಈಗಾಗಲೇ 30 ಕೋಟಿ ರೂ. ಗಡಿ ದಾಟಿದ್ದು, 60 ಕೋಟಿ ತಲುಪುವುದು ಖಚಿತವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ತಮಿಳಿನಾಡಿನಲ್ಲೂ ಪಾರುಪತ್ಯ ಆರಂಭಿಸಿದ ‘ರಾಮಾಯಣ’; ಬಾಕ್ಸ್ ಆಫೀಸ್ ಸುನಾಮಿ ನಿರೀಕ್ಷೆ
ರಾಮಾಯಣ-ಸೀನ್ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on:Nov 14, 2026 | 9:15 AM

Share

ಬಾಕ್ಸ್ ಆಫೀಸ್‌ನಲ್ಲಿ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ‘ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. . ಈ ಪೌರಾಣಿಕ ಚಿತ್ರದ ಅಬ್ಬರ ಯಾವ ಮಟ್ಟಿಗಿದೆ ಎಂದರೆ, ತಮಿಳುನಾಡಿನ ನೆಲದಲ್ಲೂ ಇದರ ಹವಾ ಜೋರಾಗಿದೆ. ತಮಿಳು ನಟ ಸೂರ್ಯ ಅವರ ಬಹುನಿರೀಕ್ಷಿತ ‘ಸೀನ್’ ಸಿನಿಮಾದ ಕಲೆಕ್ಷನ್​ಗೆ ಕಾಂಪಿಟೇಷನ್ ಕೊಡುವ ರೀತಿಯಲ್ಲಿ ‘ರಾಮಾಯಣ’ ಸಾಗುತ್ತಾ ಇದೆ.

ಶನಿವಾರದ ಅಡ್ವಾನ್ಸ್ ಬುಕಿಂಗ್ ಕೂಡ ಈ ಮಾತಿಗೆ ಸಾಕ್ಷಿಯಾಗಿದೆ. ಬುಕಿಂಗ್ ವಿಷಯದಲ್ಲಿ ತಮಿಳುನಾಡಿನಲ್ಲಿ ‘ಸೀನ್’ ಚಿತ್ರಕ್ಕಿಂತ ‘ರಾಮಾಯಣ’ ಎರಡು ಪಟ್ಟು ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿದೆ. ತಮಿಳುನಾಡಿನಲ್ಲಿ ತಮಿಳಿಗೆ ಡಬ್ ಆಗಿ ರಿಲೀಸ್ ಆದ ಹಿಂದಿ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಎಂಬುದು ವಿಶೇಷ.

ಈ ಬೆಳವಣಿಗೆ ಬಗ್ಗೆ ಚಿತ್ರರಂಗದವರೇ ವಿಶ್ಲೇಷಕರು ಅಚ್ಚರಿಪಡಿಸಿದ್ದಾರೆ. ಈಗಾಗಲೇ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸಿನಿಮಾ 30 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಇದೇ ವೇಗ ಮುಂದುವರಿದರೆ, ಕಲೆಕ್ಷನ್ ಸುಲಭವಾಗಿ 60 ಕೋಟಿ ರೂಪಾಯಿ ಗಡಿ ದಾಟುವುದು ಖಚಿತವಾಗಿದೆ.

ದಕ್ಷಿಣ ಭಾರತದ ಮಾರುಕಟ್ಟೆಯಲ್ಲೂ ಉತ್ತರ ಭಾರತದ ಸಿನಿಮಾ ಈ ರೀತಿಯ ಯಶಸ್ಸು ಕಾಣುತ್ತಿರುವುದು ನಿಜಕ್ಕೂ ಬಾಕ್ಸ್ ಆಫೀಸ್​​ ವಿಶ್​ಲೇಷಕರಿಗೆ ಅಚ್ಚರಿ ತಂದಿದೆ. ಯಶ್ ಹವಾ, ರಾಮಾಯಣ ಎಂಬ ಸೆಂಟಿಮೆಂಟ್ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಸಿನಿಪ್ರಿಯರಿಂದ ಈ ಚಿತ್ರಕ್ಕೆ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ. ಮುಂಬರುವ ದಿನಗಳಲ್ಲಿ ಈ ಮಹಾಕಾವ್ಯ ಸಿನಿಮಾ ಇನ್ನೂ ಯಾವೆಲ್ಲ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಎರಡನೇ ಶುಕ್ರವಾರವೂ ಭರ್ಜರಿ ಕಲೆಕ್ಷನ್ ಮಾಡಿದ ‘ರಾಮಾಯಣ’ ಸಿನಿಮಾ; 1100 ಕೋಟಿ ರೂ. ಗಳಿಕೆ

ಬಾಕ್ಸ್ ಆಫೀಸ್‌ನ ‘ರಾಮಾಯಣ’ ಸಿನಿಮಾ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪ್ರಾದೇಶಿಕ ಗಡಿಗಳನ್ನು ಮೀರಿ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಗಳಿಕೆ ಮತ್ತಷ್ಟು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ಎಲ್ಲಾ ಸಾಧ್ಯತೆಗಳಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:13 am, Sat, 14 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More