ಭಾಷೆ ಹಾಗೂ ಭಾಷಾಂತರಕಾರರಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಭಾಷಾಂತರಕಾರರಿಲ್ಲದೆ ಹೋದರೆ ಇಷ್ಟದ ಲೇಖಕರ ಪುಸ್ತಕಗಳನ್ನು ಓದಲು ಸಾಧ್ಯವಿಲ್ಲ. ವಿದೇಶಿ ಸಿನಿಮೀಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಭಾಷಾಂತರಕಾರರು ಸಮಾಜದ ಅನಿವಾರ್ಯ ಭಾಗವಾಗಿದೆ. ರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ ಸಂಭಾಷಣೆ, ತಿಳುವಳಿಕೆ ಹಾಗೂ ಪರಸ್ಪರ ಸಂವಹನಕ್ಕೆ ಸಹಾಯ ಮಾಡುವಲ್ಲಿ ಇವರ ಪಾತ್ರ ಅಗಾಧವಾಗಿದೆ. ಭಾಷಾಂತರಕಾರರನ್ನು ಗೌರವಿಸುವ ಸಲುವಾಗಿ ಸೆಪ್ಟೆಂಬರ್ 30 ರಂದು ಅಂತಾರಾಷ್ಟ್ರೀಯ ಅನುವಾದ ದಿನವು ಬಹಳ ಮುಖ್ಯವಾಗಿದೆ.
ಯುಎನ್ ವೆಬ್ಸೈಟ್ ಪ್ರಕಾರವಾಗಿ ಸೇಂಟ್, ಜೆರೋಮ್ ದೇಶದ ಈಶಾನ್ಯ ಪ್ರದೇಶದ ಇಟಾಲಿಯನ್ ಪಾದ್ರಿಯಾಗಿದ್ದು, ಹೊಸ ಒಡಂಬಡಿಕೆಯನ್ನು ಗ್ರೀಕ್ ಹಸ್ತಪ್ರತಿಗಳಿಂದ ಲ್ಯಾಟಿನ್ ಭಾಷೆಗೆ ಭಾಷಾಂತರಿಸಿದ್ದರು. ಅವರ ಸ್ಮರಣಾರ್ಥವಾಗಿ ಅಂತಾರಾಷ್ಟ್ರೀಯ ಅನುವಾದ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಟ್ರಾನ್ಸ್ಲೇಟರ್ ಈ ದಿನವನ್ನು 1953ರಂದು ಆರಂಭಿಸಿತು. 2017 ಮೇ 24ರಂದು ಜನರಲ್ ಅಸೆಂಬ್ಲಿ 71/288ರ ನಿರ್ಣಯವನ್ನು ಅಂಗೀಕರಿಸಲಾಯಿತು.
ರಾಷ್ಟ್ರಗಳ ನಡುವೆ ಸಂಬಂಧ ಮತ್ತು ಭಾಷಾ ತಜ್ಞರ ಪ್ರಾಮುಖ್ಯತೆ, ಶಾಂತಿ, ತಿಳುವಳಿಕೆ ಮತ್ತು ಪ್ರಗತಿಯನ್ನು ಪ್ರೋತ್ಸಾಹಿಸಲು ಸೆಪ್ಟೆಂಬರ್ 30ರಂದು ಅಂತಾರಾಷ್ಟ್ರೀಯ ಅನುವಾದ ದಿನವನ್ನು ವಿಶ್ವ ಸಂಸ್ಥೆ ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಅನುವಾದ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಭಾಷಾಂತರ ಉದ್ಯಮ ಹಾಗೂ ನಮ್ಮ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಭಾಷೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನದ ಆಚರಣೆಯೂ ಮಹತ್ವದ್ದಾಗಿದೆ.
ಇದನ್ನೂ ಓದಿ: ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳಿವು
ಭಾಷಾಂತರಕಾರರಾಗಿ ವೃತ್ತಿಯನ್ನು ಆಯ್ಕೆ ಮಾಡುವ ಅಭ್ಯರ್ಥಿಗಳು ವೃತ್ತಿಪರವಾಗಿ ಮುಂದುವರೆಯಲು ಮೌಖಿಕ ಸಂವಹನ, ಓದುವ ಗ್ರಹಿಕೆ, ಬರವಣಿಗೆ ಕೌಶಲ್ಯಗಳು, ಜ್ಞಾನ ಹಾಗೂ ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿರಲೇಬೇಕು. ಈ ಭಾಷಾಂತರಕಾರರಿಗೆ ವಿಶ್ವವಿದ್ಯಾನಿಲಯಗಳು, ವೈದ್ಯಕೀಯ ಪ್ರತಿಲೇಖನಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾರುಕಟ್ಟೆ ಸಮೀಕ್ಷೆ ಸಂಸ್ಥೆಗಳು ಸೇರಿದಂತೆ ಮುಂತಾದವುಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಲಭ್ಯವಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ