AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳಿವು

ಯಾವ ಸಂಬಂಧಗಳಲ್ಲಿ ಮನಸ್ತಾಪ ಹಾಗೂ ಜಗಳಗಳು ಇಲ್ಲ ಹೇಳಿ,.ಆದರೆ ಜಗಳವೇ ಜೀವನವಾಗಿಬಿಟ್ಟರೆ ನೆಮ್ಮದಿಗೆ ಜಾಗವಿಲ್ಲ. ಆದರೆ ಮುನಿಸು ಇದ್ದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಗಂಡ ಹೆಂಡತಿ ಸಂಬಂಧವು ಇದಕ್ಕೆ ಹೊರತಾಗಿಲ್ಲ. ಸಂಗಾತಿಗಳಿಬ್ಬರ ನಡುವೆ ಬಾಂಧವ್ಯವನ್ನು ಈ ಸಣ್ಣ ಪುಟ್ಟ ವಿಚಾರಗಳನ್ನು ಹಾಳು ಮಾಡುತ್ತವೆ. ಇವುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕೆಂದು ಚಾಣಕ್ಯನು ತಿಳಿಸುತ್ತಾನೆ.

Chanakya Niti : ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳಿವು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 28, 2024 | 5:42 PM

Share

ಸಂಬಂಧಗಳು ಬಹಳ ಸೂಕ್ಷ್ಮವಾದುದು. ಯಾವುದೇ ಸಂಬಂಧಗಳಿರಲಿ ಅದನ್ನು ಬಹಳ ಕಾಳಜಿಯುತವಾಗಿ ನಿಭಾಯಿಸಿಕೊಂಡು ಹೋಗಬೇಕು. ಕೆಲವೊಮ್ಮೆ ನಮ್ಮ ವರ್ತನೆ ಹಾಗೂ ನಡವಳಿಕೆಯಿಂದಲೇ ಸಂಬಂಧಗಳು ಹಾಳಾಗುತ್ತದೆ. ಅದರಲ್ಲಿಯೂ ಈ ದಂಪತಿಗಳ ನಡುವೆ ವೈಮನಸ್ಸು ಮೂಡಲು ಹಾಗೂ ಸಂಬಂಧವು ಹಾಳಾಗಲು ಈ ಕೆಲವು ಅಂಶಗಳು ಕಾರಣವಾಗುತ್ತದೆ. ಹೀಗಾಗಿ ಸತಿಪತಿಗಳಿಬ್ಬರೂ ಈ ಕೆಲವು ವಿಷಯಗಳಲ್ಲಿ ಬದಲಾವಣೆ ಮಾಡಿಕೊಂಡು ಜೊತೆಗೆ ಬಾಳುವುದು ಸಂಬಂಧವನ್ನು ಗಟ್ಟಿಯಾಗಿಸುತ್ತದೆ.

  • ಸಣ್ಣ ಪುಟ್ಟ ವಿಷಯಕ್ಕೂ ಕೋಪಿಸುವುದು : ಚಾಣಕ್ಯ ನೀತಿಯ ಪ್ರಕಾರ, ಕೋಪವು ಎಲ್ಲರಿಗೂ ಕೆಟ್ಟದು. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಕೋಪವು ಹಾನಿಕಾರಕವೆಂದು ಹೇಳಿದ್ದಾನೆ. ಸಂಗಾತಿಗಳಿಬ್ಬರೂ ಕೋಪಗೊಂಡಾಗ ಇಬ್ಬರಿಗೂ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಣ್ಣ ವಿಷಯಗಳು ವೈವಾಹಿಕ ಜೀವನದಲ್ಲಿ ದೊಡ್ಡ ತಿರುವು ತೆಗೆದುಕೊಳ್ಳುತ್ತದೆ. ಹೀಗಾಗಿ ಗಂಡ ಹೆಂಡತಿಯರಿಬ್ಬರೂ ದೂರವಾಗುವ ಸನ್ನಿವೇಶವು ಎದುರಾಗುತ್ತದೆ.
  • ಒಬ್ಬರನ್ನೊಬ್ಬರು ಗೌರವಿಸದಿರುವುದು: ಪ್ರತಿ ಸಂಬಂಧದಲ್ಲೂ ಗೌರವ ಬಹಳ ಮುಖ್ಯ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಪರಸ್ಪರ ಗೌರವವು ನೀಡುವುದು ಅವಶ್ಯಕ. ಸಂಬಂಧದಲ್ಲಿ ಗೌರವವನ್ನು ನೀಡದೇ ಹೋದಲ್ಲಿ ವೈವಾಹಿಕ ಜೀವನವು ಹಾಳಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾನೆ ಚಾಣಕ್ಯ.
  • ಸಂವಹನದ ಕೊರತೆ : ಪತಿ-ಪತ್ನಿಯರಿಬ್ಬರೂ ಸುಖ-ದುಃಖದಲ್ಲಿ ಪಾಲುದಾರರಾಗಿದ್ದು, ಪರಸ್ಪರ ಮಾತನಾಡುವುದು ಬಹಳ ಮುಖ್ಯ. ಒಬ್ಬರು ಏನನ್ನಾದರೂ ಮನಸ್ಸಿನಲ್ಲಿಟ್ಟುಕೊಂಡರೆ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ. ನೀವು ಪರಸ್ಪರ ಮಾತನಾಡದಿದ್ದರೆ ನಿಮ್ಮ ಜೀವನದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
  • ಸತ್ಯವನ್ನು ಮರೆಮಾಚುವುದು : ಪತಿ-ಪತ್ನಿಯರ ನಡುವಿನ ಸಂಬಂಧವು ತುಂಬಾ ಸೂಕ್ಷ್ಮವಾಗಿದೆ ಎಂದು ಹೇಳಲಾಗುತ್ತದೆ. ಎಂದಿಗೂ ಕೂಡ ಜೀವನ ಸಂಗಾತಿಯಿಂದ ಸತ್ಯವನ್ನು ಮರೆಮಾಡಿ ಸುಳ್ಳು ಹೇಳುವುದು ಸರಿಯಲ್ಲ. ನೀವು ಮುಚ್ಚಿಟ್ಟ ಸತ್ಯವು ಮೂರನೇ ವ್ಯಕ್ತಿಯಿಂದ ತಿಳಿದರೆ ಸಂಗಾತಿಯ ಮೇಲಿದ್ದ ನಂಬಿಕೆಯೂ ಕಡಿಮೆಯಾಗುತ್ತದೆ. ಇದರಿಂದ ದಾಂಪತ್ಯ ಜೀವನವು ಹಾಳಾಗುವ ಸಾಧ್ಯತೆಯಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್