ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಅಂತೆ; ಯಾಕೆ ಗೊತ್ತಾ?

ಶಾಪಿಂಗ್‌ ಮಾಡೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಳೆಯರಂತೂ ದಿನನಿತ್ಯ ಬೇಕಾದ್ರೂ ಶಾಪಿಂಗ್‌ ಮಾಡಲು ರೆಡಿ ಇರ್ತಾರೆ. ಕೆಲವರಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡೋದು ಇಷ್ಟವಾದ್ರೆ, ಇನ್ನೂ ಕೆಲವರಿಗೆ ಆಫ್‌ಲೈನ್‌ ಶಾಪಿಂಗ್‌ ಇಷ್ಟವಾಗುತ್ತದೆ. ತಜ್ಞರ ಪ್ರಕಾರ ಆನ್‌ಲೈನ್‌ ಬದಲು ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಅಂತೆ. ಯಾಕೆ ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್‌ ಶಾಪಿಂಗ್‌ಗಿಂತ  ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಅಂತೆ; ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 01, 2025 | 7:12 PM

ಶಾಪಿಂಗ್‌ (shopping) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಳೆಯರ ನೆಚ್ಚಿನ ಕೆಲಸವೇ ಶಾಪಿಂಗ್.‌ ಹೌದು ಬಟ್ಟೆ, ಫ್ಯಾಷನ್‌ ಆಕ್ಸೆಸರಿಸ್‌, ಕಿಚನ್‌ ಐಟಮ್ಸ್‌ ಸೇರಿದಂತೆ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಏನಾದ್ರೂ ಒಂದು ಶಾಪಿಂಗ್‌ ಮಾಡ್ತಾನೆ ಇರ್ತಾರೆ. ಆಫರ್‌ ಇರುತ್ತೆ, ಕಮ್ಮಿ ಬೆಲೆಗೆ ವಸ್ತುಗಳು ಸಿಗುತ್ತವೆ ಎಂಬ ಕಾರಣಕ್ಕೆ ಕೆಲವರು ಆನ್‌ಲೈನ್‌ ಶಾಪಿಂಗ್‌ ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಆಫ್‌ಲೈನ್‌ ಶಾಪಿಂಗ್‌ (Offline shopping) ಇಷ್ಟವಾಗುತ್ತದೆ. ಈಗಂತೂ ಆಫ್‌ಲೈನ್‌ಗಿಂತ ಆನ್‌ಲೈನ್‌ ಶಾಪಿಂಗ್‌ ಹೆಚ್ಚಾಗಿದೆ. ಇವೆರಡನ್ನೂ ಹೋಲಿಕೆ ಮಾಡಿ ನೋಡಿದಾಗ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎನ್ನುತ್ತಾರೆ ತಜ್ಞರು. ಯಾವ ಕಾರಣಕ್ಕೆ ಆಫ್‌ಲೈನ್‌ ಶಾಪಿಂಗ್‌ ಮಾಡುವುದೇ ತುಂಬಾ ಉತ್ತಮ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಆನ್‌ಲೈನ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಯಾಕೆ ಬೆಸ್ಟ್?

  • ಮೊದಲನೆಯಾಗಿ ಏನಂದ್ರೆ ನಾವು ಆಫ್‌ಲೈನ್ ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ  ಉತ್ಪನ್ನಗಳನ್ನು ಕಣ್ಣಾರೆ ನೋಡಿ, ಅದರ ಗುಣಮಟ್ಟವನ್ನು ಪರೀಕ್ಷಿಸಿ ಸರಿಯಾದ ವಸ್ತುಗಳನ್ನು ಖರೀದಿಸುತ್ತೇವೆ. ಆದ್ರೆ ಆನ್‌ಲೈನ್‌ನಲ್ಲಿ ಖರೀದಿಸಿದ ಎಲ್ಲಾ ವಸ್ತುಗಳ ಕ್ವಾಲಿಟಿ ಒಳ್ಳೆದಿರುವುದಿಲ್ಲ. ಕೆಲವೊಮ್ಮೆ ನಾವು ಏನೋ ಆರ್ಡರ್‌ ಮಾಡಿದ್ರೆ, ಇನ್ಯಾವುದೋ ವಸ್ತು ಡೆಲಿವರಿ ಆಗುತ್ತೆ. ಆದ್ರೆ ಆಫ್‌ಲೈನ್‌ನಲ್ಲಿ ಇದ್ಯಾವುದರ ಸಮಸ್ಯೆ ಇರುವುದಿಲ್ಲ. ಖರೀದಿಸಿದ ವ್ಸತುವಿನ ಬಗ್ಗೆಯೂ ತೃಪ್ತಿ ಇರುತ್ತದೆ. ಅದಕ್ಕಾಗಿ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎನ್ನುತ್ತಾರೆ ತಜ್ಞರು.
  • ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ನಾವು ತುಂಬಾ ಹೊತ್ತು ಆಚೆ ಈಚೆ ನಡೆದಾಡುತ್ತಿರುತ್ತೇವೆ. ಇದರಿಂದ ಕ್ಯಾಲೋರಿ ಸುಡುತ್ತದೆ. ದೇಹದ ಕೊಬ್ಬು ಕೂಡ ಕರಗುತ್ತದೆ. ಹೀಗೆ ಆಫ್‌ಲೈನ್‌ ಶಾಪಿಂಗ್‌ ತೂಕ ಇಳಿಕೆಗೂ ಸಹಾಯವನ್ನು ಮಾಡುತ್ತದೆ.
  • ಹೊರಗಡೆ ಹೋಗಿ ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ನಮಗೆ ಒಂದು ರೀತಿಯ ಆನಂದವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಡೊಪಮೈನ್‌ ಎಂಬ ಹಾರ್ಮೋನ್.‌ ಇದು ನಮ್ಮ ದೇಹಕ್ಕೆ ಸಂತೋಷವನ್ನು ನೀಡುತ್ತದೆ. ಆದರೆ ಆನ್‌ಲೈನ್‌ ಶಾಪಿಗ್‌ ಸಮಯದಲ್ಲಿ ಡೊಪಮೈನ್‌ ಉತ್ಪಾದನೆ ಹೆಚ್ಚಿರುವುದಿಲ್ಲ. ಹಾಗಾಗಿ ಆಫ್‌ಲೈನ್‌ ಶಾಪಿಂಗ್‌ ಹೆಚ್ಚು ಸಂತೋಷವನ್ನು ನೀಡುತ್ತದೆ ಎನ್ನುತ್ತಾರೆ ತಜ್ಞರು.
  • ಆಫ್‌ಲೈನ್‌ ಶಾಪಿಂಗ್‌ ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಒಂಟಿತನ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಹೊರಗಡೆ ಶಾಪಿಂಗ್‌ ಮಾಡಲು ಹೋದರೆ ಆ ಖಿನ್ನತೆಯಿಂದ ಹೊರಬರಬಹುದು. ಇದು ಮಾನಸಿಕ ಸಂಘರ್ಷವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಏಕೆ ಎಂದು ನೋಡುವುದಾದರೆ, ಇಲ್ಲಿ ನಮಗೆ ಸರಿಹೊಂದುವ ಸೈಜ್‌ ಬಟ್ಟೆಗಳನ್ನೇ ಖರೀದಿಸಬಹುದು. ಆದ್ರೆ ಆನ್‌ಲೈನ್‌ ಶಾಪಿಂಗ್‌ ಮಾಡಿದಾಗ ಬಟ್ಟೆಗಳ ಸೈಜ್‌ ಇಶ್ಯೂ ಇರುತ್ತದೆ. ಬಣ್ಣಗಳಲ್ಲೂ ವ್ಯತ್ಯಾಸ ಇರುತ್ತದೆ. ಆದರೆ ಆಫ್‌ ಲೈನ್‌ ಶಾಪಿಂಗ್‌ನಲ್ಲಿ ಇದ್ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.
  • ಹೊರಗೆ ಹೋಗಿ ಶಾಪಿಂಗ್‌ ಮಾಡುವುದರಿಂದ ಶಾಪಿಂಗ್‌ ಮಾತ್ರವಲ್ಲ, ಜಗತ್ತಿನ ಹಲವು ಆಗುಹೋಗುಗಳ ಬಗ್ಗೆ ನಾವು ತಿಳಿದುಕೊಳ್ಳಬಹುದು. ಹೀಗೆ ಆಫ್‌ಲೈನ್‌ ಶಾಪಿಂಗ್‌ ನಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ಅಲ್ಲಿ ಇರುವಂತಹ ನಾಲ್ಕು ಜನರೊಂದಿಗೆ ಮಾತನಾಡುತ್ತೇವೆ. ಅಂಗಡಿಯವನ ಬಳಿ ಬೆಲೆ ಕಮ್ಮಿ ಮಾಡಲು ಚೌಕಾಸಿ ಮಾಡುತ್ತೇವೆ, ಹಣ ಉಳಿತಾಯ ಮಾಡಲು ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೇವೆ. ಇದೆಲ್ಲವೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಇನ್ಮುಂದೆ ಮಧ್ಯಮ ವರ್ಗದ ಯುವಕರು ಬ್ರ್ಯಾಂಡ್​​ ಶೂ, ಸನ್ ಗ್ಲಾಸ್ ಹಾಕಿಕೊಳ್ಳಬಹುದು, ಇದಕ್ಕೆಲ್ಲ ಹೊಸ ಜಿಎಸ್​​​ಟಿ ನೀತಿ ಕಾರಣ

ಆನ್‌ಲೈನ್ ಶಾಪಿಂಗ್‌ನ ಅನಾನುಕೂಲಗಳೇನು?

ಇದನ್ನೂ ಓದಿ
ವಿವಾಹಿತ ಪುರುಷರು ಈ ಕೆಲಸಗಳನ್ನು ಎಂದಿಗೂ ಮಾಡಬಾರದು
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತಾ? ತಡೆಯುವ ಸುಲಭ ವಿಧಾನ ಇಲ್ಲಿದೆ
ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
ಈ ಮೂರು ಎಣ್ಣೆಯಲ್ಲಿದೆ ಕೂದಲು ಬೆಳೆಸಿಕೊಳ್ಳುವ ಶಕ್ತಿ
  • ಖರೀದಿಗೂ ಮುನ್ನ ಉತ್ಪನ್ನಗಳನ್ನು ಭೌತಿಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲ
  • ಯಾವುದೇ ಸಹಾಯ ಇರುವುದಿಲ್ಲ
  • ವಂಚನೆಗಳು ಆಗುವಂತಹ ಸಾಧ್ಯತೆ ಹೆಚ್ಚು.
  • ಬಟ್ಟೆಗಳ  ಗಾತ್ರ ಮತ್ತು ಫಿಟ್ ಸಮಸ್ಯೆಗಳು.
  • ರಿಟರ್ನ್ಸ್ ಮತ್ತು ವಿನಿಮಯಗಳಲ್ಲಿ ತೊಡಕುಗಳು ಮತ್ತು ವಿಳಂಬಗಳು.

ಆದ್ರೆ ಇದ್ಯಾವ ಸಮಸ್ಯೆಗಳು ಆಫ್‌ಲೈನ್‌ ಶಾಪಿಂಗ್‌ನಲ್ಲಿ ಕಂಡುಬರುವುದಿಲ್ಲ. ಅದಕ್ಕಾಗಿಯೇ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎನ್ನುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ