ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುವುದು” ಎನ್ನುವ ಮಾತಿದೆ. ಹೀಗಾಗಿ ಈ ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಸೇಬು ಹಣ್ಣಿನಲ್ಲಿ ಪಾಲಿಫಿನಾಲ್ ಹೇರಳವಾಗಿದ್ದು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಫೈಬರ್ಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಆರೋಗ್ಯವಾಗಿಡುತ್ತದೆ. ಆದರೆ ಇದೀಗ ಬೀದಿ ಬದಿಯ ವ್ಯಾಪಾರಿಯೊಬ್ಬರು ಸೇಬು ಹಣ್ಣನ್ನು ಬಳಸಿಕೊಂಡು ಆಮ್ಲೆಟ್ ತಯಾರಿಸಿದ್ದಾರೆ. ಸದ್ಯಕ್ಕೆ ಈ ಆಪಲ್ ಆಮ್ಲೆಟ್ ತಯಾರಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಆಪಲ್ ಆಮ್ಲೆಟ್ ತಯಾರಿಕೆಯ ಪ್ರಕ್ರಿಯೆಯೂ ಸೇಬನ್ನು ಸಣ್ಣ ತುಂಡುಗಳಾಗಿ ಕತ್ತರಿಸುವುದರೊಂದಿಗೆ ಪ್ರಾರಂಭವಾಗಿದೆ. ಆ ಬಳಿಕ ಸಿಜ್ಲಿಂಗ್ ಪ್ಯಾನ್‌ನಲ್ಲಿ ಬೆಣ್ಣೆಯನ್ನು ಹಾಕಿ, ಸೇಬಿನ ಆಮ್ಲೆಟ್ “ನೀವು ಹಿಂದೆಂದೂ ಪ್ರಯತ್ನಿಸದ ವಿಷಯ” ಎಂದು ಹೇಳಿದ್ದಾನೆ. ಒಂದು ಬಟ್ಟಲಿನಲ್ಲ ಎರಡು ಮೊಟ್ಟೆಗಳನ್ನು ಒಡೆದು ಈರುಳ್ಳಿ , ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಟೊಮ್ಯಾಟೊ, ಉಪ್ಪು, ಒಂದು ಚಿಟಿಕೆ ಮೆಣಸಿನ ಪುಡಿ ಮತ್ತು ವಿಶೇಷ ಮಸಾಲಾದೊಂದಿಗೆ ಬೆರೆಸಿ, ಬಾಣಲೆಯ ಮೇಲೆ ಹಾಕಿದ್ದಾನೆ.
ವಿಡಿಯೋ ಇಲ್ಲಿದೆ ನೋಡಿ:
ಅದಕ್ಕೆ ಕತ್ತರಿಸಿದ ಆಪಲ್ ತುಂಡುಗಳನ್ನು ಹಾಕಿ, ಕಲರ್ ಫುಲ್ ಆಗಿ ಕಾಣುವಂತೆ ಮಾಡಿದ್ದಾನೆ. ರುಚಿ ಹೆಚ್ಚಿಸಲು ಬೇಯಿಸಿದ ಮೊಟ್ಟೆಯ ತುಂಡುಗಳನ್ನು ಸೇರಿಸಿದ್ದಾನೆ. ಕೊನೆಗೆ ಕೊತ್ತಂಬರಿ ಸೊಪ್ಪು, ತಂದೂರಿ ಮೇಯನೇಸ್, ಬೇಯಿಸಿದ ಮೊಟ್ಟೆಯ ತುಂಡುಗಳಿಂದ ಅಲಂಕರಿಸಿದ್ದಾನೆ. ಆಹಾರ ಪ್ರಿಯರಂತೂ ಆಪಲ್ ಆಮ್ಲೆಟ್ ನೋಡಿ ಖುಷಿಯಾಗಿಲ್ಲ, ಬದಲಾಗಿ ಗರಂ ಆಗಿದ್ದಾರೆ.
ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಶುಂಠಿ
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು “ಅವನಿಗೆ ಮೊಟ್ಟೆಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಆಮ್ಲೆಟ್ ಮಾಡುವ ನೆಪದಲ್ಲಿ ನಮ್ಮನ್ನು ಇಲ್ಲಿ ಮೂರ್ಖರನ್ನಾಗಿ ಮಾಡಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, “ನಾನು ಈ ಸಂಯೋಜನೆಯ ಬಗ್ಗೆ ಎಂದಿಗೂ ಕನಸು ಕಾಣಲು ಸಾಧ್ಯವಿಲ್ಲ” ಎಂದಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ