Ginger Health Benefits: ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಶುಂಠಿ

ಭಾರತೀಯರು ತಮ್ಮ ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಖಾರ ಹಾಗೂ ಪರಿಮಳಕ್ಕೆ ಹೆಸರುವಾಸಿಯಾಗಿರುವ ಈ ಶುಂಠಿಯೂ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತದೆ. ಆಕರ್ಷಕ ಬಣ್ಣ ಹಾಗೂ ಘಮವನ್ನು ಹೊಂದಿರುವ ಶುಂಠಿಯೂ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹೀಗಾಗಿ ಹೆಚ್ಚಿನವರು ಈ ಶುಂಠಿಯಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸುತ್ತಿದ್ದಾರೆ.

Ginger Health Benefits: ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಶುಂಠಿ
Follow us
ಸಾಯಿನಂದಾ
| Updated By: Digi Tech Desk

Updated on:Jan 29, 2024 | 1:03 PM

ಎಲ್ಲರ ಅಡುಗೆ ಮನೆಗಳಲ್ಲಿ ಶುಂಠಿಯು ಇದ್ದೆ ಇರುತ್ತದೆ. ಈ ಶುಂಠಿಯೂ ಬಹುತೇಕ ಎಲ್ಲಾ ರೀತಿಯ ಆಹಾರಗಳ ರುಚಿ ಹಾಗೂ ಘಮ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಶುಂಠಿಯೂ ಹಲವು ರೋಗಗಳಿಗೆ ಔಷಧಿಯಾಗಿದೆ. ನಮ್ಮ ಹಿರಿಯರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬಂತೆಂದರೆ ಅಡುಗೆ ಮನೆಯಲ್ಲಿರುವ ಈ ಶುಂಠಿಯಿಂದ ಔಷಧಿಯಾಗಿ ತಯಾರಿಸಿ ಸೇವಿಸುತ್ತಿದ್ದರು. ಇವತ್ತಿಗೂ ಕೂಡ ಹಳ್ಳಿಗಳಲ್ಲಿ ಶುಂಠಿಯಿಂದ ಮನೆ ಮದ್ದನ್ನು ತಯಾರಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ.

ಶುಂಠಿಯ ಮನೆ ಮದ್ದುಗಳು ಇಲ್ಲಿವೆ:

* ಶುಂಠಿ, ಮೆಣಸಿನ ಕಾಳು, ಹಿಪ್ಪಲಿಗಳನ್ನು ಪುಡಿ ಮಾಡಿಟ್ಟುಕೊಂಡು, ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ.

* ಅರ್ಧಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.

* ಶುಂಠಿ, ಹಿಪ್ಪಲಿ, ಕಾಳು ಮೆಣಸು ಮತ್ತು ತುಳಸಿ ಇವು ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಅರ್ಧಲೋಟ ನೀರಿಗೆ ಹಾಕಿ ಕುದಿಸಬೇಕು. ಅದಕ್ಕೆ ಬೆಲ್ಲ ಹಾಲು ಬೆರೆಸಿ ಶೋಧಿಸಿ, ದಿನಕ್ಕೆ ಎರಡು ಬಾರಿ ಕುಡಿದರೆ ನೆಗಡಿ ಸಮಸ್ಯೆಯೂ ಕಡಿಮೆಯಾಗುತ್ತದೆ.

* ಒಂದು ಚಮಚ ಹಸಿಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತದೆ.

* ಒಂದು ಚಮಚದಷ್ಟು ಹಸಿ ಶುಂಠಿ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ, ಅಸ್ತಮಾ ಕಾಯಿಲೆಯೂ ದೂರವಾಗುತ್ತದೆ.

* ಶುಂಠಿ, ಹುರುಳಿ, ನೆಲಗುಳ್ಳ, ಆಡುಸೋಗೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರೆ ಅಸ್ತಮಾ ಕಾಯಿಲೆಗೆ ರಾಮಬಾಣ.

* ಶುಂಠಿ, ಬೆಳ್ಳುಳ್ಳಿ, ಲಕ್ಕಿಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಒಂದು ಲೀಟರ್ ನೀರಿನಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕುದಿಸಬೇಕು. ಈ ಕುದಿಸಿದ ನೀರನ್ನು ಬೆಳಗ್ಗೆ ರಾತ್ರಿ ಎರಡು ವಾರಗಳ ಕಾಲ ಕುಡಿದರೆ ಕೀಲುನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಕೂದಲು ದಟ್ಟವಾಗಿ ಬೆಳೆಯಬೇಕಾ?; ಶುಂಠಿ ರಸವನ್ನು ಈ ರೀತಿ ಬಳಸಿ

* ಶುಂಠಿ, ಹಿಪ್ಪಲಿ, ಕಾಳು ಮೆಣಸುಗಳನ್ನು ಪುಡಿ ಮಾಡಿಕೊಂಡು, ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ಅಸ್ತಮಾ ರೋಗ ಕಡಿಮೆಯಾಗುತ್ತದೆ.

* ಶುಂಠಿಯನ್ನು ಹಾಲಿನಲ್ಲಿ ತೇಯ್ದು ಹಣೆಯ ಮೇಲೆ ಹಾಕಿದರೆ ತಲೆನೋವು ನಿವಾರಣೆಯಾಗುತ್ತದೆ.

* ಶುಂಠಿಯ ಕಷಾಯ ತಯಾರಿಸಿ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿದರೆ ತಲೆನೋವು ಗುಣಮುಖವಾಗುತ್ತದೆ.

* ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ, ಮೆಣಸು, ಹಿಪ್ಪಲಿ, ಬೆಲ್ಲ, ನೆಗ್ಗಿಲು ಮುಳ್ಳು, ಕೊಬ್ಬರಿಯನ್ನು ಪುಡಿ ಮಾಡಿಕೊಂಡು ದಿನಕ್ಕೆರಡು ಬಾರಿ ಒಂದು ಚಮಚದಷ್ಟು ಪುಡಿಯನ್ನು ಮೂರು ವಾರಗಳ ಕಾಲ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಶುಂಠಿ ಮತ್ತು ಅಡಿಕೆಯನ್ನು ಪುಡಿ ಮಾಡಿ, ಅದನ್ನು ತೆಂಗಿನ ಕಾಯಿಯ ಹಾಲಿನಲ್ಲಿ ಬೆರೆಸಿ ನಾಲಿಗೆಗೆ ಲೇಪಿಸಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Mon, 29 January 24