ಐಷಾರಾಮಿ ಹೋಟೆಲೊಂಡರಲ್ಲಿ (Luxurious Hotel) ಒಂದು ರಾತ್ರಿಗೆ ಹೆಚ್ಚೆಂದರೆ ಎಷ್ಟು ಬಾಡಿಗೆ ಇರಬಹುದು ಎಂದು ನೀವು ಯೋಚಿಸುತ್ತೀರಿ? ಒಬ್ಬ ಸಾಮಾನ್ಯ ಮೇಲ್ಮಧ್ಯಮ ವರ್ಗದ ವ್ಯಕ್ತಿಯ ಒಂದು ವರ್ಷದ ವೇತನಕ್ಕೆ ಸಮಾನವಾಗಿದ್ದರೋ? ನಂಬುವುದು ಕಷ್ಟ ಅಲ್ಲವೇ… ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ (Jaipur) ಅಂತಹ ಒಂದು ಹೋಟೆಲ್ ಇದೆ ಎಂದರೆ ನೀವು ನಂಬಲೇಬೇಕು. ಅಷ್ಟೇ ಅಲ್ಲ, ಆ ಹೋಟೆಲ್ ಸ್ವಿಟ್ಜರ್ಲೆಂಡ್, ಲಂಡನ್, ಲಾಸ್-ವೇಗಾಸ್ ಹೋಟೆಲ್‌ಗಳಿಗಿಂತ ಮುಂದಿದೆ ಮತ್ತು ವಿಶ್ವದ ನಂಬರ್ -1 ಹೋಟೆಲ್ (World’s Best Hotel) ಎಂದೇ ಪರಿಗಣಿಸಲಾಗಿದೆ.
ಹೌದು, ಜೈಪುರದ ರಾಂಬಾಗ್ ಪ್ಯಾಲೇಸ್ ಹೋಟೆಲ್ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಆಗಿದೆ. ಈ ಐಷಾರಾಮಿ ಹೋಟೆಲ್ ಅನ್ನು ಟ್ರಾವೆಲ್ ಪೋರ್ಟಲ್ ಟ್ರಿಪ್ ಅಡ್ವೈಸರ್‌ನ ‘ಟ್ರಾವೆಲರ್ಸ್ ಚಾಯ್ಸ್ ವರ್ಲ್ಡ್ ಬೆಸ್ಟ್ ಆಫ್ ಬೆಸ್ಟ್ ಹೋಟೆಲ್‌ಗಳ ಪಟ್ಟಿ-2023′ ನಲ್ಲಿ ವಿಶ್ವದ ನಂಬರ್-1 ಹೋಟೆಲ್ ಆಗಿ ಆಯ್ಕೆ ಮಾಡಲಾಗಿದೆ. ಈ ಹೋಟೆಲ್‌ನ ಮಾಲೀಕರು ಬೇರೆ ಯಾರೂ ಅಲ್ಲ, ‘ತಾಜ್ ಹೋಟೆಲ್’ ನಡೆಸುತ್ತಿರುವ ಟಾಟಾ ಗ್ರೂಪ್.
ಮಹಾರಾಜರಂತೆ ಜೀವನ ನಡೆಸುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಅಥವಾ ಅನುಭವಿಸಬೇಕಾದರೆ ಈ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆಯಬೇಕು. ಆದರೆ, ಈ ಹೆರಿಟೇಜ್ ಹೋಟೆಲ್‌ನಲ್ಲಿ ಒಂದು ರಾತ್ರಿಯ ಬಾಡಿಗೆ 10 ಲಕ್ಷ ರೂಪಾಯಿ ವರೆಗೆ ಇದೆ! ಇದು ಭಾರತದ ಕೋಟಿಗಟ್ಟಲೆ ಜನರ 12 ತಿಂಗಳ ಸಂಬಳಕ್ಕೆ ಸಮಾನವಾಗಿದೆ.
ಈ ಹೋಟೆಲ್‌ನ ‘ಸುಖ್ ನಿವಾಸ್’ನಲ್ಲಿ ನೀವು ಉಳಿಯಲು ಬಯಸಿದರೆ, ಒಂದು ರಾತ್ರಿಗೆ 10 ಲಕ್ಷ ರೂಪಾಯಿಗಳವರೆಗೆ ಪಾವತಿಸಬೇಕಾಗಬಹುದು. ನೀವು ಅದೃಷ್ಟವಂತರಾಗಿದ್ದರೆ, ಆಫ್-ಸೀಸನ್‌ನಲ್ಲಿ ಕಡಿಮೆ ಬಾಡಿಗೆಗೆ ದೊರೆಯಬಹುದು. ಆದರೆ, ಆಫ್-ಸೀಸನ್‌ನಲ್ಲಿ ಸಹ ಒಂದು ರಾತ್ರಿಯ ಬಾಡಿಗೆ ಸುಮಾರು 4.7 ಲಕ್ಷ ರೂಪಾಯಿಗಳಷ್ಟಿರುತ್ತದೆ ಎಂಬುದು ಗಮನಾರ್ಹ.
ಇದನ್ನೂ ಓದಿ: Travel Tips: ಭಾರತದಲ್ಲಿ ಪ್ಯಾರಾಗ್ಲೈಡಿಂಗ್ ಅನುಭವ ಪಡೆಯಲು ಸೂಕ್ತ ತಾಣಗಳ ವಿವರ ಇಲ್ಲಿವೆ
ರಾಂಬಾಗ್ ಅರಮನೆಯು ಒಂದು ಕಾಲದಲ್ಲಿ ಜೈಪುರ ರಾಜಮನೆತನದ ಅತಿಥಿ ಗೃಹವಾಗಿತ್ತು. ಜೈಪುರ ರಾಜಮನೆತನಕ್ಕೆ ಸಂಬಂಧಿಸಿದ ರಾಜರು ಮತ್ತು ಚಕ್ರವರ್ತಿಗಳು ಇದನ್ನು ಬಳಸುತ್ತಿದ್ದರು. ಇದನ್ನು 1835 ರಲ್ಲಿ ನಿರ್ಮಿಸಲಾಯಿತು. ಜೈಪುರದ ಮಹಾರಾಜ ಸವಾಯಿ ಮಾನ್ ಸಿಂಗ್-II ಮತ್ತು ಮಹಾರಾಣಿ ಗಾಯತ್ರಿ ದೇವಿ ಈ ಅರಮನೆಯನ್ನು ತಮ್ಮ ನಿವಾಸವಾಗಿ ಬಳಸಿಕೊಂಡರು.
ನಂತರ ಅದನ್ನು ಐಷಾರಾಮಿ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಇದರ ನಿರ್ವಹಣೆಯ ಹೊಣೆಯನ್ನು ಟಾಟಾ ಗ್ರೂಪ್‌ಗೆ ನೀಡಲಾಯಿತು. ಇಂದು ಈ ಹೋಟೆಲ್ 70 ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳನ್ನು ಹೊಂದಿದೆ. ಇಲ್ಲಿರುವ ಪ್ರೆಸಿಡೆನ್ಶಿಯಲ್ ಸೂಟ್ ಅನ್ನು ‘ಸುಖ್ ನಿವಾಸ್’ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಈ ಹೋಟೆಲ್‌ನಲ್ಲಿ ಸುವರ್ಣ ಮಹಲ್, ಸ್ಟೀಮ್, ವರಂದಾ ಕೆಫೆ, ರಜಪೂತ್ ರೂಮ್ ಮತ್ತು ಪೋಲೋ ಬಾರ್‌ನಂತಹ ರೆಸ್ಟೋರೆಂಟ್ ಆಯ್ಕೆಗಳು ಸಹ ಲಭ್ಯವಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ