Kitchen Hacks : ಕಾಫಿ ಪುಡಿಯನ್ನು ತಿಂಗಳುಗಳ ಕಾಲ ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿದೆ ಸಿಂಪಲ್ ಟಿಪ್ಸ್

ಯಾವುದೇ ಋತುವಿರಲಿ, ಕಾಫಿ ಮತ್ತು ಟೀ ಪುಡಿಗಳನ್ನು ತಾಜಾವಾಗಿ ಇಡುವುದು ತುಂಬಾ ಕಷ್ಟದ ಕೆಲಸ. ಸಂಗ್ರಹಣೆಯ ವೇಳೆ ಸಣ್ಣ ತಪ್ಪಾದರೂ ತಾಜಾ ಕಾಫಿ ಪುಡಿಯೂ ಹಾಳಾಗಬಹುದು. ಈ ಕಾಫಿ ಪುಡಿಯನ್ನು ಸರಿಯಾಗಿ ಶೇಖರಿಸಿಡದಿದ್ದರೆ, ಅದರ ರಚನೆ, ವಾಸನೆ ಮತ್ತು ರುಚಿಯೇ ಬದಲಾಗಿ ಬಿಡುತ್ತದೆ. ಹೀಗಾಗಿ ಈ ಪುಡಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸುವುದು ಅತ್ಯಗತ್ಯ.

Kitchen Hacks : ಕಾಫಿ ಪುಡಿಯನ್ನು ತಿಂಗಳುಗಳ ಕಾಲ ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Edited By:

Updated on: Nov 27, 2024 | 3:16 PM

ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕೆಲವರಂತೂ ದಿನಕ್ಕೆ ಮೂರೊತ್ತು ಕಾಫಿ ಕೊಟ್ಟರೂ ಬಾಯಿ ಚಪ್ಪರಿಸಿಕೊಂಡು ಕುಡಿಯುತ್ತಾರೆ. ಅದರಲ್ಲಿಯೂ ಈ ಬೆಳಗ್ಗಿನ ಉಪಾಹಾರದ ಬಳಿಕ ಕುಡಿಯುವ ಒಂದು ಲೋಟ ಕಾಫಿಯೂ ಆ ದಿನವನ್ನೆಲ್ಲಾ ಉಲ್ಲಾಸ ಭರಿತವಾಗಿರಿಸುತ್ತದೆ. ಆದರೆ ಎಷ್ಟೋ ಜನರಿಗೆ ಕಾಫಿ ಪುಡಿಯನ್ನು ಹೇಗೆ ಸಂಗ್ರಹಿಸಿಡಬೇಕೆಂಬುದು ತಿಳಿದಿಲ್ಲ. ಕಾಫಿ ಪುಡಿಯನ್ನು ಸರಿಯಾಗಿ ಶೇಖರಿಸಿಡದಿದ್ದರೆ, ಪುಡಿಯೂ ಹಾಳಾಗಿ ಬಿಸಾಡಬೇಕಾಗುತ್ತದೆ. ಹೆಚ್ಚು ದಿನಗಳವರೆಗೂ ಕಾಫಿ ಪುಡಿ ಕೆಡಬಾರದು ಎಂದರೆ ಈ ಸಲಹೆಗಳನ್ನು ಪಾಲಿಸಿ.

  1. ಕಾಫಿ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಡಬ್ಬದೊಳಗೆ ಗಾಳಿ ಹೋದರೆ ಕಾಫಿ ಪುಡಿಯ ರುಚಿ, ವಾಸನೆ, ಫುಡಿ ಗಟ್ಟಿಯಾಗಿ ರುಚಿಯೂ ಬದಲಾಗುತ್ತದೆ.
  2. ಕಾಫಿ ಪುಡಿಯನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ, ಮುಚ್ಚಳವು ಬಿಗಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಕಾಫಿ ಪುಡಿಯೂ ಗಟ್ಟಿಯಾಗುತ್ತದೆ.
  3. ಕಾಫಿ ಪುಡಿಯ ಡಬ್ಬಿಯನ್ನು ಯಾವಾಗಲೂ ತಂಪಾದ, ಗಾಢವಾದ ಸ್ಥಳದಲ್ಲಿ ಇರಿಸುವುದು ಬಹಳ ಮುಖ್ಯ. ಶಾಖ ಮತ್ತು ಸೂರ್ಯನ ಬೆಳಕಿನಿಂದ ದೂರವಿಡಿ ಹಾಗೂ ಶಾಖವನ್ನು ಉತ್ಪಾದಿಸುವ ಇತರ ವಸ್ತುಗಳ ಬಳಿ ಕಾಫಿ ಪುಡಿಯನ್ನು ಸಂಗ್ರಹಿಸುವುದನ್ನು ತಪ್ಪಿಸಿ.
  4. ತೇವಾಂಶವು ಕಾಫಿ ಪುಡಿಯ ರುಚಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸುವುದು ಸರಿಯಲ್ಲ. ಆದ್ದರಿಂದ ಕಾಫಿ ಪುಡಿಯನ್ನು ಶುಷ್ಕ ವಾತಾವರಣದಲ್ಲಿ ಇರಿಸುವುದು ಬಹಳ ಮುಖ್ಯ.
  5. ಕಾಫಿ ಬೀಜದಿಂದ ಪೌಡರ್ ತಯಾರಿಸಿ ಬಳಸುತ್ತಿದ್ದರೆ ತಿಂಗಳೊಳಗೆ ಈ ಕಾಫಿ ಪೌಡರ್ ನ್ನು ಬಳಸಿ. ಅದಲ್ಲದೇ, ಸಾಧ್ಯವಾದರೆ 15 ದಿನದೊಳಗೆ ಕಾಫಿ ಪೌಡರ್ ಖಾಲಿ ಮಾಡಿ.
  6. ಮಾರುಕಟ್ಟೆಯಲ್ಲಿ ಕಾಫಿ ಪುಡಿಯನ್ನು ಖರೀದಿಸುವಾಗ, ಪ್ಯಾಕೆಟ್ ಮೇಲೆ ನಮೂದಿಸಿರುವ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ. ಮುಕ್ತಾಯದ ದಿನಾಂಕ ಮೀರಿದ್ದರೆ ಅದನ್ನು ಖರೀದಿಸದಿರುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ