AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಪುರುಷನ ಬದುಕಿನಲ್ಲಿ ಅದೃಷ್ಟ ತರುವ ವ್ಯಕ್ತಿಗಳು ಇವರೇ ನೋಡಿ

ಬದುಕಿನಲ್ಲಿ ವಿಭಿನ್ನ ಸ್ವಭಾವ ಹಾಗೂ ಗುಣವುಳ್ಳ ವ್ಯಕ್ತಿಗಳು ಪರಿಚಯವಾಗುತ್ತಾರೆ. ಹಾಗಂತ ಎಲ್ಲರೂ ಕೂಡ ಆತ್ಮೀಯರಾಗಲು ಸಾಧ್ಯವಿಲ್ಲ. ಆದರೆ ಪುರುಷರ ಜೀವನದಲ್ಲಿ ಈ ಮೂರು ವ್ಯಕ್ತಿಗಳು ಅದೃಷ್ಟ ತರುತ್ತಾರೆ ಎಂದಿದ್ದಾನೆ ಚಾಣಕ್ಯ. ಈ ಗುಣವಿರುವ ವ್ಯಕ್ತಿಗಳನ್ನು ಎಂದಿಗೂ ದೂರ ಮಾಡಿಕೊಳ್ಳಬೇಡಿ. ಇದರಿಂದ ಜೀವನದ ಖುಷಿಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾನೆ. ಹಾಗಾದ್ರೆ ಅದೃಷ್ಟ ತರುವ ಆ ಮೂವರು ವ್ಯಕ್ತಿಗಳು ಯಾರೆಲ್ಲಾ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Chanakya Niti : ಪುರುಷನ ಬದುಕಿನಲ್ಲಿ ಅದೃಷ್ಟ ತರುವ  ವ್ಯಕ್ತಿಗಳು ಇವರೇ ನೋಡಿ
Chanakya Niti
ಸಾಯಿನಂದಾ
| Edited By: |

Updated on:Nov 26, 2024 | 6:06 PM

Share

ಜೀವನವೆಂದರೆ ಸುಖ ದುಃಖಗಳ ಮಿಶ್ರಣ. ಬದುಕಿನಲ್ಲಿ ಸದಾ ಖುಷಿಯಾಗಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಕಹಿ ಘಟನೆಗಳಿಂದ ನೋವಾಗಬಹುದು. ಆದರೆ ಈ ಖುಷಿ, ನೋವನ್ನು ಹಂಚಿಕೊಳ್ಳಲು ಪ್ರತಿಯೊಬ್ಬರ ಒಂದಿಬ್ಬರಾದರೂ ಆತ್ಮೀಯರು ಇದ್ದೆ ಇರುತ್ತಾರೆ. ಒಂದು ವೇಳೆ ಪುರುಷರ ಜೀವನದಲ್ಲಿ ಈ ಗುಣವುಳ್ಳ ಮೂವರು ವ್ಯಕ್ತಿಗಳಿದ್ದು ಬಿಟ್ಟರೆ ಅವರಷ್ಟು ಅದೃಷ್ಟಶಾಲಿಗಳು ಯಾರಿಲ್ಲವಂತೆ. ಈ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ಹೀಗಾಗಿ ಅವರನ್ನು ಎಂದಿಗೂ ದೂರ ತಳ್ಳಬಾರದು, ಆದ್ದರಿಂದ ಈ ವ್ಯಕ್ತಿಗಳು ಜೀವನದಲ್ಲಿ ತುಂಬಾನೇ ಮುಖ್ಯ ಎಂದಿದ್ದಾನೆ.

ಸಂಸ್ಕಾರವಂತ ಹೆಂಡತಿ :

ತನ್ನನ್ನು ಕೈಹಿಡಿಯುವ ಹೆಣ್ಣು, ಉತ್ತಮ ಗುಣ ನಡತೆ, ಹೊಂದಾಣಿಕೆ ಸ್ವಭಾವ ಹಾಗೂ ಸಂಸ್ಕಾರವಂತಳಾಗಿರಬೇಕೆಂದು ಗಂಡು ಬಯಸುವುದು ಸಹಜ. ಆದರೆ ಚಾಣಕ್ಯನು ಕೂಡ ತನ್ನ ನೀತಿಯಲ್ಲಿ ಸಂಸ್ಕಾರವಂತ ಹೆಂಡತಿಯೂ ಸಿಕ್ಕರೆ ಅಂತಹ ಪುರುಷನು ಅದೃಷ್ಟವಂತ ಎಂದಿದ್ದಾನೆ. ಈ ಗುಣವುಳ್ಳ ಹೆಂಡತಿ ತನ್ನ ಗಂಡನಿಗೆ ಸದಾ ನೆರಳಾಗಿರುತ್ತಾಳೆ. ಕಷ್ಟ-ಸುಖದಲ್ಲಿ ಗಂಡನ ಜೊತೆಯಾಗಿದ್ದು, ಸದಾ ಧೈರ್ಯವನ್ನು ತುಂಬುತ್ತಾಳೆ. ಯಾವುದೇ ಕಾರಣಕ್ಕೆ ಇಂತಹ ಪತ್ನಿಯನ್ನು ದೂರ ಮಾಡಿಕೊಳ್ಳಬೇಡಿ. ಒಳ್ಳೆಯ ಹೆಂಡತಿ ಗಂಡಿನ ಬದುಕನ್ನು ಸ್ವರ್ಗವಾಗಿಸುತ್ತಾಳೆ. ಅದೇ ಕೆಟ್ಟ ಗುಣವುಳ್ಳ ಪತ್ನಿಯಿಂದ ಬದುಕು ನರಕವಾಗಿಸುತ್ತಾಳೆ ಎಂದು ಚಾಣಕ್ಯ ಎಚ್ಚರಿಸಿದ್ದಾನೆ.

ಉತ್ತಮ ಗುಣವುಳ್ಳ ಮಕ್ಕಳು :

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ಬಾರದಂತೆ ಬೆಳೆಸುತ್ತಾರೆ. ಅಷ್ಟೇ ಅಲ್ಲದೆ ಒಳ್ಳೆಯ ಗುಣಗಳೊಂದಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಬೇಕು. ಎಲ್ಲಾ ಸಂದರ್ಭದಲ್ಲಿ ಮಕ್ಕಳು ಜೊತೆಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಬೆಳೆಸುವಾಗ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಸದ್ಗುಣವನ್ನು ಹೊಂದಿರುವ ಮಕ್ಕಳು ಪೋಷಕರಿಗೆ ವಯಸ್ಸಾದ ಕಾಲ ಘಟ್ಟದಲ್ಲಿ ಚೆನ್ನಾಗಿ ನೋಡಿಕೊಳ್ಳುವ ತಂದೆ ತಾಯಿಯ ಸೇವೆ ಮಾಡುತ್ತಾರೆ. ಕೆಟ್ಟ ಚಟಗಳನ್ನು ಹೊಂದಿರದ ಮಕ್ಕಳು ಪೋಷಕರನ್ನು ಎಂದಿಗೂ ಕೈ ಬಿಡುವುದಿಲ್ಲ. ಒಂದು ವೇಳೆ ಅಂತಹ ಮಕ್ಕಳಿದ್ದರೆ ನೀವು ಅದೃಷ್ಟವಂತರು ಎನ್ನುತ್ತಾನೆ ಚಾಣಕ್ಯ.

ಒಳ್ಳೆಯ ಸ್ನೇಹಿತರು :

ಈಗಿನ ಕಾಲದಲ್ಲಿ ಒಳ್ಳೆಯ ಗುಣವುಳ್ಳ ಸ್ನೇಹಿತ ಸಿಗುವುದೇ ಕಷ್ಟ. ಅಂತಹ ಗೆಳೆಯರು ಜೊತೆಗಿದ್ದರೆ ಅದುವೇ ದೊಡ್ಡ ಶಕ್ತಿ. ಒಳ್ಳೆಯ ಗುಣವುಳ್ಳ ವ್ಯಕ್ತಿಯ ಜೊತೆಗೆ ಸ್ನೇಹ ಮಾಡಿದ್ದಲ್ಲಿ ನಮಗೂ ಕೂಡ ಒಳ್ಳೆಯದೇ ಆಗುತ್ತದೆ. ಆ ಸ್ನೇಹಿತನು ನಮ್ಮ ಯಶಸ್ಸಿನಲ್ಲಿ ತನ್ನ ಖುಷಿಯನ್ನು ಕಾಣುತ್ತಾನೆ. ಒಬ್ಬ ಉತ್ತಮ ಸ್ನೇಹಿತ ಯಾವತ್ತಿಗೂ ತಪ್ಪು ಹೆಜ್ಜೆ ಇಡಲು ಬಿಡುವುದಿಲ್ಲ. ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುವ ಸ್ನೇಹಿತರನ್ನು ಎಂದಿಗೂ ಕಳೆದುಕೊಳ್ಳಬೇಡಿ. ಅವರನ್ನು ಕಳೆದುಕೊಂಡರೆ ಜೀವನದಲ್ಲಿ ನಷ್ಟ ಅನುಭವಿಸಿದಂತಾಗುತ್ತದೆ. ಮತ್ತೆ ಆ ಪರಿಶುದ್ಧ ಸ್ನೇಹವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಿತವನ್ನೇ ಬಯಸುವ ಸ್ನೇಹಿತರು ಸಿಕ್ಕರೆ ನಿಜಕ್ಕೂ ನೀವು ಅದೃಷ್ಟವಂತರು ಎಂದು ತಿಳಿಸಿದ್ದಾನೆ ಚಾಣಕ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Tue, 26 November 24

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ