ಸಾಂದರ್ಭಿಕ ಚಿತ್ರ
ನೀಳವಾದ ಕೂದಲು ಹೊಂದಿದವರಿಗೆ ಈ ಕೂದಲಿನ ಆರೈಕೆ ಮಾಡುವುದು ಬಹಳ ಕಷ್ಟಕರ ಕೆಲಸ. ಕೂದಲಿನ ಆರೈಕೆ ಮಾಡುವಾಗ ಸಣ್ಣ ಪುಟ್ಟ ತಪ್ಪುಗಳಿಂದ ಕೂದಲು ಉದುರುವುದು, ತಲೆಹೊಟ್ಟು ಇನ್ನಿತ್ತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ತಲೆ ಸ್ನಾನ ಮಾಡಿ ಬಂದ ಕೂದಲು ಸಿಕ್ಕಾಗಿ, ಬಾಚುವುದು ತ್ರಾಸದಾಯಕವಾಗಿರುತ್ತದೆ. ಕೋಪವನ್ನು ಕೂದಲಿನ ಮೇಲೆ ತೋರಿಸಲು ಹೋದರೆ ಕೂದಲು ಉದುರುತ್ತವೆ ಇಲ್ಲವಾದರೆ ತುಂಡಾಗುವುದಿದೆ. ಹೀಗಾಗಿ ಕೂದಲನ್ನು ಸಿಕ್ಕಾಗದಂತೆ ಈ ಕೆಲವು ಕ್ರಮಗಳನ್ನು ಅನುಸರಿಸಿದರೆ ಉತ್ತಮ.
ತಲೆ ಸ್ನಾನ ಮಾಡಿದ ಬಳಿಕ ಕೂದಲಿನ ಆರೈಕೆ ಹೀಗಿರಲಿ:
- ತಲೆ ಸ್ನಾನದ ವೇಳೆ ಶ್ಯಾಂಪೂ ಹಾಗೂ ಕಂಡೀಶನರ್ ಬಳಸುವುದನ್ನು ಮರೆಯದಿರಿ.
- ಕೂದಲನ್ನು ತೊಳೆದ ನಂತರದಲ್ಲಿ ಕೂದಲನ್ನು ಟವೆಲ್ ನಿಂದ ಜೋರಾಗಿ ಉಜ್ಜಿಕೊಳ್ಳಬೇಡಿ. ನಿಧಾನವಾಗಿ ಒರೆಸಿಕೊಳ್ಳಿ.
- ಟವೆಲ್ ಅನ್ನು ಕೂದಲಿಗೆ ಕಟ್ಟಿಕೊಳ್ಳುವುದರಿಂದ ಕೂದಲು ಸಿಕ್ಕಾಗುವುದಿಲ್ಲ.
- ಕೂದಲು ಒದ್ದೆಯಿರುವಾಗಲೇ ಕೂದಲಿಗೆ ಬಾಚಣಿಕೆ ಹಾಕಬೇಡಿ. ಇದರಿಂದ ಕೂದಲು ಉದುರುತ್ತವೆ. ಕೂದಲು ಒಣಗಿದ ನಂತರ ಕೂದಲನ್ನು ಬಾಚಿಕೊಂಡರೆ ಸಿಕ್ಕಾಗದೇ ನೇರವಾಗಿ ನಿಲ್ಲುತ್ತದೆ.
- ಕೂದಲಿಗೆ ಸಿರಮ್ ಬಳಸುವುದು ಉತ್ತಮ. ಇದರಿಂದ ಕೂದಲು ಸಿಕ್ಕಾಗುವುದನ್ನು ತಡೆಯಬಹುದು.
- ತಲೆ ಸ್ನಾನದ ಬಳಿಕ ಕೂದಲಿಗೆ ಎಸೆನ್ಷಿಯಲ್ ಆಯಿಲ್ ಅನ್ನು ಬಳಸುವುದರಿಂದ ಕೂದಲು ಸಿಕ್ಕಾಗುವುದನ್ನು ತಪ್ಪಿಸಬಹುದು.
- ಕೂದಲು ಸಿಕ್ಕಾಗಿದ್ದಾಗ ಹೀಟ್ ಸಾಧನಗಳಿಂದ ಕೂದಲನ್ನು ನೇರವಾಗಿಸಲು ಪ್ರಯತ್ನಿಸುವುದನ್ನು ಆದಷ್ಟು ತಪ್ಪಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ