Jeera Water Benefits: ಪ್ರತಿದಿನ ಬೆಳಗ್ಗೆ ಖಾಲಿ ಹೊಟೆಯಲ್ಲಿ ಜೀರಿಗೆ ನೀರನ್ನು ಕುಡಿಯಿರಿ, ಇದರಲ್ಲಿ ಆರೋಗ್ಯ ಪ್ರಯೋಜನ

ಜೀರಿಗೆ ಭಕ್ಷ್ಯಗಳಿಗೆ ಸುವಾಸನೆ ಮತ್ತು ರುಚಿಯನ್ನು ನೀಡುವುದು  ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ,  ಕೆ, ಇ ಮತ್ತು ಕ್ಯಾಲಿಯಂ, ಮೆಗ್ನೇಸಿಯಂ, ಪ್ರೋಟೀನ್, ಪೊಟ್ಯಾಸಿಯಂ, ಕಬ್ಬಿಣ, ಪೊಟ್ಯಾಸಿಯಂ ಮುಂತಾದ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿದ್ದು, ಇದು ನಮ್ಮ ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಹಾಗದರೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯಿರಿ.

Jeera Water Benefits: ಪ್ರತಿದಿನ ಬೆಳಗ್ಗೆ ಖಾಲಿ ಹೊಟೆಯಲ್ಲಿ ಜೀರಿಗೆ ನೀರನ್ನು ಕುಡಿಯಿರಿ, ಇದರಲ್ಲಿ ಆರೋಗ್ಯ ಪ್ರಯೋಜನ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Oct 12, 2023 | 6:07 PM

ಜೀರಿಗೆ ಭಾರತೀಯ ಅಡುಗೆ ಮನೆಗಳಲ್ಲಿ ಕಂಡುಬರುವ ಪ್ರಮುಖ ಮಸಾಲೆಯಾಗಿದೆ. ಸಾಮಾನ್ಯವಾಗಿ ಇದನ್ನು ಎಲ್ಲಾ ರೀತಿಯ ಅಡುಗೆಗಳಲ್ಲೂ ಬಳಸಲಾಗುತ್ತದೆ. ಜೀರಿಗೆ ಭಕ್ಷ್ಯಗಳಿಗೆ ಸುವಾಸನೆ ಮತ್ತು ರುಚಿಯನ್ನು ನೀಡುವುದು  ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ,  ಕೆ, ಇ ಮತ್ತು ಕ್ಯಾಲಿಯಂ, ಮೆಗ್ನೇಸಿಯಂ, ಪ್ರೋಟೀನ್, ಪೊಟ್ಯಾಸಿಯಂ, ಕಬ್ಬಿಣ, ಪೊಟ್ಯಾಸಿಯಂ ಮುಂತಾದ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ತೂಕ ಇಳಿಕೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸೇರಿದಂತೆ ದೇಹಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ.  ಜೀರಿಗೆಯಲ್ಲಿರುವ ಹೇರಳವಾದ ಔಷಧೀಯ ಗುಣಗಳ ಕಾರಣ ಇದನ್ನು  ಹಿಂದಿನ ಕಾಲದಿಂದಲೂ  ಹಲವು ಆಯುರ್ವೇದ ಔಷಧಿಗಳು ಮತ್ತು ಮನೆಮದ್ದುಗಳಲ್ಲಿ ಬಳಸಲಾಗುತ್ತಿದೆ.  ಅಷ್ಟೇ ಅಲ್ಲ ನೀವು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವ ಪ್ರಯೋಜನಗಳನ್ನು ಪಡೆಯಬಹುದು.

ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಆಗುವ ಲಾಭಗಳೇನು:

ಜೀರ್ಣಕ್ರಿಯೆಗೆ ಪ್ರಯೋಜನಕಾರಿ:

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಅಸಿಡಿಟಿ, ಅಜೀರ್ಣ ಮತ್ತು ಹೊಟ್ಟೆ ನೋವು, ಮಲಬದ್ಧತೆ ಮುಂತಾದ ಜೀರ್ಮಕ್ರಿಯೆಗೆ ಸಂಬಂಧಿಸಿದ  ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೆಲವು ಅಧ್ಯಯನಗಳು ಜೀರಿಗೆಯು ಥೈಮೋಲ್  ಎಂಬ ಸಂಯುಕ್ತಗಳನ್ನು ಹೊಂದಿದೆ ಎಂದು ಹೇಳಿವೆ.  ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ  ಮತ್ತು ಅನೇಕ ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ತ್ವಚೆಯನ್ನು ಆರೋಗ್ಯಕರವಾಗಿಡಲು ಸಹಕಾರಿ:

ಜೀರಿಗೆ ನೀರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಸೆಲೆನಿಯಂ ನಂತಹ ಖನಿಜಗಳು ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಗೂ ಇದು ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಕಾರಿ. ಅಲ್ಲದೆ ಜೀರಿಗೆ ನೀರಿನಲ್ಲಿ ವಿಟಮಿನ್ ಇ  ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಮುಖದಲ್ಲಿ ಗೋಚರಿಸುವ ಅಕಾಲಿಕ ವಯಸ್ಸಾಗುವಿಕೆಯ ಲಕ್ಷಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದರಿಂದ ಚರ್ಮದ ಮೇಲೆ ಕಾಣುವ ಸುಕ್ಕುಗಳನ್ನು ಸಹ ಕಡಿಮೆ ಮಾಡಬಹುದು.

ಇದನ್ನೂ ಓದಿ: ಜೀರಿಗೆ-ಸೋಂಪು ನೀರು ಕುಡಿದರೆ ತೂಕ ಐಸ್​ಕ್ಯೂಬ್​ನಂತೆ ಕರಗುತ್ತೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ನೀರು ಸಹ ಪ್ರಯೋಜನಕಾರಿಯಾಗಿದೆ. ನೀವು ಪ್ರತಿದಿನ ಜೀರಿಗೆ ನೀರನ್ನು ಕುಡಿಯಲು ಪ್ರಾರಂಭಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ದೇಹವು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ:

ಜೀರಿಗೆ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಇದು ಹೆಚ್ಚಿನ ಪ್ರಮಾಣದ ಫೈಬರ್ ಅಂಶವನ್ನು ಹೊಂದಿದ್ದು, ಇದು ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.

 ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ

ಜೀರಿಗೆ ನೀರನ್ನು ಕುಡಿಯುವುದರಿಂದ ರಕ್ತಹೀನತೆಯ ಸಮಸ್ಯೆಯೂ ದೂರವಾಗುತ್ತದೆ. ಜೀರಿಗೆಯಲ್ಲಿ ಹೇರಳವಾದ ಕಬ್ಬಿಣಾಂಶವಿದ್ದು, ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಜೀರಿಗೆ ನೀರನ್ನು ಹೀಗೆ ತಯಾರಿಸಿ:

ಜೀರಿಗೆ ನೀರನ್ನು ತಯಾರಿಸುವುದು ಬಹಳ ಸುಲಭ. ಒಂದು ಪಾತ್ರೆಯಲ್ಲಿ ಎರಡು ಚಮಚ ಜೀರಿಗೆ ಹಾಗೂ ಒಂದು ಲೋಟ ನೀರನ್ನು ಹಾಕಿ, ಕುದಿಸಿ ಅದು ತಣ್ಣಗಾದ ಬಳಿಕ ಅದನ್ನು ಸೋಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ