ಸಾಂದರ್ಭಿಕ ಚಿತ್ರ
ಶ್ರೀ ಕೃಷ್ಣ ಜನ್ಮಾಷ್ಟಮಿ ದೇಶದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನವಾಗಿದ್ದು, ಈ ಬಾರಿ ಆಗಸ್ಟ್ 26 ರಂದು ದೇಶದಾದಂತ್ಯ ಅದ್ದೂರಿಯಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಕೃಷ್ಣ ಮಂದಿರಗಳಲ್ಲಿ ವಿಶೇಷವಾದ ಆಚರಣೆಯ ಜೊತೆಗೆ ಸಾಂಪ್ರದಾಯಿಕ ಆಟಗಳು, ಚಿಕ್ಕ ಮಕ್ಕಳಿಗೆ ರಾಧಾ ಕೃಷ್ಣನ ಅಲಂಕಾರ ಮಾಡಿ ನೋಡುವುದೇ ಕಣ್ಣಿಗೆ ಹಬ್ಬ. ಈ ವಿಶೇಷವಾದ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೂ ಹಬ್ಬದ ಶುಭಾಶಯಗಳನ್ನು ಕೋರುವುದು ಮುಖ್ಯ. ಈ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ಕೋರಬಹುದು.
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಆತ್ಮೀಯರಿಗೆ ಕೋರಲು ಶುಭಾಶಯಗಳು
- ಮಹಾಭಾರತದಲ್ಲಿ ಅರ್ಜುನನಿಗೆ ದಾರಿ ತೋರಿಸಿದ ಶ್ರೀ ಕೃಷ್ಣನು ನಿಮ್ಮ ಜೀವನದಲ್ಲಿಯೂ ದಾರಿ ತೋರಲಿ. ಕಷ್ಟವನ್ನು ದೂರ ಮಾಡಿ ಬದುಕನ್ನು ಸುಖಮಯವನ್ನಾಗಿಸಲಿ. ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
- ಧರ್ಮೋ ರಕ್ಷತಿ ರಕ್ಷಿತಃ. ಧರ್ಮದಿಂದ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ. ಯಾವಾಗಲೂ ಧರ್ಮದ ಮಾರ್ಗದಲ್ಲಿ ನಡೆಯಿರಿ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
- ಶ್ರೀಕೃಷ್ಣನ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ಈ ಬಾರಿ ಹಬ್ಬವು ನಿಮಗೆ ಸಂತೋಷ ಹಾಗೂ ಆರೋಗ್ಯವನ್ನು ತಂದು ಕೊಡಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
- ಹರೇ ಕೃಷ್ಣ, ಹರೇ ಕೃಷ್ಣ… ಕೃಷ್ಣ ಕೃಷ್ಣ, ಹರೇ ಹರೇ… ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಥಿಕ ಶುಭಾಶಯಗಳು.
- ನಿಮ್ಮ ಗುರಿಯನ್ನು ಸಾಧಿಸಲು ನೀವು ವಿಫಲವಾದರೆ, ತಂತ್ರವನ್ನು ಬದಲಾಯಿಸಿ, ಗುರಿಯಲ್ಲ. ಶ್ರೀಕೃಷ್ಣನು ನಿಮ್ಮ ಬದುಕಿಗೆ ಸದಾ ಒಳ್ಳೆಯದನ್ನೇ ಮಾಡಲಿ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ಥಿಕ ಶುಭಾಶಯಗಳು.
- ಶ್ರೀಕೃಷ್ಣನ ಕೊಳಲು ನಿಮ್ಮ ಜೀವನದಲ್ಲಿ ಪ್ರೀತಿಯ ಮಧುರವನ್ನು ಆಹ್ವಾನಿಸಲಿ. ಕೊಳಲಿನ ನಾದದಂತೆ ನಿಮ್ಮ ಜೀವನವು ಸುಖ ಸಂತೋಷದಿಂದ ತುಂಬಿರಲಿ. ನಿಮ್ಮೆಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯಗಳು
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ