ರುಚಿಕರ ಖಾದ್ಯಕ್ಕೂ ಸೈ ಆರೋಗ್ಯಕ್ಕೂ ಸೈ ಮಲೆನಾಡಿನ ಈ ಮಾಡಹಾಗಲ ಕಾಯಿ
ನಮ್ಮ ಸುತ್ತ ಮುತ್ತಲಿನ ಸಿಗುವ ಕೆಲವು ತರಕಾರಿಗಳು ಸೊಪ್ಪುಗಳ ಸೇವನೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ. ನೀವು ಹಾಗಲಕಾಯಿಯ ಹೆಸರನ್ನು ಕೇಳಿರಬಹುದು. ಆದರೆ ಮಾಡಹಾಗಲ ಕಾಯಿಯ ಬಗ್ಗೆ ಅಷ್ಟಾಗಿ ತಿಳಿದಿರಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಈ ಮಾಡಹಾಗಲ ಕಾಯಿಯೂ ಆರೋಗ್ಯಕ್ಕೆ ಬಹುಪಯೋಗಿದ್ದು ಏನಿದರ ಲಾಭದಾಯಕ ಅಂಶಗಳು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Aug 22, 2024 | 10:33 AM

ನಾವು ಸೇವಿಸುವ ಪ್ರತಿಯೊಂದು ತರಕಾರಿಗಳು ಆರೋಗ್ಯಕ್ಕೆ ನಾನಾ ರೀತಿ ಲಾಭದಾಯಕವಾಗಿದೆ. ಆ ತರಕಾರಿಗಳ ಸಾಲಿಗೆ ಈ ಮಾಡಹಾಗಲ ಕಾಯಿ ಕೂಡ ಸೇರುತ್ತದೆ. ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಮಾಡಹಾಗಲ ಕಾಯಿಯನ್ನು ಕಾಡು ಹೀರೆ, ಮಡಹಾಗಲ, ಕಾಡು ಹಾಗಲ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

ಮಾರುಕಟ್ಟೆಯಲ್ಲಿ ಈ ತರಕಾರಿಗೆ ಭಾರಿ ಬೇಡಿಕೆಯಿದ್ದು, ಹಾಗಲಕಾಯಿ ವರ್ಗಕ್ಕೆ ಸೇರಿ ಈ ಮಾಡಹಾಗಲ ಕಾಯಿ ಗಡ್ಡೆಯಿಂದ ಬೆಳೆಯುವ ಬಳ್ಳಿಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಹೇರಳವಾಗಿ ಕಾಣಸಿಗುವ ಈ ತರಕಾರಿಯನ್ನು ಬಡವರ ವಯಾಗ್ರವೆಂದೇ ಕರೆಯುತ್ತಾರೆ.

ಎಲೆ ಹಸಿರು ಬಣ್ಣದಲ್ಲಿ ದುಂಡಗೆ, ಮುಳ್ಳುಮುಳ್ಳಿನಿಂದ ಕೂಡಿರುವ ಮಾಡ ಹಾಗಲವು ಆರೋಗ್ಯದ ಗಣಿಯಾಗಿದೆ. ಈ ತರಕಾರಿಯಲ್ಲಿ ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿದ್ದು ಫೈಬರ್ ಅಂಶ, ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತದೆ.

ದಿನನಿತ್ಯ ಅಡುಗೆಗೆ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮಾಡ ಹಾಗಲ ತರಕಾರಿಯಿಂದ ವಿವಿಧ ರೀತಿಯ ರುಚಿಕರ ಖಾದ್ಯಗಳನ್ನು ತಯಾರಿಸಬಹುದು. ಮಜ್ಜಿಗೆಹುಳಿ, ಸಾಂಬಾರು, ಪೋಡಿ, ಬಾಳಕ, ಮಾಡಹಾಗಲಕಾಯಿ ಬೋಂಡ ಹೀಗೆ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದವರು ಮಾತ್ರ ಅದರ ರುಚಿಯನ್ನು ಬಲ್ಲರು.

ಮಾಡ ಹಾಗಲಕಾಯಿಯ ನಿಯಮಿತ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣಕ್ಕೆ ಬರುತ್ತದೆ. ಮಲಬದ್ಧತೆ ಸಮಸ್ಯೆ, ತೂಕ ನಿರ್ವಹಣೆ, ಕಣ್ಣಿನ ದೃಷ್ಟಿ ಸುಧಾರಣೆ, ಚರ್ಮದ ಆರೋಗ್ಯಕ್ಕೂ ಉಪಯುಕ್ತವಾಗಿದ್ದು. ಕೆಮ್ಮು, ನೆಗಡಿ, ಅಲರ್ಜಿಗಳಂತಹ ಸಮಸ್ಯೆಗಳು ದೂರವಾಗುತ್ತದೆ.



















