Benefits of Shavasana: ಶವಾಸನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಸಾಮಾನ್ಯವಾಗಿ ಯೋಗ ಆಸನಗಳ ಕೊನೆಯಲ್ಲಿ ಶವಾಸನವನ್ನು ಮಾಡಲಾಗುತ್ತದೆ. ಈ ಆಸನವನ್ನು ಸಾಕಷ್ಟು ಜನರು ಸ್ಕಿಪ್​​ ಮಾಡುತ್ತಾರೆ. ಆದರೆ ಇನ್ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ಕೇವಲ ಐದು ನಿಮಿಷಗಳ ಕಾಲ ಶವಾಸನ ಮಾಡಲೇಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

Benefits of Shavasana: ಶವಾಸನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
Health Benefits of Shavasana
Follow us
|

Updated on: Aug 22, 2024 | 7:57 PM

ಆರೋಗ್ಯವಾಗಿರಲು ಪ್ರತಿದಿನ ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡಬೇಕು ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ವಿಧದ ಯೋಗಗಳಿವೆ,ಇವುಗಳಲ್ಲಿ ಒಂದು ಶವಾಸನ. ಶವಾಸನ ಯೋಗವನ್ನು ಸಾಮಾನ್ಯವಾಗಿ ಯೋಗ ಆಸನಗಳ ಕೊನೆಯಲ್ಲಿ ಮಾಡಲಾಗುತ್ತದೆ. ಈ ಆಸನವನ್ನು ಸಾಕಷ್ಟು ಜನರು ಸ್ಕಿಪ್​​ ಮಾಡುತ್ತಾರೆ. ಆದರೆ ಇನ್ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ಶವಾಸನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೇವಲ ಐದು ನಿಮಿಷಗಳ ಕಾಲ ಶವಾಸನವನ್ನು ಅಭ್ಯಾಸ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುತ್ತದೆ. ಶವಾಸನ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಆಯಾಸವನ್ನು ಹೋಗಲಾಡಿಸಲು ಮತ್ತು ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಾಕೊಲೇಟ್​, ಚೂಯಿಂಗ್ ಗಮ್ ಬದಲಿಗೆ ಪ್ರತಿದಿನ ಒಂದೆರಡು ಲವಂಗ ಜಗಿಯಿರಿ

ಶವಾಸನವನ್ನು ಶಾಂತಿ ಆಸನ ಮತ್ತು ಅಮೃತಾಸನ ಎಂದೂ ಕರೆಯುತ್ತಾರೆ. ಮೆದುಳಿನ ಶಕ್ತಿಯನ್ನು ಉತ್ತೇಜಿಸಲು ಶತಮಾನಗಳಿಂದ ಅನೇಕ ಯೋಗ ಪಟುಗಳು ಅಭ್ಯಾಸ ಮಾಡಿದ ಆಸನ ಇದು. ಮುಖ್ಯವಾಗಿ ಇದು ಮೆದುಳಿನ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಉಸಿರಾಟವು ನಿದ್ರಾಹೀನತೆಗೆ ಸಹಾಯ ಮಾಡುತ್ತದೆ. ರಾತ್ರಿ ನೆಮ್ಮದಿಯ ನಿದ್ದೆ ಮಾಡಬೇಕೆಂದರೆ ಈ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ ಎನ್ನುತ್ತಾರೆ ತಜ್ಞರು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ