ಮಿತಿ ಮೀರಿದ ಮಿಲನ ಕ್ರಿಯೆಯಿಂದ ಆರೋಗ್ಯಕ್ಕೆ ಕುತ್ತು ಖಂಡಿತ
ಪ್ರತಿಯೊಂದು ಜೀವಿಯಲ್ಲೂ ಲೈಂಗಿಕತೆ ಎನ್ನುವುದು ಸಹಜ ಹಾಗೂ ನೈಸರ್ಗಿಕ ಕ್ರಿಯೆಯಾಗಿದೆ. ಹಸಿವು, ದಾಹದಂತೆ ಕಾಮ ಕೂಡ ಒಂದಾಗಿದ್ದು, ಇದು ಇಬ್ಬರೂ ವ್ಯಕ್ತಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೇ, ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಒಂದು ವೇಳೆ ಲೈಂಗಿಕ ಕ್ರಿಯೆಯೂ ಮಿತಿ ಮೀರಿದರೆ ಹಲವಾರು ಆರೋಗ್ಯ ಸಮಸ್ಯೆಗಳಾಗುತ್ತದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಅತಿಯಾದರೆ ಅಮೃತ ಕೂಡ ವಿಷ ಎನ್ನುವ ಮಾತಿದೆ. ಹೀಗಾಗಿ ವೈವಾಹಿಕ ಜೀವನದಲ್ಲಿ ದಂಪತಿಗಳ ಅನ್ಯೋನ್ಯತೆಗೆ ಲೈಂಗಿಕ ಕ್ರಿಯೆ ಒಂದು ಭಾಗವೇ ಹೊರತು ಹೊರತು ಇದೇ ಎಲ್ಲವೂ ಅಲ್ಲವಾಗಿರುವುದಿಲ್ಲ. ಆದರೆ ಎಷ್ಟೋ ಸಂಬಂಧಗಳು ಈ ಕಾರಣದಿಂದಲೇ ಮುರಿಯುವ ಉದಾಹರಣೆಗಳು ಇವೆ. ಕೆಲವೊಮ್ಮೆ ಲೈಂಗಿಕ ಕ್ರಿಯೆಯೂ ಮಿತಿ ಮೀರಿದರೆ ಚಟವಾಗುವುದಲ್ಲದೆ, ಆರೋಗ್ಯದ ಮೇಲೆ ಅಡ್ಡಪರಿಣಾಮಗಳೇ ಹೆಚ್ಚು. ಹೌದು, ಅತಿಯಾದ ಲೈಂಗಿಕ ಚಟುವಟಿಕೆಯಲ್ಲಿ ಸಂಗಾತಿಗಳಿಬ್ಬರ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತದೆಯಂತೆ. ಹಾಗಂತ ಈ ನೈಸರ್ಗಿಕ ಕ್ರಿಯೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
* ಅತಿಯಾದ ಬಳಲಿಕೆ ಮತ್ತು ಸುಸ್ತು: ಸಂಗಾತಿಗಳಿಬ್ಬರೂ ಅತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ದೇಹದಲ್ಲಿ ನೊರ್ಪಿನ್ಫ್ರಿನ್, ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಬಿಡುಗಡೆಯಾಗುತ್ತದೆ. ಇದರಿಂದಾಗಿ ಹೃದಯಬಡಿತ ಹೆಚ್ಚಳ, ರಕ್ತದೊತ್ತಡದಲ್ಲಿ ಹೆಚ್ಚಳ ಹಾಗೂ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಅತಿಯಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ರೆ ದೇಹದ ಶಕ್ತಿ ಹೆಚ್ಚು ನಷ್ಟವಾಗುತ್ತದೆ. ಹೀಗಾಗಿ ಬಳಲಿಕೆ, ಆಯಾಸ, ಸ್ನಾಯು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
* ಶಿಶ್ನದಲ್ಲಿ ಊತ ಹಾಗೂ ನೋವು : ಲೈಂಗಿಕ ಕ್ರಿಯೆ ಬಳಿಕ ಪುರುಷರ ಶಿಶ್ನದಲ್ಲಿ ನೋವು ಇರುವುದು ಸರ್ವೇ ಸಾಮಾನ್ಯ. ಆದರೆ ಅತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಒತ್ತಾಯ ಪೂರ್ವಕವಾಗಿ ಸ್ಖಲನ ಮಾಡುವುದರಿಂದ ಶಿಶ್ನದಲ್ಲಿ ಊತ ಹಾಗೂ ನೋವು ಕಾಣಿಸಿಕೊಳ್ಳಬಹುದು.
* ಉರಿಯೂತ ಮತ್ತು ಊರಿ ಮೂತ್ರ: ಮಿತಿ ಮೀರಿದ ಲೈಂಗಿಕ ಕ್ರಿಯೆಯಿಂದಾಗಿ ಮಹಿಳೆಯರಲ್ಲಿ ಯೋನಿಯ ಮೇಲೆ ಒತ್ತಡ ಬೀಳುವುದೇ ಹೆಚ್ಚು. ಇದು ಯೋನಿಯ ಗೋಡೆಗಳಿಗೆ ಹಾನಿಯಾಗುವುದಲ್ಲದೆ, ಜನನಾಂಗದಲ್ಲಿ ಉರಿಯೂತ ಹಾಗೂ ಉರಿ ಮೂತ್ರದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
* ರೋಗಗಳು ಬರುವ ಸಾಧ್ಯತೆಯೇ ಹೆಚ್ಚು : ಅತಿಯಾದ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಮಹಿಳೆಯರಲ್ಲಿ ಲೈಂಗಿಕ ಸೋಂಕುಗಳು ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಅಸುರಕ್ಷಿತ ಹಾಗೂ ಪುನರಾವರ್ತಿತ ದೈಹಿಕ ಸಂಪರ್ಕವು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಪದೇ ಪದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಮೂತ್ರನಾಳದ ಸೋಂಕು ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು ಬರಬಹುದು.
ಇದನ್ನೂ ಓದಿ: ಕೂದಲಿಗೆ ಮೆಹಂದಿ ಹಚ್ಚುತ್ತಿದ್ರೆ ಇಂದೇ ನಿಲ್ಲಿಸಿ ಬಿಡಿ, ಈ ರೋಗ ಬರುವುದು ಖಂಡಿತ
* ನಿರ್ಜಲೀಕರಣ : ದಂಪತಿಗಳಿಬ್ಬರೂ ಲೈಂಗಿಕವಾಗಿ ತೊಡಗಿಸಿಕೊಳ್ಳುವುದರಿಂದ ದೇಹದಲ್ಲಿ ತೇವಾಂಶ ಕುಂಠಿತವಾಗುತ್ತದೆ. ಈ ಸಮಯದಲ್ಲಿ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ಚರ್ಮದ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
* ಆಸಕ್ತಿ ಕುಂಠಿತವಾಗುವುದು : ಮಿತಿ ಮೀರಿದ ದೈಹಿಕ ಸಂಪರ್ಕದಿಂದ ಪರಾಕಾಷ್ಠೆ ಸುಲಭವಾಗಿ ಸಿಗುವುದಿಲ್ಲ. ಈ ನಿರಂತರವಾದ ಲೈಂಗಿಕ ಕ್ರಿಯೆಯೂ ಖುಷಿಯನ್ನು ನೀಡದೆ ಇರುವ ಕಾರಣ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಸಂಗಾತಿಗಳಿಬ್ಬರಿಗೂ ಕಹಿ ಅನುಭವದೊಂದಿಗೆ ಪ್ರತಿ ಬಾರಿಯೂ ಇದೇ ರೀತಿಯಾದರೆ ಲೈಂಗಿಕತೆಯ ಬಗೆಗಿನ ಆಸಕ್ತಿಯೂ ಕಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ