Kannada News Lifestyle Makar Sankranti 2025 : Best wishes, images, messages and greetings to share with friends and family Kannada News SIU
Makar Sankranti 2025 : ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
ಮಕರ ಸಂಕ್ರಾಂತಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಸೂರ್ಯನಿಗೆ ಸಮರ್ಪಿತವಾಗಿದ್ದು ಈ ದಿನ ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗಿದೆ. ಈ ಸಂಕ್ರಾಂತಿಯು ಸಮೃದ್ಧಿಯ ಸಂಕೇತವಾಗಿದ್ದು, ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಈ ಶುಭ ಸಂದೇಶಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸುವ ಮೂಲಕ ಮಕರ ಸಂಕ್ರಾಂತಿಗೆ ಶುಭಾಶಯ ಕೋರಬಹುದು. ಹಾಗಾದ್ರೆ ಶುಭ ಕೋರಲು ಸಂದೇಶಗಳು ಇಲ್ಲಿವೆ.
Makar Sankranti 2025
Follow us on
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡ ಒಂದು. ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ವರ್ಷದ ಮೊದಲ ಹಬ್ಬ ಇದಾಗಿದ್ದು, ಈ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವನ್ನು ಮಕರ ಸಂಕ್ರಾತಿ ಹಬ್ಬವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿಯೊಂದು ಮನೆಗಳಲ್ಲಿ ಈ ಮಕರ ಸಂಕ್ರಾಂತಿಯಂದು ಎಳ್ಳುಬೆಲ್ಲಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ, ಜೀವನದಲ್ಲಿ ಸಿಹಿಯೇ ತುಂಬಿರಲಿ ಎಂದು ಹಾರೈಸುತ್ತಾರೆ. ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಿ.
ಮಕರ ಸಂಕ್ರಾಂತಿಯ ಶುಭ ದಿನ ಸೂರ್ಯನು ತನ್ನ ಪಥ ಬದಲಾಯಿಸುವಂತೆ ನಿಮ್ಮೆಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಕರುಣಿಸಲಿ, ಮಕರ ಸಂಕ್ರಾಂತಿ ಶುಭಾಶಯಗಳು.
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
ವರ್ಷದ ಮೊದಲ ಹಬ್ಬವು ನಿಮ್ಮ ಬದುಕನ್ನು ಬಂಗಾರವಾಗಿಸಲಿ. ಜೀವನದಲ್ಲಿ ದುಃಖ ಕಳೆದು ಕೇವಲ ಸಂತೋಷವೇ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿಯ ಶುಭಾಶಯಗಳು.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿ ಶುಭಾಶಯಗಳು.
ಎಳ್ಳು-ಬೆಲ್ಲ ಸವಿಯುತ ದ್ವೇಷ-ಅಸೂಯೆಗಳ ಮರೆಯುತ ಹಬ್ಬದ ಸಂಭ್ರಮ ಸಾರುತ, ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ, ಮಕರ ಸಂಕ್ರಾಂತಿಯ ಶುಭಾಶಯಗಳು.
ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಬಣ್ಣಗಳನ್ನು ತರಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ, ಸಮೃದ್ಧಿ ಮತ್ತು ಸುಖ – ಶಾಂತಿಯನ್ನು ದಯಪಾಲಿಸಲಿ, ಮಕರ ಸಂಕ್ರಾಂತಿಯ ಹಾರ್ಥಿಕ ಶುಭಾಶಯಗಳು.