ಟೂತ್ ಪೇಸ್ಟ್ನಲ್ಲಿರುವ ಹಾನಿಕಾರಕ ರಾಸಾಯನಿಕಗಳ ಬಗ್ಗೆ ನಾವೆಲ್ಲರೂ ಸಾಕಷ್ಟು ಕೇಳಿದ್ದೇವೆ. ಅದು ನಮ್ಮ ಹಲ್ಲು ಮತ್ತು ಒಸಡುಗಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅಲ್ಲದೆ ರಾಸಯನಿಕಯುಕ್ತ ಟೂತ್ ಪೇಸ್ಟ್ ಬಳಸಿ ಹಲ್ಲುಜ್ಜಿದರೆ ಬಾಯಿಯೊಳಗಿನ ಬ್ಯಾಕ್ಟೀರಿಯ ಕೂಡಾ ಹಾಗೆಯೇ ಉಳಿದು ಬಿಡುತ್ತದೆ. ಇದರಿಂದ ಹಲ್ಲುಗಳು ಕೂಡಾ ಬೇಗನೇ ದುರ್ಬಲಗೊಳ್ಳುತ್ತವೆ. ಹಾಗಿರುವಾಗ ರಾಸಯನಿಕಯುಕ್ತ ಟೂತ್ ಪೇಸ್ಟ್ ಬಳಸುವ ಬದಲು, ಬೇವಿನ ಹರ್ಬಲ್ ಟೂತ್ಪೇಸ್ಟ್ ಬಳಸಬಹುದು. ನೀವು ಮನೆಯಲ್ಲಿಯೇ ಸುಲಭವಾಗಿ ಬೇವಿನ ಎಲೆಗಳಿಂದ ಹರ್ಬಲ್ ಟೂತ್ ಪೇಸ್ಟ್ ತಯಾರಿಸಬಹುದು. ಆಯುರ್ವೇದದಲ್ಲಿ ಬೇವನ್ನು ಅದ್ಭುತ ಔಷಧಿಯೆಂದು ಪರಿಗಣಿಸಲಾಗಿದೆ. ಬೇವಿನ ಎಲೆಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳು ಸಮೃದ್ಧವಾಗಿದ್ದು, ಈ ಎಲೆಗಳು ತ್ವಚೆಯ ಆರೋಗ್ಯಕ್ಕೆ ಮಾತ್ರವಲ್ಲದೆ ಹಲ್ಲುಗಳ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ. ನೀವು ಪ್ರತಿನಿತ್ಯ ರಾಸಾಯನಿಕಯುಕ್ತ ಟೂತ್ ಪೇಸ್ಟ್ ಬಳಸುತ್ತಿದ್ದರೆ ಅದರ ಬದಲಿಗೆ ಮನೆಯಲ್ಲಿಯೇ ತಯಾರಿಸಿದ ಬೇವಿನ ಹರ್ಬಲ್ ಟೂತ್ ಪೇಸ್ಟ್ ಬಳಸಿ. ಇದು ಅನೇಕ ಹಲ್ಲು ಹಾಗೂ ಒಸಡು ಸಂಬಂಧಿ ಸಮಸ್ಯೆಗಳಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ.
ನೀವು ಸುಲಭವಾಗಿ ಬೇವಿನ ಎಲೆಯ ಹರ್ಬಲ್ ಟೂತ್ ಪೇಸ್ಟ್ ತಯಾರಿಸಬಹುದು. ಅದಕ್ಕಾಗಿ ನೀವು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದುಕೊಂಡು ನಂತರ ಆ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಆ ಪೇಸ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ಪದೀನಾ ಸಾರಭೂತ ತೈಲ ಮತ್ತು ಉಪ್ಪನ್ನು ಸೇರಿಸಿ. ಈ ಮಿಶ್ರಣದಿಂದ ಹಲ್ಲುಜ್ಜಿ. ವಾಸ್ತವವಾಗಿ ಬೇವು ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಕೂಡಿದ್ದು, ಇದು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಉಪ್ಪು ಸ್ಕ್ರಬ್ನಂತೆ ಕೆಲಸ ಮಾಡುತ್ತದೆ. ಅಲ್ಲದೆ ಪುದೀನಾ ಸಾರಭೂತ ತೈಲವು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಮತ್ತು ಬಾಯಿಯ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಜಗಿಯುವುದರಿಂದ ಲಭಿಸುತ್ತೇ ಹಲವು ಆರೋಗ್ಯ ಪ್ರಯೋಜನಗಳು
ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ: ಆಯುರ್ವೇದದ ಪ್ರಕಾರ ಬೇವು ರೋಗಾಣುಗಳ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ. ಆದ್ದರಿಂದ ಇದು ಬಾಯಿಯಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಒಸಡನ್ನು ಬಲಪಡಿಸುತ್ತದೆ: ಬೇವಿನ ಟೂತ್ ಪೇಸ್ಟ್ ಹಲ್ಲುನೋವು ನಿವಾರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಒಸಡುಗಳಲ್ಲಿ ಕಾಣಿಸಿಕೊಳ್ಳುವ ಊತದ ನಿವಾರಣೆಗೆ ಪರಿಣಾಮಕಾರಿ ಮನೆಮದ್ದಾಗಿದೆ . ಇದು ಒಸಡುಗಳನ್ನು ಬಲಪಡಿಸಲು ಕೂಡ ಸಹಕಾರಿಯಾಗಿದೆ.
ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ: ಬೇವಿನ ಹರ್ಬಲ್ ಟೂತ್ ಪೇಸ್ಟ್ನಿಂದ ಹಲ್ಲುಜ್ಜುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು. ಇದು ಬಾಯಿಯನ್ನು ರಿಫ್ರೆಶ್ ಮಾಡುತ್ತದೆ. ಇದಲ್ಲದೆ ಇದು ಬಾಯಿಯಲ್ಲಿ ಹುಣ್ಣುಗಳನ್ನು ಉಂಟುಮಾಡುವ ರಾಸಾಯನಿಕ ಪೇಸ್ಟ್ಗಳ ಹಾನಿಯಿಂದ ರಕ್ಷಿಸುತ್ತದೆ.
ಹಲ್ಲುಗಳ ಹಳದಿಗಟ್ಟುವಿಕೆಯನ್ನು ಹೋಗಲಾಡಿಸಲು ಸಹಕಾರಿ: ಅನೇಕ ಜನರನ್ನು ಹಲ್ಲುಗಳು ಹಳದಿಗಟ್ಟುವಿಕೆಯ ಸಮಸ್ಯೆ ಕಾಡುತ್ತದೆ. ಇದನ್ನು ಹೋಗಲಾಡಿಸಲು ಹಾಗಿರುವಾಗ ನೀವು ಕೂಡ ಬಿಳಿ ಮತ್ತು ಹೊಳೆಯುವ ಹಲ್ಲುಗಳನ್ನು ಹೊಂದಲು ಬಯಸಿದರೆ ಟೂತ್ ಪೇಸ್ಟ್ನಿಂದ ಹಲ್ಲುಜ್ಜಲು ಪ್ರಾರಂಭಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಹಲ್ಲುಗಳ ಹಳದಿಗಟ್ಟುವಿಕೆಯನ್ನು ತೊಡೆದುಹಾಕಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: