ಮನೆಯಲ್ಲಿಯೇ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿ; ರೆಸಿಪಿ ಇಲ್ಲಿದೆ

ಬಾಣಸಿಗ ಅನನ್ಯಾ ಬ್ಯಾನರ್ಜಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಈ ರೆಸಿಪಿ ವಿಭಿನ್ನ ಹಾಗೂ ನೀವು ಸುಲಭವಾಗಿ ಅತ್ಯಂತ ರುಚಿಕರ ಮಾವಿನ ಸುವಾಸನೆಯುಳ್ಳ ಐಸ್​​​ಕ್ರೀಮ್​​ ತಯಾರಿಸಬಹುದು.

ಮನೆಯಲ್ಲಿಯೇ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿ; ರೆಸಿಪಿ ಇಲ್ಲಿದೆ
Mango Icecream Recipe
Image Credit source: NDTV

Updated on: May 26, 2023 | 12:26 PM

ಮಾವಿನ ಹಣ್ಣಿನ ಸೀಸನ್​​​ ಪ್ರಾರಂಭವಾಗುತ್ತಿದ್ದಂತೆ, ಎಲ್ಲೆಡೆ ಮಾವಿನ ಘಮ ಮೂಗಿಗೆ ಬಡಿಯುತ್ತಿರುತ್ತದೆ.  ಮಾವಿನ ಹಣ್ಣನ್ನು ತಿಂದು ತಿಂದು ಬೇಜಾರಾಗಿದ್ದರೆ, ಈ ರೀತಿಯಾಗಿ ವಿಶೇಷವಾಗಿ ಮಾವಿನ ರುಚಿಯನ್ನು ಪಡೆಯಿರಿ. ನೀವು ಮನೆಯಲ್ಲಿಯೇ ನೈಸರ್ಗಿಕ ಮಾವಿನ ರುಚಿಯೊಂದಿಗಿನ ಐಸ್​​​ಕ್ರೀಮ್​​​ ತಯಾರಿಸಿ.  ಸಾಮಾನ್ಯವಾಗಿ, ಮಾವಿನ ಹಣ್ಣಿನ ಐಸ್ ಕ್ರೀಮ್ ಅನ್ನು ಸಕ್ಕರೆ, ಹಾಲು ಮತ್ತು ಕೆನೆಯೊಂದಿಗೆ ಮಾವಿನಕಾಯಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಬಾಣಸಿಗ ಅನನ್ಯಾ ಬ್ಯಾನರ್ಜಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಈ ರೆಸಿಪಿ ವಿಭಿನ್ನ ಹಾಗೂ ನೀವು ಸುಲಭವಾಗಿ ಅತ್ಯಂತ ರುಚಿಕರ ಮಾವಿನ ಸುವಾಸನೆಯುಳ್ಳ ಐಸ್​​​ಕ್ರೀಮ್​​ ತಯಾರಿಸಬಹುದು.

ಮನೆಯಲ್ಲಿ ಮಾವಿನ ಐಸ್ ಕ್ರೀಮ್ ತಯಾರಿಸುವುದು ಹೇಗೆ?

ಮಾಗಿದ ಮಾವಿನಹಣ್ಣುಗಳನ್ನು ತೆಗೆದುಕೊಂಡು ಒಂದೇ ಸಮನಾಗಿ ಕತ್ತರಿಸಿ. ನಂತರ ಹಾಲಿನ ಪುಡಿ, ಸಕ್ಕರೆ ಪುಡಿ, ತಾಜಾ ಕ್ರೀಮ್ ಮತ್ತು ಹಾಲಿನೊಂದಿಗೆ ಅರ್ಧದಷ್ಟು ಮಾವಿನ ತುಂಡುಗಳನ್ನು ಮಿಶ್ರಣ ಮಾಡಿ. ನೀವು ಎಲ್ಲವನ್ನೂ ಮಿಕ್ಸರ್ ಗ್ರೈಂಡರ್ನಲ್ಲಿ ಮಿಶ್ರಣ ಮಾಡಬಹುದು ಅಥವಾ ಹ್ಯಾಂಡ್ ಬ್ಲೆಂಡರ್ ಅನ್ನು ಬಳಸಬಹುದು. ಹ್ಯಾಂಡ್ ಬ್ಲೆಂಡರ್ ಅನ್ನು ಬಳಸುತ್ತಿದ್ದರೆ, ಮೊದಲು ಕ್ರೀಮ್ ಅನ್ನು ಪ್ರತ್ಯೇಕವಾಗಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಅದನ್ನು ಉಳಿದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.

ಇದನ್ನೂ ಓದಿ: ಬಾಳೆಹಣ್ಣು ಪಾಯಸ ಮಾಡುವುದನ್ನು ಇಂದೇ ಕಲಿಯಿರಿ; ಇಲ್ಲಿದೆ ಸುಲಭ ಪಾಕವಿಧಾನ

ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಸುರಿಯಿರಿ. ನಂತರ ಇದಕ್ಕೆ ಮಾವಿನ ಹಣ್ಣಿನ ತುಂಡುಗಳನ್ನು ಹಾಗೂ ಮಾವಿನ ಎಸೆನ್ಸ್​​​​​​​​ ಸೇರಿಸಿ. ಸರಿಯಾದ ಮುಚ್ಚಳ ಇರುವ ಪಾತ್ರೆಯಲ್ಲಿ ಹಾಕಿಡಿ ಅಥವಾ ಪ್ಲಾಸ್ಟಿಕ್​​​ನಿಂದ ರಾಪ್​​ ಮಾಡಿ ಇಡಿ. ಐಸ್ ಕ್ರೀಮ್ ಅನ್ನು 6-7 ಗಂಟೆಗಳ ಕಾಲ ಅಥವಾ ರಾತ್ರಿಯವರೆಗೆ ಫಿಡ್ಜ್​​​ನಲ್ಲಿಡಿ. ಸಿಹಿ ನೈಸರ್ಗಿಕ ಮಾವಿನ ಐಸ್ ಕ್ರೀಮ್ ಅನ್ನು ಆನಂದಿಸಿ!

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:26 pm, Fri, 26 May 23