ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಓಮದ ಕಾಳು ಕೂಡ ಒಂದು. ಖಾದ್ಯಗಳ ವಿಶಿಷ್ಟವಾದ ಪರಿಮಳವನ್ನು ಹೆಚ್ಚಿಸುವ ಈ ಓಮ ಕಾಳಿನಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣಾಂಶಗಳೂ ಹೇರಳವಾಗಿವೆ. ಆರೋಗ್ಯ ಸಮಸ್ಯೆಗಳು ಉಂಟಾದಾಗ ಅಡುಗೆ ಮನೆಯ ಡಬ್ಬಿಯಲ್ಲಿರುವ ಈ ಓಮದ ಕಾಳು ಅಥವಾ ಅಜ್ವೈನವು ಔಷಧಿಯಾಗಿ ಕೆಲಸ ಮಾಡುತ್ತವೆ.
* ಓಮದ ಕಾಳಿನ ಪುಡಿಯನ್ನು ವಸ್ತ್ರದಲ್ಲಿ ಕಟ್ಟಿ, ವಾಸನೆಯನ್ನು ತೆಗೆದುಕೊಳ್ಳುತ್ತಿದ್ದರೆ ನೆಗಡಿಯು ಕಡಿಮೆಯಾಗುತ್ತದೆ.
* ಒಂದು ಚಮಚ ಓಮದ ಕಾಳಿನ ಪುಡಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಹೊಟ್ಟೆನೋವು ಶಮನವಾಗುತ್ತದೆ.
* ಓಮ ಕಾಳು , ಸ್ವಲ್ಪ ಪ್ರಮಾಣದಲ್ಲಿ ಶುಂಠಿ, ಸೈಂಧವ ಲವಣ ಹಾಗೂ ಜಾಯಿಕಾಯಿ ಕುಟ್ಟಿ ಪುಡಿ ಮಾಡಿ ಸ್ವಲ್ಪ ಬಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಹೊಟ್ಟೆನೋವಿಗೆ ಪರಿಣಾಮಕಾರಿಯಾದ ಔಷಧ.
* ಓಮದ ಕಾಳನ್ನು ಬಾಯಿಗೆ ಹಾಕಿ ಜಗಿದು ತಿನ್ನುವುದರಿಂದ ಬಾಯಿಯ ದುರ್ನಾತವು ದೂರವಾಗಿ ಹಲ್ಲಿನ ಸಮಸ್ಯೆಯು ದೂರವಾಗುತ್ತದೆ. ಹಾಗೂ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವುದು.
* ಓಮದ ಪುಡಿ, ಜೇಷ್ಠಮಧು ಪುಡಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಕುಡಿಯುವುದರಿಂದ ರಕ್ತದ ಬೇಧಿಯ ಸಮಸ್ಯೆಯಿಂದ ಮುಕ್ತರಾಗಬಹುದು.
* ಓಮದ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಅಡಿಗೆ ನೋಡಾ ಬೆರೆಸಿ ಮಕ್ಕಳಿಗೆ ಕುಡಿಯಲು ಕೊಡುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಾಗುತ್ತದೆ.
* ಓಮದ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ: ವಯಾಗ್ರ ಮಾತ್ರೆ ಸೇವಿಸುತ್ತಿದ್ದರೆ ಮರೆವಿನ ಕಾಯಿಲೆಯ ಅಪಾಯದ ಮಟ್ಟ ತೀರಾ ಕಡಿಮೆ
* ಓಮದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.
* ಅರಶಿನ ಪುಡಿಯೊಂದಿಗೆ ಓಮದ ಕಾಳನ್ನು ನುಣ್ಣಗೆ ಅರೆದು ಕಜ್ಜಿಯ ಮೇಲೆ ಹಚ್ಚುವುದರಿಂದ ಕಜ್ಜಿ ಬೇಗನೆ ಗುಣ ಕಾಣುತ್ತದೆ.
* ಒಂದು ಚಮಚ ಓಮದ ಕಾಳನ್ನು ಬಾಣಲೆಗೆ ಹಾಕಿ ಹುರಿದು ಪುಡಿ ಮಾಡಿ, ಒಂದು ಲೋಟ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ.
* ಒಂದು ಚಮಚ ಓಮದ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.
* ಎರಡು ಗ್ರಾಂ ಓಮದ ಕಾಳಿನ ಪುಡಿ ಮತ್ತು ಒಂದು ಗ್ರಾಂ ಸೋಂಪಿನ ಪುಡಿಗೆ ಕಲ್ಲು ಸಕ್ಕರೆ ಪುಡಿ ಬೆರೆಸಿ ಬಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದರೆ ವಾಯುಬಾಧೆ ನಿವಾರಣೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ