Menstrual Cramps: ಪಿರಿಯಡ್ ಸಮಯದಲ್ಲಿ ತಡೆಯಲಾರದ ಹೊಟ್ಟೆನೋವಿಗೆ ಇಲ್ಲಿದೆ ಪರಿಹಾರ

|

Updated on: Feb 13, 2024 | 3:16 PM

Period Cramps: ಮುಟ್ಟಿನ ಸೆಳೆತವನ್ನು ಹೊತ್ತುಕೊಂಡು ದಿನವಿಡೀ ಕೆಲಸ ಮಾಡುವುದು ನಿಜವಾಗಿಯೂ ಕಿರಿಕಿರಿಯುಂಟುಮಾಡುತ್ತದೆ. ಆದರೆ ಔಷಧಿಗಳ ಬೆಂಬಲವಿಲ್ಲದೆ ಈ ಪಿರಿಯಡ್ ನೋವನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳಿವೆ. ಪ್ರತಿ ತಿಂಗಳೂ ಕಾಡುವ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುವ ನೈಸರ್ಗಿಕ ವಿಧಾನಗಳು ಇಲ್ಲಿವೆ.

Menstrual Cramps: ಪಿರಿಯಡ್ ಸಮಯದಲ್ಲಿ ತಡೆಯಲಾರದ ಹೊಟ್ಟೆನೋವಿಗೆ ಇಲ್ಲಿದೆ ಪರಿಹಾರ
ಮುಟ್ಟಿನ ಸೆಳೆತ
Image Credit source: iStock
Follow us on

ಡಿಸ್ಮೆನೊರಿಯಾ ಎಂದೂ ಕರೆಯಲ್ಪಡುವ ಪಿರಿಯಡ್ಸ್ ಸೆಳೆತವು (Menstrual Cramps) ಮುಟ್ಟಿನ ಸಮಯದಲ್ಲಿ ಗರ್ಭಾಶಯದ ಸ್ನಾಯುಗಳ ಸಂಕೋಚನದಿಂದ ಉಂಟಾಗುತ್ತದೆ. ಇದು ವಿಪರೀತ ನೋವಿಗೆ ಕಾರಣವಾಗುತ್ತದೆ. ಮುಟ್ಟಿನ ಸಮಯದಲ್ಲಿನ (Period Cramp) ಸಣ್ಣ ಮಟ್ಟದ ಸೆಳೆತಗಳು ಅನೇಕ ಮಹಿಳೆಯರಿಗೆ ಋತುಚಕ್ರದಲ್ಲಿ ಸಾಮಾನ್ಯವಾಗಿದ್ದರೂ, ತೀವ್ರವಾದ ನೋವು ಮಾನಸಿಕವಾಗಿಯೂ ತೊಂದರೆ ಉಂಟುಮಾಡುತ್ತದೆ.

ಮೂಡ್ ಬದಲಾವಣೆಗಳು, ಆಹಾರದ ಕಡುಬಯಕೆಗಳು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಇತರ ಭಾಗಗಳಲ್ಲಿ ನೋವು ಇವು ಮುಟ್ಟಿನ ಸಮಯದಲ್ಲಿ ಬಹಳ ಸಾಮಾನ್ಯವಾಗಿವೆ. ಗರ್ಭಾಶಯದ ಸಂಕೋಚನದಿಂದ ಸೆಳೆತ ಉಂಟಾಗುತ್ತದೆ. ಅದು ನಿಮ್ಮ ಪಿರಿಯಡ್ ನೋವಿನ ಮೊದಲು ಅಥವಾ ಮುಟ್ಟಿನ ಸಮಯದಲ್ಲಿ ಸಂಭವಿಸುತ್ತದೆ. ವಿಭಿನ್ನ ಜನರಿಗೆ ಇದು ಭಿನ್ನವಾಗಿರಬಹುದು. ಕೆಲವು ಮಹಿಳೆಯರು ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಆದರೆ ಕೆಲವರಿಗೆ ಈ ನೋವು ಸೌಮ್ಯವಾಗಿರುತ್ತದೆ. ಕೆಲವರಿಗೆ ಯಾವುದೇ ನೋವೂ ಇರುವುದಿಲ್ಲ.

ಇದನ್ನೂ ಓದಿ: Exercise During Period: ಮುಟ್ಟಿನ ಸಮಯದಲ್ಲಿ ಈ ಯೋಗಭಂಗಿಗಳಿಂದ ದೂರವಿರಿ

ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ನೈಸರ್ಗಿಕವಾದ 5 ಪರಿಣಾಮಕಾರಿ ಮಾರ್ಗಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪಿರಿಯಡ್ ಸೆಳೆತವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಲಹೆಗಳು ಇಲ್ಲಿವೆ.

ನಿರ್ಜಲೀಕರಣವಾಗದಂತೆ ಎಚ್ಚರ ವಹಿಸಿ:

ಸಕ್ಕರೆ ಪಾನೀಯಗಳನ್ನು ಸೇವಿಸಬೇಡಿ. ಆದರೆ ನೀರಿನ ಸೇವನೆಯನ್ನು ಕಡಿಮೆ ಮಾಡಬೇಡಿ. ನಿರ್ಜಲೀಕರಣವು ಮುಟ್ಟಿನ ಸೆಳೆತವನ್ನು ಹೆಚ್ಚಿಸಬಹುದು. ಆದ್ದರಿಂದ ದೇಹವನ್ನು ಹೈಡ್ರೇಟ್ ಆಗಿಡಿ.

ಆ್ಯಕ್ಟಿವ್ ಆಗಿರಿ:

ನಿಷ್ಕ್ರಿಯತೆಯು ನಿಮ್ಮ ಮುಟ್ಟಿನ ನೋವಿನ ಸಮಸ್ಯೆಯನ್ನು ಹೆಚ್ಚಿಸಬಹುದು. ಹೀಗಾಗಿ, ಸೆಳೆತಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಚಲನೆಯಲ್ಲಿ ಇರಿಸಿ. ನೃತ್ಯ, ನಡಿಗೆ, ವ್ಯಾಯಾಮಗಳನ್ನು ಮಾಡಿ.

ಕ್ಯಾಲೋರಿಗಳ ಸೇವನೆ ಬಗ್ಗೆ ಎಚ್ಚರದಿಂದಿರಿ:

ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸಿ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶವನ್ನು ಕಡ್ಡಾಯವಾಗಿ ಸೇವಿಸಿ.

ಇದನ್ನೂ ಓದಿ: Weight Loss: ತೂಕ ಇಳಿಸಬೇಕಾ?; ಕೇಸರಿ ಬಳಸಿ!

ತಣ್ಣೀರಿನ ಸ್ನಾನ ಮಾಡಬೇಡಿ:

ಮುಟ್ಟಿನ ಸಮಯದಲ್ಲಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಬೇಡಿ. ಆದಷ್ಟೂ ಬಿಸಿಯಾದ ನೀರಿನಿಂದ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ.

ಒತ್ತಡದ ಓವರ್​ಲೋಡ್:

ಅತಿಯಾಗಿ ಒತ್ತಡ ತಂದುಕೊಳ್ಳಬೇಡಿ. ಮನಸ್ಸನ್ನು ಶಾಂತಗೊಳಿಸುವ ಚಟುವಟಿಕೆಗಳೊಂದಿಗೆ ನಿಮ್ಮ ಝೆನ್ ವಲಯವನ್ನು ಹುಡುಕಿ. ಈ ಸಮಯದಲ್ಲಿ ಮನಸನ್ನು ಪ್ರಶಾಂತವಾಗಿಟ್ಟುಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ