Periods and fertility: ಮುಟ್ಟಿನ ಸಮಯದಲ್ಲಿ ನೀವು ಮಾಡುವ ತಪ್ಪು ಬಂಜೆತನಕ್ಕೆ ಕಾರಣವಾಗಬಹುದು
ಯೋನಿ ಸೋಂಕುಗಳು ನಿಮ್ಮ ಸಂತಾನೋತ್ಪತ್ತಿ ಅಂಗಗಳ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರಬಹುದು. ಅದನ್ನು ನೀವು ಆರಂಭಿಕ ಹಂತದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ. ಮುಟ್ಟಿನ ಆರೋಗ್ಯಕ್ಕೆ ಬಂದಾಗ ನೈರ್ಮಲ್ಯದ ಅಭ್ಯಾಸಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.
ಋತುಸ್ರಾವ ಹಾಗೂ ಬಂಜೆತನಕ್ಕೆ ನೇರ ಸಂಬಂಧವಿದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಯಾಕೆಂದರೆ ಮುಟ್ಟಿನ ಸಮಯದಲ್ಲಿ ನೀವು ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅದು ನೇರವಾಗಿ ನಿಮ್ಮ ಗರ್ಭಾಶಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಖಾಸಗಿ ಭಾಗಗಳಲ್ಲಿ ಸೋಂಕು, ದದ್ದು, ಕೆಂಪಾಗುವುದು ಮತ್ತು ತುರಿಕೆ ಇತರ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಿ. ಯೋನಿ ಸೋಂಕುಗಳು ನಿಮ್ಮ ಸಂತಾನೋತ್ಪತ್ತಿ ಅಂಗಗಳ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರಬಹುದು. ಅದನ್ನು ನೀವು ಆರಂಭಿಕ ಹಂತದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ.ಮುಟ್ಟಿನ ಆರೋಗ್ಯಕ್ಕೆ ಬಂದಾಗ ನೈರ್ಮಲ್ಯದ ಅಭ್ಯಾಸಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.
ಇದಲ್ಲದೇ ಮುಟ್ಟಿನ ಸಮಯದಲ್ಲಿ ವಾಕರಿಕೆ, ವಾಂತಿ, ತೀವ್ರ ಸೆಳೆತ ಮತ್ತು ಅತಿಸಾರದಿಂದ ಬಳಲುತ್ತಿದ್ದರೆ ನಿಮ್ಮ ಹತ್ತಿರದ ಸ್ತ್ರೀರೋಗ ತಜ್ಞರನ್ನು ಭೇಟಿ ನೀಡಿ. ಎಂದಿಗೂ ಈ ವಿಷಯದಲ್ಲಿ ಮುಜುಗರಬೇಡ ಎಂದು ಡಾ ಕಲ್ಯಾಣಿ ಶ್ರೀಮಾಲಿ ಸಲಹೆ ನೀಡುತ್ತಾರೆ.
ಮುಟ್ಟಿನ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಬ್ಯಾಕ್ಟೀರಿಯಾದ ವಜಿನೋಸಿಸ್ (ಯೋನಿಯ ಸೋಂಕು) ನಂತಹ ಯೋನಿ ಸೋಂಕುಗಳಿಗೆ ಕಾರಣವಾಗಬಹುದು. ನೀವು ಎಂಡೊಮೆಟ್ರಿಟಿಸ್ ಮತ್ತು ಶ್ರೋಣಿಯ ಉರಿಯೂತ ಸಮಸ್ಯೆಯನ್ನು ಹೊಂದಿದ್ದರೆ ಅದು ಫಲವತ್ತತೆಯ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಕೆಲವೊಮ್ಮೆ ಬಂಜೆತನಕ್ಕೂ ಕಾರಣವಾಗಬಹುದು.
ಇದನ್ನೂ ಓದಿ: ಹಾಲುಣಿಸುವ ತಾಯಂದಿರಲ್ಲಿ ಮೊಲೆತೊಟ್ಟುಗಳ ಬಿರುಕು ಅಥವಾ ರಕ್ತಸ್ರಾವಕ್ಕೆ ಕಾರಣವೇನು? ಪರಿಹಾರ ಇಲ್ಲಿದೆ
ಮುಟ್ಟಿನ ದಿನಾಂಕದಲ್ಲಿ ವಿಳಂಬವಾಗುತ್ತಿದ್ದರೆ, ಅಥವಾ ಪ್ರತೀ ತಿಂಗಳು ಸರಿಯಾಗಿ ಮುಟ್ಟು ಆಗುತ್ತಿಲ್ಲವೆಂದಾದರೆ ನಿರ್ಲಕ್ಷ್ಯದಿಂದಿರಬೇಡಿ. ಇಂತಹ ವಿಷಯದಲ್ಲಿ ಸಾಕಷ್ಟು ಮಹಿಳೆಯರು ವೈದ್ಯರನ್ನು ಭೇಟಿಯಾಗಲು ಹಿಂಜರಿಯುತ್ತಾರೆ. ಆದರೆ ಋತು ಸ್ರಾವದ ವಿಳಂಬವೂ ಕೂಡ ಕಾಲಕ್ರಮೇಣ ಸಂತಾನೋತ್ಪತ್ತಿ ಅಂಗಗಳ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಮುಟ್ಟಿನ ಸಮಯದಲ್ಲಿ ನೀವು ಪ್ಯಾಡ್, ಬಟ್ಟೆ ಅಥವಾ ಯಾವುದೇ ಇತರ ಉತ್ಪನ್ನಗಳನ್ನು ಬಳಸುತ್ತಿದ್ದರೆ, ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಇದಲ್ಲದೇ ಪ್ಯಾಡ್ ಬಳಸುತ್ತಿದ್ದರೆ ಪ್ರತಿ 4-8 ಗಂಟೆಗಳಿಗೊಮ್ಮೆ ಬದಲಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ