ನೊಣಗಳ ಕಾಟದಿಂದ ಬೇಸತ್ತಿದ್ದೀರಾ?; ಹೀಗೆ ಮಾಡಿ ನೋಡಿ

|

Updated on: Feb 13, 2024 | 1:40 PM

Houseflies: ನೊಣಗಳು ಇಲ್ಲದ ಮನೆ ಇಲ್ಲವೇ ಇಲ್ಲ ಎನ್ನಬಹುದು. ಈ ನೊಣಗಳ ಕಾಟದಿಂದ ನೀವು ಬೇಸತ್ತಿದ್ದೀರಾ? ಇದನ್ನು ಕಂಟ್ರೋಲ್ ಮಾಡಲು ಏನು ಮಾಡಬೇಕೆಂದು ತಿಳಿಯದೆ ಪರದಾಡುತ್ತಿದ್ದೀರಾ? ನೊಣಗಳನ್ನು ಮನೆಯಿಂದ ಓಡಿಸುವುದು ಹೇಗೆ? ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

ನೊಣಗಳ ಕಾಟದಿಂದ ಬೇಸತ್ತಿದ್ದೀರಾ?; ಹೀಗೆ ಮಾಡಿ ನೋಡಿ
ನೊಣಗಳು
Image Credit source: iStock
Follow us on

ಮನೆಗಳಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ಕೀಟಗಳಾದ ನೊಣಗಳು ತನ್ನೊಂದಿಗೆ ಕೊಳಕನ್ನು ಹೊತ್ತು ತರುತ್ತದೆ. ಹೀಗಾಗಿ, ಇದು ಆರೋಗ್ಯಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ನೊಣಗಳು (Houseflies) ಕಚ್ಚದಿದ್ದರೂ ಅವು ರೋಗಗಳನ್ನು ಹರಡಬಹುದು. ಅವು ತಮ್ಮ ಕಾಲಿನಲ್ಲಿ ಕೊಳಕನ್ನು ಮೆತ್ತಿಕೊಂಡು ಬಂದು ನಿಮ್ಮ ಆಹಾರದ ಮೇಲೆ ಕೂರಬಹುದು. ಇದು ಹಾನಿಕಾರಕ ರೋಗಕಾರಕಗಳನ್ನು ಹೊತ್ತು ತರುತ್ತದೆ. ಆ ರೋಗಕಾರಕಗಳು ಫುಡ್ ಪಾಯ್ಸನಿಂಗ್, ಕಾಲರಾ, ಟೈಫಾಯಿಡ್ ಜ್ವರ, ಭೇದಿ ಮತ್ತು ಕ್ಷಯ ರೋಗವನ್ನು ಉಂಟುಮಾಡಬಹುದು.

ನೊಣಗಳು ಎಲ್ಲಿಂದ ಬರುತ್ತವೆ?:

ಮನೆಯೊಳಗೆ ಬರುವ ನೊಣಗಳು ತೆರೆದ ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ನಿಮ್ಮ ಮನೆಗೆ ಪ್ರವೇಶಿಸುತ್ತವೆ. ನೀವು ಪರದೆಗಳನ್ನು ಹಾಕದಿದ್ದರೆ ನೊಣಗಳು ನಿಮ್ಮ ಮನೆಯಲ್ಲಿರುವ ಆಹಾರಕ್ಕೆ ನೇರವಾಗಿ ದಾಳಿ ಇಡುತ್ತದೆ. ಅವು ಪ್ರಾಥಮಿಕವಾಗಿ ಕೊಳೆಯುತ್ತಿರುವ ಸಾವಯವ ಆಹಾರ, ಪದಾರ್ಥಗಳಿಗೆ ಆಕರ್ಷಿತವಾಗುತ್ತವೆ. ನೀವು ಆರಂಭದಲ್ಲಿ ಒಂದು ಅಥವಾ ಎರಡು ನೊಣಗಳನ್ನು ಸಹಿಸಿಕೊಳ್ಳಬಹುದಾದರೂ, ಮನೆ ತುಂಬ ನೊಣಗಳು ಹಾರಾಡುವಾಗ ಅದನ್ನು ಸಹಿಸಿಕೊಳ್ಳುವುದು ಕಷ್ಟ. ಹಾಗೇ, ನೊಣಗಳು ಬೇಗ ಸಂತಾನೋತ್ಪತ್ತಿ ಮಾಡುತ್ತವೆ, ಇದರಿಂದ ಮನೆಯ ತುಂಬ ನೊಣಗಳೇ ತುಂಬಿಕೊಳ್ಳುತ್ತವೆ. ಹಲವಾರು ಪರಿಣಾಮಕಾರಿ ವಿಧಾನಗಳನ್ನು ಬಳಸಿಕೊಂಡು ಅವುಗಳ ಸಂತಾನೋತ್ಪತ್ತಿಯನ್ನು ಮೊದಲೇ ನಿಲ್ಲಿಸಬಹುದು. ನೈಸರ್ಗಿಕ ಅಥವಾ DIY ಕೀಟನಾಶಕಗಳು, ಸ್ಪ್ರೇ ನಿವಾರಕಗಳು, ಬಾಗಿಲುಗಳನ್ನು ಹಾಕಿಡುವುದು ಹೀಗೆ ಹಲವು ಉಪಾಯಗಳಿವೆ.

ಇದನ್ನೂ ಓದಿ: Hug Day 2024: ತಬ್ಬಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಾ?

ನೊಣಗಳನ್ನು ತಡೆಗಟ್ಟುವ ತಂತ್ರಗಳು:

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ. ನಿಮ್ಮ ಮನೆಯಲ್ಲಿ ನೊಣಗಳನ್ನು ತಪ್ಪಿಸಲ ಅವುಗಳ ಪ್ರವೇಶವನ್ನು ನಿಯಂತ್ರಿಸಿ. ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಅಥವಾ ಪರದೆಗಳನ್ನು ಹಾಕಿಡಿ. ಹರಿದ ಅಥವಾ ಹಾನಿಗೊಳಗಾದ ಕಿಟಕಿಯ ಪರದೆಗಳನ್ನು ಪ್ಯಾಚ್ ಮಾಡಿ ಅಥವಾ ಬದಲಾಯಿಸಿ. ನೊಣಗಳು ನಿಮ್ಮ ಮನೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ತಡೆಯಲು ಉತ್ತಮ ಮಾರ್ಗವೆಂದರೆ ಅವುಗಳ ಆಹಾರ ಮತ್ತು ಸಂತಾನೋತ್ಪತ್ತಿಯ ಸ್ಥಳಗಳನ್ನು ತೊಡೆದುಹಾಕುವುದು. ನೊಣಗಳು ಕೊಳೆಯುತ್ತಿರುವ ಹಣ್ಣುಗಳು, ಆಹಾರ, ಮುಚ್ಚಿದ ಪಾನೀಯಗಳು, ಮಲ ಮತ್ತು ಕಸದ ತೊಟ್ಟಿಗಳಿಗೆ ಆಕರ್ಷಿತವಾಗುತ್ತವೆ. ಆದ್ದರಿಂದ, ನೊಣಗಳನ್ನು ತೊಡೆದುಹಾಕಲು ಮೊದಲ ಹಂತವೆಂದರೆ ಮನೆಯ ಸುತ್ತಲೂ ಶುಚಿತ್ವವನ್ನು ಕಾಪಾಡಿಕೊಳ್ಳುವುದು.

ಇದನ್ನೂ ಓದಿ: ನೊಣಗಳಿಂದ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗದಂತೆ ತಡೆಯುವುದು ಹೇಗೆ?

– ಬಚ್ಚಲು ಮನೆ ಮತ್ತು ಅಡುಗೆಮನೆಯನ್ನು ಕ್ಲೀನ್ ಆಗಿಡಿ.

– ಕೊಳೆತ ಆಹಾರವನ್ನು ವಿಲೇವಾರಿ ಮಾಡಿ.

– ನಿಯಮಿತವಾಗಿ ಕಸದ ತೊಟ್ಟಿಗಳನ್ನು ಖಾಲಿ ಮಾಡಿ. ಕಸದ ಚೀಲವು ಭಾಗಶಃ ತುಂಬಿದ್ದರೆ ಅದನ್ನು ಮುಚ್ಚಿ.

– ಶೌಚಾಲಯಗಳನ್ನು ಫ್ಲಶ್ ಮಾಡಿ ಮತ್ತು ಕೊಳಕು ಡೈಪರ್​ಗಳನ್ನು ಬೇಗ ಎಸೆಯಿರಿ.

– ಸಾಕುಪ್ರಾಣಿಗಳ ಚರ್ಮ, ಆಹಾರ ಮತ್ತು ಮಲಗುವ ಜಾಗವನ್ನು ಸ್ವಚ್ಛವಾಗಿಡಿ.

– ಉಳಿದ ಆಹಾರವನ್ನು ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿ.

– ತೆರೆದ ಬಾಗಿಲುಗಳು ಅಥವಾ ಕಿಟಕಿಗಳ ಮೇಲೆ ಪರದೆಗಳನ್ನು ಹಾಕಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ