ಪ್ರಪಂಚದಾದ್ಯಂತದ ಉದ್ಯೋಗಿಗಳಿಗೆ, ವಿಶೇಷವಾಗಿ ಟೆಕ್ ಜಗತ್ತಿನಲ್ಲಿರುವವರಿಗೆ, ಹೊಸ ವರ್ಷವು ಸಂತಸದ ಬದಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಟೆಕ್ ದೈತ್ಯರಾಗಿರಲಿ ಅಥವಾ ಸಣ್ಣ ಸ್ಟಾರ್ಟ್‌ಅಪ್‌ಗಳಿರಲಿ ಹಲವೆಡೆ ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡಿದೆ. ಕೆಲಸದಿಂದ ವಜಾ ಮಾಡಿದ ತಕ್ಷಣ ಬೇರೆಡೆ ಕೆಲಸ ಸಿಗುವುದು ಕಷ್ಟ, ಆರ್ಥಿಕತೆಯ ಹೊಡೆತದ ಜತೆಗೆ ಮಾನಸಿಕವಾಗಿಯೂ ನೋವು ಅನುಭವಿಸುತ್ತಾರೆ. ತಕ್ಷಣ ಕೆಲಸ ಸಿಗದಿದ್ದರೆ ಕ್ರಮೇಣವಾಗಿ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಉದ್ಯೋಗ ನಷ್ಟವು ಗಮನಾರ್ಹವಾದ ಒತ್ತಡವಾಗಿದೆ, ವಿಶೇಷವಾಗಿ ಅದು ಇದ್ದಕ್ಕಿದ್ದಂತೆ ಸಂಭವಿಸಿದಾಗ, ನಿರುದ್ಯೋಗಿಗಳ ಒತ್ತಡ ಮತ್ತು ಅನಿಶ್ಚಿತತೆಯು ಆತಂಕ ಮತ್ತು ಖಿನ್ನತೆಯ ಭಾವನೆಗಳಿಗೆ ಕಾರಣವಾಗಬಹುದು.
ಗಮನಹರಿಸಬೇಕಾದ ಲಕ್ಷಣಗಳು
ಖಿನ್ನತೆಯನ್ನು ಹೇಗೆ ಗುರುತಿಸುವುದು
ವ್ಯಕ್ತಿಯಿಂದ ನಿರೀಕ್ಷಿತ ಪ್ರತಿಕ್ರಿಯೆ ಬರುವುದಿಲ್ಲ, ಸದಾ ಏನೋ ಆಲೋಚನೆ, ಯಾವ ವಿಷಯದಲ್ಲೂ ಶ್ರದ್ಧೆ ಇಲ್ಲದಿರುವುದು.
ದುಃಖ ಅಥವಾ ಕಿರಿಕಿರಿ
ದಣಿವು ಅಥವಾ ಶಕ್ತಿಯ ಕೊರತೆ
ಆಸಕ್ತಿಯ ನಷ್ಟ ಅಥವಾ ಪ್ರೇರಣೆಯ ಕೊರತೆ
ಸಂತೋಷಕರವಾದ ಚಟುವಟಿಕೆಗಳನ್ನು ಆನಂದಿಸಲು ಸಾಧ್ಯವಾಗಲಿಲ್ಲ
ಭರವಸೆಯ ಕೊರತೆ, ಸ್ವ-ಮೌಲ್ಯದ ಕೊರತೆ ಮತ್ತು ಸ್ವಯಂ-ಹಾನಿ ಕಲ್ಪನೆಗಳಂತಹ ಸ್ವಯಂ ಸೋಲಿಸುವ ಆಲೋಚನೆಗಳು
ನಿದ್ರೆ / ಹಸಿವಿನ ಅಡಚಣೆ
ಏಕಾಗ್ರತೆಯ ಕೊರತೆ
ಮೆಮೊರಿ ಕೊರತೆಗಳು
ನಡುಕ
ಚಡಪಡಿಕೆ
ತಜ್ಞರನ್ನು ಯಾವಾಗ ಭೇಟಿಯಾಗಬೇಕು?
ರೋಗಲಕ್ಷಣಗಳು ಸ್ಥಿರವಾಗಿದ್ದರೆ ಮತ್ತು ವ್ಯಕ್ತಿಯ ಜೀವನದಲ್ಲಿ ಸಮಸ್ಯೆಯನ್ನು ಉಂಟುಮಾಡಿದರೆ ತಜ್ಞರ ಸಲಹೆ ಪಡೆಯಬೇಕು.
ಒತ್ತಡವನ್ನು ನಿರ್ವಹಿಸಲು ನಿಮಗೆ ಕಷ್ಟವಾಗಿದ್ದರೆ, ಸ್ವಯಂ-ಆರೈಕೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ನಿಮಗೆ ಕಷ್ಟವಾಗಿದ್ದರೆ ಅಥವಾ ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ನೀವು ಹೊಂದಿದ್ದರೆ ವೃತ್ತಿಪರ ಸಹಾಯವನ್ನು ಪಡೆಯುವುದು ಒಳ್ಳೆಯದು.
ರೋಗಲಕ್ಷಣಗಳು ಮಧ್ಯಮದಿಂದ ತೀವ್ರವಾಗಿದ್ದರೆ, ಮೊದಲು ಮನೋವೈದ್ಯರನ್ನು ಭೇಟಿ ಮಾಡಬೇಕು. ಆ ವ್ಯಕ್ತಿಗೆ ಯಾವುದು ಉತ್ತಮ ಎಂಬುದರ ಕುರಿತು ಪರಿಣಿತರು ಕೇಸ್-ಟು-ಕೇಸ್ ಆಧಾರದ ಮೇಲೆ ನಿರ್ಧರಿಸುತ್ತಾರೆ.
ಕೆಲವೊಮ್ಮೆ ಒಬ್ಬ ವ್ಯಕ್ತಿಗೆ ಔಷಧಿಗಳು ಮತ್ತು ಚಿಕಿತ್ಸೆ ಎರಡರ ಸಂಯೋಜನೆಯ ಅಗತ್ಯವಿರುತ್ತದೆ.
ಆರೋಗ್ಯಕರ ಆಹಾರವನ್ನು ಸೇವಿಸುವುದು
ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳು ಇದು ಉತ್ತಮ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ
ನಿಯಮಿತ ವ್ಯಾಯಾಮ/ಯೋಗ
ಮೊದಲಿನ ಹಾಗೆ ಸಮಯವನ್ನು ಆನಂದಿಸಲು ಸಾಧ್ಯವಾಗದಿದ್ದರೂ ಮೊದಲು ಸಂತೋಷಕರವಾದ ಚಟುವಟಿಕೆಗಳನ್ನು ಮಾಡುತ್ತಿರಿ
ನಿಮ್ಮ ಭಾವನೆಗಳನ್ನು ಅಂಗೀಕರಿಸಿ ಮತ್ತು ಒಪ್ಪಿಕೊಳ್ಳಿ
ಕೆಲಸ ಕಳೆದುಕೊಂಡ ನಂತರ ದುಃಖ, ಕೋಪ ಮತ್ತು ಹತಾಶೆಯಂತಹ ಭಾವನೆಗಳನ್ನು ಅನುಭವಿಸುವುದು ಸಹಜ.
ಸಕ್ರಿಯರಾಗಿರಿ: ದಿನಚರಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಮತ್ತು ವ್ಯಾಯಾಮ, ಹವ್ಯಾಸಗಳು ಅಥವಾ ಸ್ವಯಂಸೇವಕ ಕೆಲಸದಂತಹ ನೀವು ಆನಂದಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೊಡನೆ ಮಾತನಾಡಿ: ಸ್ನೇಹಿತರು, ಕುಟುಂಬದವರೊಂದಿಗೆ ಮಾತನಾಡುವುದು, ನಿಮ್ಮ ಒಂಟಿತನವನ್ನು ದೂರ ಮಾಡುತ್ತದೆ.
ನಿಮ್ಮನ್ನು ಪ್ರತ್ಯೇಕಿಸಿ: ಸಾಮಾಜಿಕ ಚಟುವಟಿಕೆಗಳಿಂದ ಹಿಂದೆ ಸರಿಯುವುದನ್ನು ಮತ್ತು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳುವುದನ್ನು ತಪ್ಪಿಸಿ. ಎಲ್ಲರ ಜತೆ ಬೆರೆಯಿರಿ.
ಗುರಿ ಇರಲಿ: ಉದ್ಯೋಗವನ್ನು ಕಳೆದುಕೊಂಡಾಕ್ಷಣ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದುಕೊಳ್ಳಬೇಡಿ. ನೂರಾರು ಅವಕಾಶಗಳು ನಿಮಗಾಗಿ ಕಾಯುತ್ತಿದೆ ಎಂಬುದು ನೆನಪಿರಲಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ