- Kannada News Photo gallery Most Instagrammable Places | These places in Paris, Istanbul, Turkey and many other countries in the world for best photography
Creative Reels: ಕ್ರಿಯೇಟಿವ್ ಆಗಿ ರೀಲ್ಸ್ ಮಾಡಬೇಕೇ? ಫೋಟೋ ಶೂಟ್ ಮಾಡಲು ಇದು ಸುಂದರ ತಾಣ, ಇಲ್ಲಿದೆ ನೋಡಿ ಅದ್ಭುತ ಜಗತ್ತು
ಈ ಕೆಳಗಿನ ಸುಂದರ ತಾಣಗಳಿಗೆ ಭೇಟಿ ನೀಡಿ. ನಿಮ್ಮ ಪ್ರೊಫೈಲ್ ಫೋಟೋಗಳನ್ನು ಕ್ಲಿಕ್ಕಿಸಲು ಸೂಕ್ತ ಸ್ಥಳಗಳ ಕುರಿತು ಮಾಹಿತಿ ಇಲ್ಲಿದೆ.
Updated on:Feb 03, 2023 | 5:42 PM

ಈಗ ಪರಿಚಯವಾದ ಪ್ರಾರಂಭದಲ್ಲಿಯೇ ಕೇಳುವುದೇ ಇನ್ಸ್ಟಾಗ್ರಾಮ್ ಐಡಿ. ಅಷ್ಟರ ಮಟ್ಟಿಗೆ ಇನ್ಸ್ಟಾಗ್ರಾಮ್ ಕ್ರೇಜ್ ಕ್ರಿಯೇಟ್ ಮಾಡಿದೆ. ಜೊತೆಗೆ ರೀಲ್ಸ್, ಫಾಲೋವರ್ಸ್, ಪೋಸ್ಟ್ಗಳನ್ನು ಹಾಕುವುದರಲ್ಲಿಯೇ ಬ್ಯೂಸಿಯಾಗಿ ಬಿಟ್ಟಿರುತ್ತಾರೆ. ಆದ್ದರಿಂದ ಈ ಕೆಳಗಿನ ಸುಂದರ ತಾಣಗಳಿಗೆ ಭೇಟಿ ನೀಡಿ. ನಿಮ್ಮ ಪ್ರೊಫೈಲ್ ಫೋಟೋಗಳನ್ನು ಕ್ಲಿಕ್ಕಿಸಲು ಸೂಕ್ತ ಸ್ಥಳಗಳು ಇಲ್ಲಿವೆ.

ಪ್ಯಾರಿಸ್, ಫ್ರಾನ್ಸ್: ಕೋಬ್ಲೆಸ್ಟೋನ್ ಬೀದಿಗಳ ಅದ್ಭುತ ನೋಟಗಳು, ಐಫೆಲ್ ಟವರ್, ನೊಟ್ರೆ ಡೇಮ್ ಮತ್ತು ಲೌವ್ರೆ ತಾಣಗಳು ನಿಮ್ಮ ಇನ್ಸ್ಟಾಗ್ರಾಮ್ನ ಫೋಟೋ ಹಾಗೂ ರೀಲ್ಸ್ ಮಾಡಲು ಸೂಕ್ತ ಸ್ಥಳವಾಗಿದೆ.

ಲಂಡನ್, ಇಂಗ್ಲೆಂಡ್: ರಾಜಧಾನಿಯು ಇನ್ಸ್ಟಾಗ್ರಾಮ್ ಶಾಟ್‌ಗಳಿಗೆ ಖಂಡಿತವಾಗಿಯೂ ಸೂಕ್ತ ಸ್ಥಳವಾಗಿದೆ. ನಗರದ ಸಾಂಪ್ರದಾಯಿಕ ವಾಸ್ತುಶಿಲ್ಪ, ಡಬಲ್ ಡೆಕ್ಕರ್ ಬಸ್‌ಗಳು, ಲಂಡನ್ ಐ ಮತ್ತು ಸುಂದರವಾದ ಸ್ಕೈಲೈನ್ಗಳಲ್ಲಿ ನೀವು ಕಳೆದ ಕ್ಷಣಗಳನ್ನು ವಿಡಿಯೋ ಮೂಲಕ ಸೆರೆಹಿಡಿದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಬಹುದು.

ಇಸ್ತಾಂಬುಲ್, ಟರ್ಕಿ: ಇಸ್ತಾಂಬುಲ್ ತನ್ನ ಶ್ರೀಮಂತ ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಅಲ್ಲಿನ ಆಹಾರಗಳಿಂದಲೇ ಹೆಸರುವಾಸಿಯಾಗಿದೆ. ಇಲ್ಲಿನ ನೀಲಿ ಮಸೀದಿ, ವರ್ಣರಂಜಿತ ಬೀದಿಗಳಿಂದ ನೀವಿಲ್ಲಿ ಸುಂದರವಾದ ಫೋಟೋ ತೆಗೆಯಬಹುದಾಗಿದೆ.

ಬಾಲಿ, ಇಂಡೋನೇಷ್ಯಾ: ಸ್ವರ್ಗದಂತೆ ಹಚ್ಚ ಹಸಿರಿನಿಂದ ಕೂಡಿರುವ ಈ ತಾಣವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಟ್ಟದ ಜನಪ್ರಿಯತೆಯನ್ನು ಗಳಿಸಿದೆ. ಪ್ರಾಚೀನ ಕಡಲತೀರಗಳು, ಹಚ್ಚ ಹಸಿರಿನ ಪರಿಸರ ಮತ್ತು ಸ್ವಚ್ಚ ಜಲಪಾತಗಳನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಭೂತಾನ್: ಹಿಮದಿಂದ ಆವೃತವಾದ ಪರ್ವತಗಳೊಂದಿಗೆ ಹಚ್ಚ ಹಸಿರಿನ ಕಲ್ಪನೆಯು ನಿಮ್ಮನ್ನು ರೋಮಾಂಚನಗೊಳಿಸುವ ಸ್ಥಳ ಭೂತಾನ್. ಇಲ್ಲಿನ ಪರ್ವತಗಳು, ಕಣಿವೆಗಳು ಹಾಗೂ ಹಸಿರನ್ನು ಒಳಗೊಂಡಿರುವ ರಮಣೀಯ ಭೂದೃಶ್ಯಗಳು ನಿಮ್ಮನ್ನು ಬೆರಗುಗೊಳಿಸುತ್ತದೆ.

ಫುಕೆಟ್, ಥೈಲ್ಯಾಂಡ್: ಫುಕೆಟ್ ದ್ವೀಪವು ಪ್ರಶಾಂತವಾದ ಬಿಳಿ ಮರಳಿನ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಕಡಲ ತೀರದಲ್ಲಿ ಸುಂದರವಾದ ಕ್ಷಣಗಳನ್ನು ಕಳೆಯುವುದರ ಜೊತೆಗೆ ಫೋಟೋ, ವಿಡಿಯೋಗಳನ್ನು ಕೂಡ ನೀವಿಲ್ಲಿ ಸೆರೆಹಿಡಿಯಬಹುದು.
Published On - 5:40 pm, Fri, 3 February 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



