ಲೆಜೆಂಡರಿ ನಿರ್ದೇಶಕ, ಕಲಾತಪಸ್ವಿ ಕೆ. ವಿಶ್ವನಾಥ್ ಅವರಿಗೆ ಶಿಷ್ಯ ಚಿರಂಜೀವಿ ಅವರು ಗೌರವಪೂರ್ಣ ಅಂತಿಮ ನಮನ ಸಲ್ಲಿಸಿದರು.
ಕಲಾತಪಸ್ವಿ ಕೆ. ವಿಶ್ವನಾಥ್ ಅವರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಅತ್ಯಂತ ಪ್ರೀತಿಪಾತ್ರರು.
ಶಿಷ್ಯ, ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಅಕ್ಷರಶಃ ತಿದ್ದಿತೀಡಿದವರು ಲೆಜೆಂಡರಿ ನಿರ್ದೇಶಕ ಕೆ. ವಿಶ್ವನಾಥ್
ಮತ್ತೊಬ್ಬ ಸೂಪರ್ಸ್ಟಾರ್ ನಟ ಕಮಲ್ ಹಾಸನ್ ಅವರನ್ನು ಚಿತ್ರರಂಗದಲ್ಲಿ ಎತ್ತರೆತ್ತರಕ್ಕೆ ಕೊಂಡೊಯ್ದವರು ಲೆಜೆಂಡರಿ ನಿರ್ದೇಶಕ ಕೆ. ವಿಶ್ವನಾಥ್
ಪರಿಪೂರ್ಣ ಜೀವನ ನಡೆಸಿ, ತಮ್ಮ 92ನೇ ವಯಸ್ಸಿನಲ್ಲಿ ಕೆ. ವಿಶ್ವನಾಥ್ ನಿಧನರಾದ ಸುದ್ದಿ ತಿಳಿದು ಸಿನಿಮಾ, ರಾಜಕೀಯ ಸೇರಿದಂತೆ ಇತರೆ ಅನೇಕ ರಂಗಗಳಲ್ಲಿ ಪ್ರಮುಖರು ಸಂತಾಪ ಸೂಚಿಸಿದರು.
ತೆಲುಗು ಚಲನಚಿತ್ರ ರಂಗಕ್ಕೆ ಇಂದು ತೀವ್ರ ವಿಷಾದದ ದಿನ. ಲೆಜೆಂಡರಿ ನಿರ್ದೇಶಕ, ಕಲಾತಪಸ್ವಿ ಕೆ. ವಿಶ್ವನಾಥ್ (92) ಅವರು ವಿಧಿವಶರಾಗಿದ್ದಾರೆ. ಗುರುವಾರ ನಡು ರಾತ್ರಿ (ಫೆಬ್ರವರಿ 2) ಅವರು ಕೊನೆಯುಸಿರೆಳೆದರು. ಅವರ ನಿರ್ದೇಶನದಲ್ಲಿ ಬಂದಿರುವ ತೆಲುಗು ಚಲನಚಿತ್ರ ರಂಗದ ಆಣಿಮುತ್ಯಗಳಲ್ಲಿ ಒಂದು ‘ಶಂಕರಾಭರಣಂ (1980)’. ಸಿನಿಪ್ರಿಯರಿಗೆ ಅಂತಹ ಅದ್ಭುತ ಚಿತ್ರ ನೀಡಿದ ವಿಶ್ವನಾಥರು ಆ ಸಿನಿಮಾ ಮೊದಲ ಬಾರಿಗೆ ಬಿಡುಗಡೆಯಾದ ದಿನವೇ (ಫೆಬ್ರವರಿ 2) ಅವರು ಶಿವೈಕ್ಯರಾದರು.
ಮೇರು ನಟ ಕಮಲ್ ಹಾಸನ್ ಮತ್ತು ಲೆಜೆಂಡರಿ ನಿರ್ದೇಶಕ ವಿಶ್ವನಾಥ್ ಅವರ ನಡುವಣ ಗುರು-ಶಿಷ್ಯ ಬಾಂಧವ್ಯ ಅಪರೂಪದ್ದು.
1965ರಲ್ಲಿ ಅಕ್ಕೀನಿ ನಾಗೇಶ್ವರಾವು ಕಥಾನಾಯಕನಾಗಿ ನಟಿಸಿದ ಆತ್ಮಗೌರವಂ ಸಿನಿಮಾದೊಂದಿಗೆ ನಿರ್ದೇಶಕರಾಗಿ ರಂಗಕ್ಕೆ ಬಂದ ಕೆ. ವಿಶ್ವನಾಥ್ ಹಲವಾರು ಅತ್ಯದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಿರಿಸಿರಿ ಮುವ್ವ, ಶಂಕರಾಭರಣಂ, ಸಪ್ತಪದಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ಸಿರಿವೆನ್ನೆಲ, ಶ್ರುತಿಲಯಲು, ಸ್ವಯಂಕೃಷಿ, ಸ್ವರ್ಣಕಮಲಂ, ಸೂತ್ರಧಾರರು, ಸ್ವಾತಿಕಿರಣಂ ಹೀಗೆ ಹಲವು ಕ್ಲಾಸಿಕಲ್ ಚಿತ್ರಗಳನ್ನು ಅವರು ಸಿನಿ ಪ್ರೇಕ್ಷಕರಿಗೆ ನೀಡಿದ್ದಾರೆ.
ಕೇವಲ ನಿರ್ದೇಶಕನಾಗಿಯಷ್ಟೇ ಅಲ್ಲ, ನಟನಾಗಿಯೂ ಕೂಡ ತಮ್ಮ ಛಾಪು ಒತ್ತಿದವರು ವಿಶ್ವನಾಥ್. ಶುಭಸಂಕಲ್ಪ ಸಿನಿಮಾದೊಂದಿಗೆ ಪ್ರಥಮ ಬಾರಿಗೆ ಬೆಳ್ಳಿತೆರೆ ಮೇಲೆ ಮೂಡಿಬಂದರು. ವಜ್ರಂ, ಕಲಿಸುಂದಾಂರಾ, ನರಸಿಂಹನಾಯ್ಡು, ಸೀಮಸಿಂಹಂ, ನುವ್ವು ಲೇಕ ನೇನು ಲೇನು, ಸಂತೋಷಂ, ಲಾಹಿರಿ ಲಾಹಿರಿ ಲಾಹಿರಿಲೋ, ಠಾಗೂರ್ ಮುಂತಾದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳೊಂದಿಗೆ ಪ್ರೇಕ್ಷಕರ ಎದೆಯಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
‘ಆತ್ಮ ಗೌರವಂ’ ಸಿನಿಮಾದೊಂದಿಗೆ ನಿರ್ದೇಶಕರಾಗಿ ಪರಿಚಿತರಾದ ವಿಶ್ವನಾಥ್... ಅತ್ಯುತ್ತಮ ಸಿನಿಮಾ ಎಂದು ಆ ಮೂವಿಗೆ ನಂದಿ ಪ್ರಶಸ್ತಿ ದೊರೆಕಿಸಿ ಕೊಟ್ಟವರು. ಸಿನಿಮಾ ಕಥೆಗೂ ನಂದಿ ಪ್ರಶಸ್ತಿ ಲಭಿಸಿದೆ. ಆ ನಂತರ ವಿಶ್ವನಾಥ್ ನಿರ್ದೇಶನದ ‘ಚೆಲ್ಲೆಲಿ ಕಾಪುರಂ’, ‘ಶಾರದಾ’, ‘ಓ ಸೀತ ಕಥೆ’, ‘ಜೀವನ ಜ್ಯೋತಿ’ ಚಿತ್ರಗಳಿಗೂ ನಂದಿ ಪ್ರಶಸ್ತಿ ಲಭಿಸಿವೆ.
ವಿಶ್ವನಾಥ್ ನಿರ್ದೇಶನದ ಅದ್ಭುತ ಸಿನಿಮಾಗಳಲ್ಲಿ, ಭಾರತೀಯ ಚಲನಚಿತ್ರ ರಂಗದ ಆಣಿಮುತ್ಯಗಳಲ್ಲಿ ‘ಶಂಕರಾಭರಣಂ’ ಒಂದು. ಈ ಸಿನಿಮಾಗೆ ಅತ್ಯುತ್ತಮ ಸಿನಿಮಾವಾಗಿ ನಂದಿ ಪ್ರಶಸ್ತಿ ಬಂದಿದ್ದಲ್ಲದೆ.. ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.
ಬೆಸ್ಟ್ ಪಾಪುಲರ್ ಫಿಲ್ಮ್ ಫಾರ್ ಪ್ರೊವೈಡಿಂಗ್ ಹೋಲ್ ಸ್ಯಾಮ್ಟೈನ್ಮೆಂಟ್’ ಪದವಿ ನ್ಯಾಷನಲ್ ಪ್ರಶಸ್ತಿಯನ್ನು ಪಡೆದುಕೊಂಡಿತು ಶಂಕರಾಭರಣಂ. ‘ಸಪ್ತಪದಿ’, ‘ಸ್ವಾತಿಮುತ್ಯಂ’, ‘ಸೂತ್ರಧಾರಿಗಳು’, ‘ಸ್ವರಾಭಿಷೇಕಂ’ ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.
ಚಿರಂಜೀವಿ ತಮ್ಮ ಪವನ್ ಕಲ್ಯಾಣ್ ಅವರು ಲೆಜೆಂಡರಿ ನಿರ್ದೇಶಕ ವಿಶ್ವನಾಥ್ ಅವರನ್ನು ಸನ್ಮಾನಿಸಿರುವುದು
ಮೇರು ನಟ ಚಿರಂಜೀವಿ ಮತ್ತು ಲೆಜೆಂಡರಿ ನಿರ್ದೇಶಕ ವಿಶ್ವನಾಥ್ ಅವರ ನಡುವಣ ಗುರು-ಶಿಷ್ಯ ಬಾಂಧವ್ಯ ಅಪರೂಪದ್ದು.
ಮೇರು ನಟರಾದ ಕಮಲ್ ಹಾಸನ್ ಮತ್ತು ರಾಧಿಕಾ ಅವರ ತಾರಾಗಣದಲ್ಲಿ ಸ್ವಾತಿಮುತ್ಯಂ ಅಂತಹ ಅದ್ಭುತ ಸಿನಿಮಾ ನೀಡಿದ ಲೆಜೆಂಡರಿ ನಿರ್ದೇಶಕ ವಿಶ್ವನಾಥ್
ಸೋಮಯಾಜುಲು ನಟನೆಯಲ್ಲಿ ಕೆ ವಿಶ್ವನಾಥ್ ಅವರ ನಿರ್ದೇಶನದಲ್ಲಿ ಬಂದಿರುವ ತೆಲುಗು ಚಲನಚಿತ್ರ ರಂಗದ ಆಣಿಮುತ್ಯಗಳಲ್ಲಿ ಒಂದು ‘ಶಂಕರಾಭರಣಂ (1980)’
ಇನ್ನು ಪೊಟ್ಟಿ ಶ್ರೀ ತೆಲುಗು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಸಹ ಸ್ವೀಕರಿಸಿದರು ವಿಶ್ವನಾಥ್.
ಸಿನಿ ರಂಗಕ್ಕೆ ವಿಶ್ವನಾಥ್ ಅವರು ಮಾಡಿದ ಅಪರೂಪದ, ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ಸರ್ಕಾರ 1992 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಸಿನಿಮಾರಂಗದಲ್ಲಿ ಅವರು ಸಲ್ಲಿಸಿದ ಶ್ರಮಕ್ಕೆ 2016 ರಲ್ಲಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದರು.
Published On - 7:23 pm, Fri, 3 February 23